ತುಮಕೂರು:


ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸಮರ್ಥರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅರಗ ಜ್ಞಾನೇಂದ್ರ ಅವರು ಗೃಹ ಮಂತ್ರಿಯಾದ ನಂತರ ಹಿಂದು, ಮುಸ್ಲಿಂ ಎನ್ನದೆ ಸಾಲು ಸಾಲು ಹೆಣಗಳು ಉರುಳುತ್ತಿವೆ.
ಅದರಲ್ಲಿಯೂ ಕುಟುಂಬಕ್ಕೆ ಆಧಾರಸ್ತಂಬವಾಗಿದ್ದ ಹದಿ ಹರೆಯದ ಯುವಕರು ಕೊಲೆಗೀಡಾಡುತ್ತಿರುವುದು ತುಂಬಾ ಆತಂಕಕಾರಿ ವಿಚಾರವಾಗಿದೆ.
ಈ ಹಿಂದಿನ ಘಟನೆಗಳಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದರೆ, ಇಂದು ಬೆಳ್ಳಾರದಲ್ಲಿ ಎರಡು ಹೆಣಗಳು ಬೀಳುತ್ತಿರಲಿಲ್ಲ.
ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಜವಾಬ್ದಾರಿ ನಿಭಾಯಿಸಲು ಅಸಮರ್ಥರಾಗಿದ್ದಾರೆ ಎಂಬುದನ್ನು ಈ ಎರಡು ಘಟನೆಗಳು ಮತ್ತೆ ಸಾಬೀತು ಪಡಿಸಿವೆ.ಮÀುತ್ತಷ್ಟು ಯುವಕರ ಹತ್ಯೆ ಆಗುವುದಕ್ಕೂ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ವೆಲ್ಪೇರ್ ಪಾರ್ಟಿ ಅಪ್ ಇಂಡಿಯಾದ ಒತ್ತಾಯವಾಗಿದೆ ಎಂದು ತಾಜುದ್ದೀನ್ ಷರೀಫ್ ತಿಳಿಸಿದ್ದಾರೆ.
ಯುವಕರಿಗೆ ಪ್ರಚೋದನಕಾರಿ ಭಾಷಣದ ಮೂಲಕ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ.ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

(Visited 4 times, 1 visits today)