ತುಮಕೂರು :

      ಜಿಲ್ಲೆಯಲ್ಲಿಂದು 93 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2081 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಇಂದು ತುಮಕೂರು-42, ಕುಣಿಗಲ್-11, ತಿಪಟೂರು-01, ಮಧುಗಿರಿ-08, ಪಾವಗಡ-09, ಗುಬ್ಬಿ-04, ತುರುವೇಕೆರೆ-05, ಕೊರಟಗೆರೆ-10, ಚಿಕ್ಕನಾಯಕನಹಳ್ಳಿ-01, ಶಿರಾ-02 ಸೇರಿದಂತೆ ಒಟ್ಟು 93 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

      ಇಂದು ಜಿಲ್ಲಾಸ್ಪತ್ರೆಯಿಂದ 63 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1110 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

     ಜಿಲ್ಲೆಯಲ್ಲಿ ಒಟ್ಟು 908 ಸಕ್ರಿಯ ಪ್ರಕರಣಗಳಿದ್ದು,  ಈವರೆಗೆ 63 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 19 times, 1 visits today)