ತುಮಕೂರು:
ದೇಶದಲ್ಲಿ ಸಮಾನತೆ, ಭಾತೃತ್ವದ ಚಿಂತನೆ ನೀಡದೆ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಭಾವನಾತ್ಮಕ ವಿಚಾರಗಳೇ ಮುಖ್ಯವಾಗಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್, ಬಾಬುಜಗಜೀವನ್ ರಾಂ ಜಯಂತಿಯಲ್ಲಿ ಅವರು ಮಾತನಾಡಿದ ಅವರು, ಸಂವಿಧಾನ ರಚನೆಯ ವೇಳೆಯಲ್ಲಿಯೇ ಸಮಾನತೆ, ಭಾತೃತ್ವವನ್ನು ಒಪ್ಪಿಕೊಂಡಿದ್ದೆವು, ಆದರೆ ಇಂದು ನಾವು ಬೇರೆ ನೀವು ಬೇರೆ ಎಂದು ಹೇಳಿದರೆ ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಅಂದರೆ ಎಸ್ಸಿಎಸ್ಟಿ ಎನ್ನುವಂತಹ ಮನೋಭಾವನೆ ಜನರಲ್ಲಿದೆ, ಅಂಬೇಡ್ಕರ್ ಭಾರತ ದೇಶದಲ್ಲಿರುವ ಪ್ರತಿಯೊಂದು ಜೀವಿಗೂ ಸಂವಿಧಾನವನ್ನು ನೀಡಿದ್ದಾರೆ, ದೇಶದ ಆರ್ಥಿಕತೆ ಇಂದು ಸದೃಢವಾಗಿದೆ ಅದಕ್ಕೆ ಕಾರಣ ಅಂಬೇಡ್ಕರ್ ಅವರು, ಕರೆನ್ಸಿಯೇ ಇಲ್ಲದ ದೇಶಕ್ಕೆ ಸಾಮಾನ್ಯ ಕರೆನ್ಸಿಯನ್ನು ನೀಡಿ, ಆರ್ ಬಿಐ ಸ್ಥಾಪಿಸಲು ಅವರ ಮುಂದಾಲೋಚನೆಯೇ ಕಾರಣ ಎಂದರು.
ಅಂಬೇಡ್ಕರ್ ಎಂದರೆ ಬರೀ ಮೀಸಲಾತಿ ಎನ್ನುತ್ತಿದ್ದಾರೆ,ಈ ದೇಶಕ್ಕಾಗಿ ಅಂಬೇಡ್ಕರ್ ನೀಡಿರುವ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಪ್ರಪಂಚದ ಯಾವ ದೇಶದಲ್ಲಿ ಇಲ್ಲದಷ್ಟು ಸಮಸ್ಯೆಗಳು ಇರುವ ಭಾರತದಲ್ಲಿ ಎಲ್ಲದಕ್ಕೂ ಉತ್ತರ ನೀಡುವ ಶಕ್ತಿ ಇರುವುದು ಸಂವಿಧಾನಕ್ಕೆ ಎನ್ನುವುದನ್ನು ಭಾರತದ ಜನತೆ ಅರಿಯಬೇಕು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ಆಡಳಿತ ಮಾಡಬೇಕು,ಆದರೆ ರಾಜ್ಯದಲ್ಲಿನ ಭ್ರμÁ್ಟಚಾರದ ಬಗ್ಗೆ ಕ್ರಮ ತೆಗೆದುಕೊಳ್ಳದ ಪ್ರಧಾನಿ, ಸಾಮಾನ್ಯರ ಪತ್ರಗಳನ್ನು ಟ್ವೀಟ್ ಮಾಡಿ ಪ್ರಚಾರ ಪಡೆಯುತ್ತಾರೆ, ಭ್ರμÁ್ಟಚಾರದ ಬಗ್ಗೆ ತನಿಖೆ ಮಾಡಿಸಲು ಅಗಲ್ಲ ಎಂದರೆ ಎಂತಹ ಸರ್ಕಾರ ಆಡಳಿತದಲ್ಲಿ ಎನ್ನುವುದನ್ನು ಅರಿಯಬೇಕಿದೆ. ಮುಂದಿನ ಬಾರಿ ಬಿಜೆಪಿ ಸರಕಾರ ಆಡಳಿತಕ್ಕೆ ಬರದಂತೆ ತಡೆಯಬೇಕಾದ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷಕ್ಕೆ ಇದೆ, ಕಾಂಗ್ರೆಸ್ ಕಾರ್ಯಕರ್ತರು ಸಂಕಲ್ಪ ಮಾಡಿ ಬಿಜೆಪಿ ವಿರುದ್ಧ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಕರೆ ನೀಡಿದರು.
ಮಾಜಿ ಶಾಸಕ ಎಸ್.ಷಪಿಅಹಮದ್ ಮಾತನಾಡಿ, ಸಮಾನತೆ. ಸಹೋದರತೆ ಈ ದೇಶದ ಜೀವಾಳ. ಅದರೆ ಅದನ್ನು ಹಾಳು ಮಾಡುವ ಪ್ರಕ್ರಿಯೆ ಗಳು ಬಹಳ ಸಕ್ರಿಯವಾಗಿದ್ದು,ಇವುಗಳ ವಿರುದ್ದ ನಾವೆಲ್ಲರೂ ಒಗ್ಗೂಡಬೇಕಿದೆ ಎಂದರು.
ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಭಾರತದ ಎಲ್ಲಾ ವರ್ಗಗಳ ಪರವಾಗಿ ಕೆಲಸ ಮಾಡಿದ್ದಾರೆ.ಅರ್ಥಿಕತಜ್ಞರಾಗಿ,ಅವರು ಪ್ರತಿಪಾದಿಸಿದ ನಿಯಮಗಳ ಫಲವಾಗಿ ಆರ್.ಬಿ.ಐ. ಸ್ಥಾಪನೆಯಾಯಿತು. ಸಾಮಾಜಿಕ, ಶೈಕ್ಷಿಕ ಅಭಿವೃದ್ಧಿ ಗೆ ಶ್ರಮಿಸಿದವರು ಅಂಬೇಡ್ಕರ್. ಅಂತಹ ನಾಯಕರನ್ನು ಒಂದು ಜಾತಿಗೆ ಸಿಮಿತ ಮಾಡುವುದು ಸರಿಯಲ್ಲವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ವಹಿಸಿದ್ದರು.

(Visited 13 times, 1 visits today)