ಗುಬ್ಬಿ:
ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಜೋಡಿ ಹತ್ಯೆಯ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಹಾಗೂ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಈ ವಿಚಾರದಲ್ಲಿ ಇದುವರೆಗೂ ತುಟಿ ಬಿಚ್ಚಿಲ್ಲ ಅವರಿಗೆ ದಲಿತರ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ ಹಾಗಾಗಿ ಅವರಿಬ್ಬರು ಕೂಡ ರಾಜಿನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು ಈ ಘಟನೆ ಮಾಡಿರುವಂತಹ ನಂದೀಶ್ ಹಾಗೂ ರೌಡಿ ತಂಡವನ್ನು ಕೂಡಲೆ ಬಂಧಿಸಬೇಕು ಇದು ಕೇವಲ ಆಕಸ್ಮಿಕವಾಗಿ ನಡೆದಿರುವ ಘಟನೆಯಲ್ಲ ಮಾಡಬೇಕು ಎಂಬ ಸಂಚಿನಿಂದಲೇ ಮಾಡಲಾಗಿದೆ ಈ ಘಟನೆ ಹೊಂದಿರುವಂತಹ ನಂದೀಶ್ ಹಾಗೂ ಪಟಾಲಂ ಅವರ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ತುಮಕೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಉಸ್ತುವಾರಿ ಹುಲಿಕುಂಟೆ ರಮೇಶ್ ಮಾತನಾಡಿ ಆ ಕುಟುಂಬಗಳಿಗೆ 25 ಲಕ್ಷ ಹಣ ಸರಕಾರಿ ಉದ್ಯೋಗ ಹಾಗೂ 5 ಎಕರೆ ಭೂಮಿಯನ್ನು ನೀಡಬೇಕು ಹಾಗೂ ಈ ಕೃತ್ಯವೆಸಗಿದ ಪ್ರತಿಯೊಬ್ಬರನ್ನು ಕೂಡ ಕಾನೂನು ಪ್ರಕಾರ ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ನಿಟ್ಟೂರು ರಂಗಸ್ವಾಮಿ ಮಾತನಾಡಿ ದಲಿತರ ಮೇಲೆ ನಿರಂತರವಾಗಿ
ಹಲ್ಲೆ ನಡೆಯುತ್ತಲೇ ಇವೆ ಇದು ಹೀಗೆ ಮುಂದುವರಿದಲ್ಲಿ ಹುಟ್ಟಿನಿಂದ ಹಿಡಿದು ಜಿಲ್ಲಾಧಿಕಾರಿಯನ್ನು ಕಾಲ್ನಡಿಗೆಯಲ್ಲಿ ನಡೆದು ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿ ಮೃತರಾದ ವ್ಯಕ್ತಿಗಳಿಗೆ ಸರಕಾರ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು .
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಪ್ಪ,ಶಂಕರ್,ಬಸವರಾಜು, ನರಸೀಯಪ್ಪ, ಪುಟ್ಟರಾಜು, ನಟರಾಜು, ರಾಜಪ್ಪ, ರಂಗರಾಮು, ವೇಣು ಸೇರಿದಂತೆ ದಲಿತ ಸಂಘ?ರ್À ಸಮಿತಿಯ ಸದಸ್ಯರುಗಳು ಹಾಜರಿದ್ದರು.

(Visited 7 times, 1 visits today)