ಮಧುಗಿರಿ:

      ಪಕ್ಷದ ಪದಾಧಿಕಾರಿಗಳು ಕೇವಲ ವಿಸಿಟಿಂಗ್ ಕಾರ್ಡ್ ಗೆ ಸೀಮಿತವಾಗಿರದೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪುವಂತೆ ಮಾಡಿ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗ ಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಕರೆ ನೀಡಿದರು.

     ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಲಯದಲ್ಲಿ ಬುಧವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್ ಬಸವರಾಜುರವನ್ನು ಬಹುಮತದಿಂದ ಇಲ್ಲಿನ ಮತದಾರರು ಆಯ್ಕೆ ಮಾಡಿದಂತೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೂ ತಲುಪಿಸಿ ಜನರನ್ನು ಸಂಘಟನೆ ಮಾಡಬೇಕಾದ ಜವಾಬ್ದಾರಿ ಹೊಸ ಕಾರ್ಯಕರ್ತರದ್ದಾಗಿದೆ. ಪಕ್ಷ ಸಂಘಟನೆ ಮಾಡುವಾಗ ಹಿರಿಯ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

      ಇದೇ ಸಂಧರ್ಭದಲ್ಲಿ ತಾಲ್ಲೂಕಿನ ಘಟಕದ ವಿವಿಧ ಹುದ್ದೆಗಳಿಗೆ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

      ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಮಂಜುನಾಥ್, ಹೆಬ್ಬಾಕ ರವಿ, ಸಂಪಿಗೆ ಶ್ರೀಧರ್, ಉಸ್ತುವಾರಿ ಲಕ್ಷ್ಮೀಶ್, ತಾಲ್ಲೂಕು ಮಂಡಳಾಧ್ಯಕ್ಷ ಪಿ.ಎನ್.ನರಸಿಂಹಮೂರ್ತಿ, ಮುಖಂಡರುಗಳಾದ ಬಸವರಾಜು (ಅಯ್ಯ) ಎಸ್.ಟಿ.ಡಿ.ರಾಮಚಂದ್ರಪ್ಪ, ಮಾಜಿ ಪುರಸಭಾ ಸದಸ್ಯ ಆದಿಶೇಷ ಗುಪ್ತ, ನಾಗೇಂದ್ರ, ಟೈಲರ್ ನಾಗರಾಜು, ಸುರೇಶ್, ತಿಮ್ಮಣ್ಣ, ಶ್ರೀಧರ್ ಹಾಗೂ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

(Visited 10 times, 1 visits today)