ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಸಂಖ್ಯಾ ಬಲವಿಲ್ಲ ಎಂದು ಹೇಳಿಕೆ ನೀಡುವುದನ್ನು ಬಿಟ್ಟು ಬಿಜೆಪಿ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.

      ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು,  ವಿಶ್ವಾಸ ಮತಯಾಚನೆಗೆ ನಮ್ಮ ಮೈತ್ರಿ ಸರಕಾರ ಸಿದ್ಧವಿದೆ. ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಸಂಖ್ಯಾ ಬಲವಿಲ್ಲ ಎಂದು ಹೇಳಿಕೆ ನೀಡುವುದನ್ನು ಬಿಟ್ಟು ಬಿಜೆಪಿ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ರೀತಿಯಲ್ಲಿ ವರ್ತಿಸುವುದನ್ನು ಮೊದಲು ಬಿಜೆಪಿ ನಿಲ್ಲಿಸಲಿ, ಸಂವಿಧಾನದಲ್ಲಿ ಅವಕಾಶವಿರುವುದರಿಂದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ಮಾಡಿದ್ದೇವೆ, ಇಲ್ಲಿ ಅಪವಿತ್ರತೆಯ ಪ್ರಶ್ನೆಯೇ ಇಲ್ಲ ಎಂದರು.

      ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕರೊಬ್ಬರೊಂದಿಗೆ ಬಿಜೆಪಿ ಶಾಸಕರು ಮಾತನಾಡಿರುವ ವಿಷಯದಲ್ಲಿ ಸ್ವೀಕರ್ ಹಾಗೂ ಪ್ರಧಾನಿ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಈಗಾಗಲೇ ವಿಧಾನಸಭಾ ಸ್ವೀಕರ್ ಗಮನಕ್ಕೆ ತಂದಿದ್ದು, ಸದನದಲ್ಲಿ ತೀರ್ಮಾನಕೈಗೊಳ್ಳಲಿದ್ದಾರೆ ಎಂದರು.

ಧ್ವನಿ ಎಸ್‍ಎಫ್‍ಎಲ್ ಪರೀಕ್ಷೆಯಾಗಲಿ:

       ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಮ್ಮ ಶಾಸಕರೊಂದಿಗೆ ಮಾತನಾಡಿರುವ ಸಂಬಂಧ ಸಿಎಂ ಹೆಚ್.ಡಿ,ಕುಮರಸ್ವಾಮಿ ಅವರು ಬಿಡುಗಡೆ ಮಾಡಿದ ಆಡಿಯೋ ಧ್ವನಿ ನನ್ನದಲ್ಲ ಎಂದು ಬಿಎಸ್‍ವೈ ಸ್ಪಷ್ಟನೆ ನೀಡುತ್ತಿದ್ದಾರೆ. ಎಸಿಬಿಗೆ ದೂರು ನೀಡುವ ಬಗ್ಗೆ ಪರಿಶೀಲಿಸಲಾಗುವುದು, ಇಲ್ಲವೇ ಸ್ವೀಕರ್ ತನಿಖೆಗೆ ಆದೇಶಿಸಿಲಿ, ಧ್ವನಿ ದೃಢಪಡಿಸಿಕೊಳ್ಳುವ ಸಂಬಂಧ ಎಸ್‍ಎಫ್‍ಎಲ್ ಪರೀಕ್ಷೆ ನಡೆಸಿ ದೃಢಪಡಿಸಿ, ಸತ್ಯಾಂಶ ಹೊರಬರಲಿ ಎಂದ ಪರಮೇಶ್ವರ್, ನಾವು ಯಾವುದೇ ಕಾರಣಕ್ಕೂ ಅಪರೇಷನ್ ಹಸ್ತವೂ ಇಲ್ಲ, ದಳವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

 

(Visited 18 times, 1 visits today)