ತುಮಕೂರು:

     

    ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ​ಡೌನ್ ಮಾಡಲಾಗಿದೆ.

    ಕೊರೊನಾ ಸೋಂಕು ತುಮಕೂರು ಜಿಲ್ಲಾ ನ್ಯಾಯಾಲಯದ ಅಂಗಳಕ್ಕೂ ಪ್ರವೇಶಿಸಿದ್ದು, ಇಲ್ಲಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢವಾಗಿದೆ. ಹಾಗಾಗಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ​ಡೌನ್ ಮಾಡಲಾಗಿದೆ.

      ನ್ಯಾಯಾಲಯದ ಎಲ್ಲಾ ಕಾರ್ಯ ಕಲಾಪಗಳನ್ನು ರದ್ದುಗೊಳಿಸಲಾಗಿದೆ. ಈವರೆಗೂ ಸುರಕ್ಷತೆಯಿಂದ ಸೀಮಿತ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿತ್ತು.  ಸೀಲ್​ ಡೌನ್ ಆದ ಹಿನ್ನೆಲೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

(Visited 44 times, 1 visits today)