ತುಮಕೂರು:

      ತುಮಕೂರು ನಗರ ಬಿಜೆಪಿ ವತಿಯಿಂದ ನಮ್ಮ ಬೂತ್ ನನ್ನ ಜವಾಬ್ದಾರಿ ಎಂಬ ವಿಶಿಷ್ಟ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

      ತುಮಕೂರು ನಗರದ 24ನೇ ವಾರ್ಡ್ ಉಪ್ಪಾರಹಳ್ಳಿಯಲ್ಲಿ ಪ್ರತಿ ಬೂತ್ ಅಧ್ಯಕ್ಷರ ಮನೆಯ ಮುಂಭಾಗ ಪಕ್ಷದ ಜವಾಬ್ದಾರಿಯ ನಾಮಫಲಕ ಹಾಕುವ ಮೂಲಕ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‍ರವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂರ್ಭದಲ್ಲಿ 24ನೇ ವಾರ್ಡ್‍ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಭಾರತೀಯ ಜನತಾ ಪಾರ್ಟಿಯ ಮೂಲ ಶಕ್ತಿ ಇರುವುದು, ಬೂತ್ ಮಟ್ಟದಲ್ಲಿ. ಬೂತ್ ಮಟ್ಟದಲ್ಲಿರುವ ಬಡವರು, ಮಹಿಳೆಯರು, ದೀನದಲಿತರು, ಅಶಕ್ತರ ಅಭ್ಯುದಯಕ್ಕೆ ಸರ್ಕಾರದಿಂದ ಬರುವ ಯೋಜನೆಗಳನ್ನು ಅವರಿಗೆ ತಲುಪಿಸುವ ಮೂಲಕ ಹಾಗೂ ಕೇಂದ್ರ & ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದರು. ಅಲ್ಲದೇ ಕರೋನ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಪ್ರತಿ ಬೂತ್‍ನಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿದ ಸೇವಾ ಕಾರ್ಯವನ್ನು ಈ ಸಂದರ್ಭದಲ್ಲಿ ಶ್ಲಾಘೀಸಿದರು.

       ತುಮಕೂರು ನಗರ ಅಧ್ಯಕ್ಷರಾದ ಹನುಮಂತರಾಜುರವರು ಮಾತನಾಡಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷದ ಒಂದು ಬೂತ್ ಅಧ್ಯಕ್ಷ ಎಂದರೆ ಪಕ್ಷದ ಆಧಾರ ಸ್ತಂಭವಿದ್ದಂತೆ ಬಿಜೆಪಿಯು ಇಟ್ಟು ಎತ್ತರಕ್ಕೆ ಬೆಳೆಯಲು ಶ್ಯಾಂಪ್ರಸಾದ್ ಮುಖರ್ಜಿ ದೀನ್‍ದಯಾಳ್‍ಉಪಾಧ್ಯ, ಅಟಲ್‍ಬಿಹಾರಿವಾಜಪೇಯಿ,
ಆಡ್ವಾಣಿ ಅಂತಹ ಮಹಾನ್ ನಾಯಕರುಗಳು ಹಾಕಿ ಕೊಟ್ಟ ಸಧೃಡವಾದ ಸೈದ್ದಾಂತಿ ವಿಚಾರ ಧಾರೆಗಳು ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಹ ತಾನು ಬಿಜೆಪಿ ಕಾರ್ಯಕರ್ತ ಎಂಬ ಹೆಮ್ಮೆ ಇದೆ. ಕೇಂದ್ರ ಮತ್ತು ರಾಜ್ಯ ದಲ್ಲಿ ಬಿಜೆಪಿ ಸರ್ಕಾರವಿದ್ದು ಸರ್ಕಾರದಿಂದ ಬರುವ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತದಾರರನ್ನು ಕಾರ್ಯಕರ್ತನಾಗಿ ಪರಿವರ್ತಿಸಿ ತುಮಕೂರು ನಗರದಲ್ಲಿ ಪಕ್ಷವನ್ನು ಮತ್ತಷ್ಟು ಸಧೃಢ ಗೊಳಿಸೋಣ.

     ಮುಂದಿನ 15ರಿಂದ 20ದಿನಗಳಲ್ಲಿ ತುಮಕೂರುನಗರದ 254 ಬೂತ್‍ಗಳಲ್ಲಿ ಈ ಅಭಿಯಾನವನ್ನು ಪೂರ್ಣಗೊಳಿಸುವ ಆಶಯವನ್ನು ವ್ಯಕ್ತಪಡಿಸಿ ಕೇವಲ ಚುನಾವಣೆ ಮಾಡುವುದಷ್ಟೆಲ್ಲ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಅಗತ್ಯ ಅಭಿವೃದ್ಧಿ ಕಾರ್ಯವನ್ನು ಮಾಡುವುದೂ ಕೂಡ ಒಂದು ಬೂತ್ ಸಮಿತಿಯ ಜವಾಬ್ದಾರಿಯಾಗಿರುತ್ತದೆ ಎಂದರು. 24ನೇ ವಾರ್ಡಿನ ಎಲ್ಲಾ 9 ಬೂತ್‍ಗಳಿಗೆ ಬೂತ್ ಅಧ್ಯಕ್ಷರ ನಾಮಫಲಕವನ್ನು ಅಳವಡಿಸಲಾಯಿತು. ಈ ಅಭಿಯಾನದಲ್ಲಿ ಆಸ್ರಯ ಸಮಿತಿ ಸದಸ್ಯರಾದ ಗಿರೀಶ್, ವಾರ್ಡ್ ಅಧ್ಯಕ್ಷರಾದ ಪ್ರಸಾದ್, ರೇವಣ್ಣ, ಸಿದ್ದಪ್ಪ ಮುಖಂಡರಾದ ಸಿದ್ದರಾಜು ಗೌಡ, ಅನಿಲ್, ಮಧು, ಮಂಜುನಾಥ, ಕುಮಾರ್, ರಾಮಣ್ಣ, ಪ್ರೇಮಲತ, ಮೈಕ್ ಪ್ರಕಾಶ್, ಶಂಕರ್, ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. 

(Visited 48 times, 1 visits today)