ತುಮಕೂರು:      
      ಮಹಾನಗರ ವ್ಯಾಪ್ತಿಯಲ್ಲಿ ಡಾಕ್ಟರ್ ವಾಟರ್ ಸಂಸ್ಥೆ ವತಿಯಿಂದ ಈವರೆಗೂ 7 ಸ್ಥಳಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು, 7 ಘಟಕಗಳಲ್ಲಿಯೂ ನೀರಿನ ಮಾಪನಗಳನ್ನು(ವಾಟರ್ ಮೀಟರ್) ಅಳವಡಿಸುವಂತೆ ಮಹಾನಗರ ಪಾಲಿಕೆ ಡಾಕ್ಟರ್ ವಾಟರ್ ಸಂಸ್ಥೆಗೆ ನೋಟಿಸ್  ನೀಡಿದೆ.
      ನಗರದ ವಾರ್ಡ್ ಸಂಖ್ಯೆ – 7ರಲ್ಲಿ ಶಿಶುವಿಹಾರ, ವಾರ್ಡ್ ಸಂಖ್ಯೆ -25 ರಲ್ಲಿ ಮುನ್ಸಿಪಲ್ ಲೇಔಟ್ ಮತ್ತು ವಾರ್ಡ್ ಸಂಖ್ಯೆ-32 ರಲ್ಲಿ ಗೋಕುಲದಲ್ಲಿ 2014 ನೇ ಸಾಲಿನಲ್ಲಿ ನಿರ್ಮಿಸಿದ್ದು ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 175C(ii) ರೀತ್ಯಾ ಈ ಮೂರು ಸ್ಥಳಗಲ್ಲಿ ನಿಮಗೆ ಘಟಕ ನಿರ್ವಹಣೆ ಮಾಡಲು ನೀಡಲಾದ ಪರವಾನಗಿ ಅವಧಿ 2017 ಏ ಇಸವಿಗೆ ಮುಕ್ತಾಯವಾಗಿರುತ್ತದೆ. ಈ ಅವಧಿಯಲ್ಲಿ ವಾಟರ್ ಹೆಲ್ತ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಿಂದ ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 176(6b(i)) ರೀತ್ಯಾ ಯಾವುದೇ ಶುಲ್ಕ ತುಮಕೂರು ಮಹಾನಗರ ಪಾಲಿಕೆಗೆ ಪಾವತಿಯಾಗಿರುವುದಿಲ್ಲ ಹಾಗೂ 8-9-2017ರ ನಂತರದಲ್ಲಿ ಪರವಾನಗಿ ನವೀಕರಿಸಿಕೊಂಡಿರುವುದಿಲ್ಲ. ಮುಂದುವರಿದು ವಾರ್ಡ್ ಸಂಖ್ಯೆ 30 ರ ನಳಂದ ಸ್ಕೂಲ್ ಹತ್ತಿರ, ವಾರ್ಡ್ ಸಂ-18, ಶಾಂತಿನಗರ ( ಓಹೆಚ್‍ಟಿ ಹತ್ತಿರ) ವಾರ್ಡ್ ಸಂ-10 ರ ಆಜಾದ್ ಪಾರ್ಕ್ ದಕ್ಷಿಣ ಭಾಗದಲ್ಲಿ ಮತ್ತು ವಾರ್ಡ್ ಸಂಖ್ಯೆ – 31 ರ ಶೆಟ್ಟಿಯಳ್ಳಿ ಮುಖ್ಯ ರಸ್ತೆ ಪಂಪುಮನೆಯ ಹತ್ತಿರ ಈ ನಾಲ್ಕು ಸ್ಥಳಗಳಲ್ಲಿ 2016 ನೇ ಸಾಲಿನಲ್ಲಿ ನಿರ್ಮಿಸಿದ್ದು ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 175 C (ii) ರೀತ್ಯಾ ಸದರಿ ಘಟಕ ನಿರ್ವಹಣೆ ಮಾಡಲು ನೀಡಲಾದ ಪರವಾನಗಿ ಅವಧಿ 19-07-2019ರಂದು ಇವಸವಿಗೆ ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿ ಕೂಡಾ ವಾಟಾರ್ ಹೆಲ್ತ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಿಂದ ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 176(6b(i)) ರೀತ್ಯಾ ಯಾವುದೇ ಶುಲ್ಕ ತುಮಕೂರು ಮಹಾನಗರ ಪಾಲಿಕೆಗೆ ಪಾವತಿಯಾಗಿರುವುದಿಲ್ಲ.
      ಈ ಹಿನ್ನೆಲೆಯಲ್ಲಿ ಘಟಕಗಳ ಕಾರ್ಯನಿರ್ವಹಣೆ ಮುಂದುವರಿಯಲು ಹೊಸದಾಗಿ ಪರವಾನಗಿ ನೀಡುವುದು ಮತ್ತು ಕರಾರು ಮಾಡಿಕೊಂಡು ಪ್ರಸ್ತುತ ಚಾಲ್ತಿ  ಇಎಉವ ಸರ್ಕಾರಿ ನಿಮಾವಳಿಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಮುಂದುವರಿದು ಘಟಕದಿಂದ ದಿನನಿತ್ಯ ಬಳಕೆಯಾಗುತ್ತಿರುವ ನೀರಿನ ಪ್ರಮಾಣದ ಅಂಕಿ ಅಂಶಗಳು ಅಗ್ಯವಿರುತ್ತದೆ. ಆದುದರಿಂದ ಈ ಪತ್ರ ತಲುಪಿದ 5 ದಿನಗಳ ಒಳಗಾಗಿ ಈ ಮೇಲೆ ತಿಳಿಸಿದ 7 ಶುದ್ಧ ನೀರಿನ ಘಟಕಗಳಿಗೆ ನೀರಿನ ಮಾಪನಗಳನ್ನು(Watermeter) ಅಳವಡಿಸಲು ಸೂಚಿಸಿದೆ. ತಪ್ಪಿದಲ್ಲಿ ಎಲ್ಲಾ ನೀರಿನ ಘಟಕಗಳನ್ನು ಪಾಲಿಕೆ ವಶಕ್ಕೆ ತೆಗೆದುಕೊಳ್ಳಲಾಗುವುದು. ಎಂದು ಮಹಾನಗರ ಪಾಲಿಕೆಯ ಆಯುಕ್ತರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
(Visited 78 times, 1 visits today)