ತುಮಕೂರು:


ರಾಜಸ್ಥಾನದ ಉದಯ್‍ಪುರದ ಟೈಲರ್ ವೃತ್ತಿಯ ಕನ್ಹಯ್ಯಲಾಲ್‍ರವರನ್ನು ಮತಾಂಧ, ಜಿಹಾದಿ ಮಾನಸಿಕತೆಯನ್ನು ಹೊಂದಿದ್ದವರು ಭೀಕರ ಹತ್ಯೆ ಮಾಡಿದ್ದನ್ನ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಉಗ್ರವಾಗಿ ಖಂಡಿಸಿದ್ದಾರೆ.
ಇವರು ಇಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜಸ್ಥಾನದ ಕಾಂಗ್ರೆಸ್ ಆಡಳಿತ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿ, ನೂಪುರ್ ಶರ್ಮರವರ ಹೇಳಿಕೆಯನ್ನು ಬೆಂಬಲಿಸಿದ್ದ ಕನ್ಹಯ್ಯಲಾಲ್‍ಗೆ ಜೀವ ಬೆದರಿಕೆ ಇದ್ದುದರಿಂದ ಸ್ಥಳೀಯ ಪೋಲೀಸ್ ಠಾಣೆಗೆ ಹೋಗಿ ದೂರನ್ನು ನೀಡದ್ದರೂ, ಸೂಕ್ತ ಭದ್ರತೆ ನೀಡದೆ ಇದ್ದುದರಿಂದ ಮತಾಂಧ ಮುಸ್ಲಿಂ ವ್ಯಕ್ತಿಗಳಿಂದ ಹತ್ಯೆಯ ಬಗ್ಗೆ ವಿಷಾದಿಸಿ ರಾಜಸ್ಥಾನದ ಆಡಳಿದಲ್ಲಿ ದಿನನಿತ್ಯವೂ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ, ಯಾವುದೇ ಕ್ರಮವಾಗದಿರುವುದೇ ಕನ್ಹಯ್ಯಲಾಲ್ ಭೀಕರ ಹತ್ಯೆಗೆ ಕಾರಣವಾಗಿದೆ ಎಂದರು.

ಕಾಂಗ್ರೆಸ್‍ನವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ರಾಹುಲ್ ಗಾಂಧೀಯನ್ನು ಇ.ಡಿ.ರವರು ಪ್ರಶ್ನಿಸುತ್ತಾರೆ ಎಂದುದಕ್ಕೆ ದೇಶಾದ್ಯಂತ ಹೋರಾಟ ನಡೆಸಿದರು. ಕಾಶ್ಮೀರದಲ್ಲಿ ಸ್ವಾತಂತ್ರ್ಯ ಬಂದ ನಂತರದಿಂದ ದಿನನಿತ್ಯವೂ ಕಾಶ್ಮೀರಿ ಪಂಡಿತರಿಗೆ ಕಿರುಕುಳ, ಹತ್ಯೆ, ಬೆದರಿಕೆಯನ್ನು ಜಿಹಾದಿ ಮನಸ್ಸಿನ ದೇಶದ್ರೋಹಿ ಮಾತಾಂದರು ನಡೆಸುತ್ತಿದ್ದಾರೆ.
ಕಾಂಗ್ರೆಸ್‍ನ ತುಷ್ಟೀಕರಣ ನೀತಿಯಿಂದ ದೇಶದ್ಯಾಂತ ಹಿಂದೂಗಳ ಮೇಲಿನ ದೌರ್ಜನ್ಯ ನಡವಳಿಕೆಯೇ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ವಿರುದ್ಧ ಹರಿಹ್ದಾದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಎಲ್ಲಾ ಸಂಧರ್ಭಗಳಲ್ಲೂ ಹಾಗೂ ಹಿಂದಿನ ಸಿದ್ದರಾಮಯ್ಯನವರ ಸರ್ಕಾರವಿದ್ದ ಸಂಧರ್ಭದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ಹಾಗೂ ಗೋವಧೆ ಮುಂತಾದ ದುಷ್ಕøತ್ಯ ಮಾಡುವ ಜಿಹಾದಿ ಮಾನಸಿಕತೆಯವರನ್ನು ಬೆಂಬಲಿಸಿದರು. ಇದರಿಂದ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಹತ್ಯೆ ಮಾಡಲಾಯಿತು. ಸದರಿ ಪ್ರಕರಣಗಳಿಗೆ ಸಂಭಂಧಿಸಿದಂತೆ ಬಂಧಿಸಿದ ಹಾಗೂ ದಾಖಲಿಸಿದ ದೂರುಗಳನ್ನು ಬಗ್ಗೆ ನಿಲಕ್ರ್ಷತನದಿಂದ, ಬೇಜಾಬ್ದಾರಿಯಿಂದ ಮುತಾಂಧ ಮುಸ್ಲಿಂ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಮೃದು ಧೋರಣೆಯ ತುಷ್ಟೀಕರಣದ ನಡವಳಿಕೆಯನ್ನು ಎಲ್ಲರೂ ಗಮನಿಸಿದ್ದಾರೆಂದರಲ್ಲದೆ, ಕಾಂಗ್ರೆಸ್‍ನ ಮತ ಬ್ಯಾಂಕ್ ಒಲೈಕೆ ವಿರುದ್ಧ ಹೆಚ್.ಎಸ್.ರವಿಶಂಕರ್ iÁಕ್ರೋಶ ವ್ಯಕ್ತಪಡಿಸಿದರು.

ಕನ್ಹಯ್ಯಲಾಲ್ ಶಿರಚ್ಛೇಧನ ಮಾಡಿದ ಹಂತಕರಿಗೆ ಇರುದ ಹಿಂದಿನ ಹಿನ್ನಲೆ, ಪಾಕಿಸ್ಥಾನದ ಕರಾಚಿಗೆ ಹೋಗಿ ಐಎಸ್‍ಐನ ಸಂಕರ್ಪದಿಂದ ಶಿರಚ್ಛೇಧನ, ಭಯೋತ್ಪದಾನೆ, ವಿಧ್ವಂಸ ಕೃತ್ಯಗಳ ಟ್ರೇನಿಂಗ್ ಪಡೆದಿರುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ಭದ್ರತಾದಳದಿಂದ ಸಮಗ್ರ ತನಿಖೆ ಮಾಡಬೇಕು. ಭಯೋತ್ಪಾದನಾ, ಕೋಮು ದಳ್ಳುರಿಗೆ ಪ್ರಚೋದನೆಯ ಚಟುವಟಿಕೆ ಮುಂತಾದ ದೇಶ ವಿದ್ರೋಹ ಚಟುವಟಿಕೆಗಳನ್ನು ಎಲ್ಲಾ ವರ್ಗ, ಸಮೂದಾಯದವರು ಖಂಡಿಸಲೇ ಬೇಕಾಗಿದ್ದು, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಹೇಳಿ ಸಮಾಜ ಹಾಗೂ ದೇಶದಲ್ಲಿ ಎಲ್ಲಾ ಧರ್ಮೀಯವರೂ ಶಾಂತಿ, ಸೌಹಾರ್ದತೆಯಿಂದ ಕೂಡಿ ಬಾಳಬೇಕೆಂದರು.

ಮಹಾರಾಷ್ಟ್ರ ಸರ್ಕಾರಕ್ಕೆ ಅಭಿನಂದನೆ

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ರವರಿಗೆ ಬಿಜೆಪಿ ತುಮಕೂರು ಜಿಲ್ಲಾ ಘಟಕದಿಂದ ಅಭಿನಂದನೆಯನ್ನು ಜಿಲ್ಲಾಧ್ಯಕ್ಷ ಹೆಚ್.ಎಸ್. ರವಿಶಂಕರ್ ಸಲ್ಲಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆಯರಹಳ್ಳಿ ಶಂಕರಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕ್‍ರ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಸಹ ವಕ್ತಾರ ಟಿ.ಜೆ.ಸನತ್, ಜಿಲ್ಲಾ ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಜೆ.ಜಗದೀಶ್ ಉಪಸ್ಥಿತರಿದ್ದರು.

(Visited 5 times, 1 visits today)