ತುಮಕೂರು:


ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ 84ನೇ ಜಯಂತಿಯನ್ನು ಎನ್,ಆರ್ ಕಾಲೋನಿಯ ಶೈಕ್ಷಣಿಕ ಭವನದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಬಿ,ಕೃಷ್ಣಪ್ಪ ಪ್ರತಿಷ್ಠಾನ(ರಿ)ದಿಂದ ಆಯೋಜಿಸಲಾಗಿತ್ತು.
ಬಿ.ಕೃಷ್ಣಪ್ಪ ನವರ ಅನುಯಾಯಿಗಳು ಮತ್ತು ದಸಂಸದ ಪ್ರಾರಂಭದ ದಿನಗಳಲ್ಲಿ ಬಿ.ಕೆ ಯವರ ಜೊತೆ ತುಮಕೂರು ಜಿಲ್ಲೆಯಲ್ಲಿ ದಲಿತ ಚಳುವಳಿಯನ್ನು ಕಟ್ಟಿದ ಕೆ.ದೊರೈರಾಜ್ ನುಡಿ ನೆನಪುಗಳ ಮೂಲಕ ಅಂದಿನ ಹೋರಾಟದ ದಿನಗಳನ್ನು ಎನ್.ಆರ್ ಕಾಲೋನಿಯ ಯುವಜನರೊಂದಿಗೆ ಹಂಚಿಕೊಂಡರು ನಮ್ಮ ವಿಮೋಚನೆಗೆ ಶ್ರಮಿಸಿದವರನ್ನು ಸ್ಮರಿಸಿಕೊಂಡು ಗೌರವಿಸುವುದು ನಮ್ಮ ಜವಾಬ್ದಾರಿ ಇದರಿಂದ ತುಳಿತಕ್ಕೆ ಒಳಪಟ್ಟಿರುವ ಜನರ ವಿಮೋಚನೆಗೆ ನಾವು ಪ್ರೇರಣೆಗೊಳ್ಳುತ್ತೇವೆ.
ಭಾರತದಲ್ಲಿ ಮಾದರಿ ಚಳುವಳಿಯನ್ನು ಕಟ್ಟಿದವರು ಬಿ.ಕೆಯವರು ನಮ್ಮ ಜನಾಂಗದ ಧೌರ್ಬಲ್ಯ ನಮ್ಮ ಜೊತೆಗಿನ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ನಮ್ಮಲ್ಲಿರುವ ಗುಲಾಮಗಿರಿ ಆದರೆ 70ರ ದಶಕದಲ್ಲಿ ದಲಿತ ಚಳುವಳಿಯ ಮೂಲಕ ಅಸ್ಪøಶ್ಯ ಜನಾಂಗಕ್ಕೆ ಸ್ವಾಭಿಮಾನದ ನಡೆಯನ್ನು ಕಲಿಸಿ ಇಡೀ ರಾಜ್ಯಕ್ಕೆ ವಿಚಾರದ ನಾಯಕತ್ವವನ್ನು ಕೃಷ್ಣಪ್ಪ ಕೊಟ್ಟರು. 1977 ರಲ್ಲಿ ಎನ್.ಆರ್ ಕಾಲೋನಿಗೆ ಪ್ರಪ್ರಥಮ ಭೇಟಿ ಕೊಟ್ಟ ಬಿ.ಕೆ ಕಾಲೋನಿಯ ಹೋರಾಟದಲ್ಲಿ “ಹೆಂಡಾ ಬೇಡ ವಿದ್ಯೇ ಬೇಕು” ಎಂಬ ನಮ್ಮ ಒತ್ತಾಯವನ್ನು ಇಡೀ ರಾಜ್ಯ ಅನ್ವಯಿಸಿ ಹೋರಾಟ ರೂಪಿಸಿದರು ಹಾಗೂ ದಸಂಸದ ಹಲವಾರು ಹೋರಾಟಗಳಿಂದ ಕಾಲೋನಿಯಲ್ಲಿ ಶೈಕ್ಷಣೀಕ ಅಭಿವೃದ್ಧಿಗೊಳ್ಳಲು ಕಾರಣವಾಯಿತು, ಇದಕ್ಕೆ ಪ್ರೇರಣೇಯಾದವರು ಬಿ.ಕೆ ಹಾಗೂ ಇಡೀ ರಾಜ್ಯದಲ್ಲಿ ಹಾಸ್ಟೇಲ್‍ಗಳ ಪ್ರಾರಂಭಕ್ಕೆ. “ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧಕ್ಕೆ” ದಲಿತರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಸೌಲತ್ತು ದೊರಕಿಸಿಕೊಡುವಲ್ಲಿ ಘನತೆಯ ಬದುಕಿನ ವಾತಾವರಣ ಕಟ್ಟಿಕೊಡುವಲ್ಲಿ ಹೋರಾಟಕ್ಕೆ ಮೌಲ್ಯದ ಅರ್ಥವನ್ನು ತಂದುಕೊಡುವಲ್ಲಿ ಬಿ.ಕೆ ಪಾತ್ರ ಮಹತ್ತರವಾದದ್ದು ಈ ಮೂಲಕ ದಲಿತರಲ್ಲಿ ರಾಜಕೀಯ ಪ್ರಜ್ಞೆಯನ್ನು ಕೃಷ್ಣಪ್ಪರು ತಂದರು ಎಂದು ತಮ್ಮ ನುಡಿ ನೆನಪು ಮಾತುಗಳನ್ನಾಡಿದರು.
ಪಾವನ ಆಸ್ಪತ್ರೆಯ ಡಾ. ಮುರುಳೀಧರ್ ಉದ್ಘಾಟನಾ ಮಾತುಗಳನ್ನು ಹಾಡಿ ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ನಮ್ಮ ಅಣ್ಣ ರಂಗಸ್ವಾಮಿ ಬೆಲ್ಲದಮಡುರವರು ಬಿ,ಕೆರವರೊಂದಿಗೆ ಒಡನಾಟವಿಟ್ಟುಕೊಂಡು ಬದ್ಧತೆಯ ಮತ್ತು ಪ್ರಾಮಾಣಿಕವಾದ ಹೋರಾಟವನ್ನು ಕಟ್ಟಿದರು ಇದರಿಂದಾಗಿ ದಲಿತರಲ್ಲಿ ಹೋರಾಟದ ಕಿಚ್ಚು ಬರಲು ಸಾಧ್ಯವಾಗಿತ್ತು ಎಂದರು, ಚಳುವಳಿಗಾರರಿಗೆ ಕೈಯಿ ಬಾಯಿ ಕಚ್ಚೆ ಸ್ವಚ್ಛವಾಗಿರುವ ಘೋಷಣೆಯನ್ನು ಕೊಟ್ಟು ಕರ್ನಾಟಕದ ಅಂಬೇಡ್ಕರ್ ಆಗಿ ಬಿ.ಕೆರವರನ್ನು ಕಾಣಲು ಸಾಧ್ಯವಾಯಿತು ಎಂದರು.
ಕಾಂಗ್ರೆಸ್ ಮುಖಂಡರಾದ ವಾಲೇಚಂದ್ರಯ್ಯ ಮಾತನಾಡಿ ಎನ್.ಆರ್ ಕಾಲೋನಿಯ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಇತರೆ ಸಮುದಾಯಗಳು ಮಾಡುತ್ತಿದ್ದು ನಮ್ಮ ದೌರ್ಬಲ್ಯಗಳನ್ನು ಬಳಸಿಕೊಂಡು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯ ಸಮುದಾಯಗಳು ಬೇಳೆ ಬೇಯಿಸಿಕೊಳ್ಳುತ್ತಿದ್ದು ಈ ಹಣೆಪಟ್ಟಿಯಿಂದ ಎನ್.ಆರ್ ಕಾಲೋನಿಯ ಯುವಜನರು ಮತ್ತು ದಲಿತ ಸಂಘಟನೆಗಳ ಹೋರಾಟಗಾರರು ಹೊರಬರಬೇಕೆಂದು ಕರೆ ನೀಡಿದರು.
ದಸಂಸದ ಹಿರಿಯರಾದ ಬಿ.ಹೆಚ್ ಗಂಗಾಧರ್, ಮಾಜಿ ಟೂಡಾ ಸದಸ್ಯ ಜಯಮೂರ್ತಿ, ಡಾ.ಪಾವನ, ಬಿ,ಕೆ ರವರ ಜೊತೆಗಿನ ಒಡನಾಟದ ದಿನಗಳನ್ನು ನುಡಿ ನೆನಪಿನಲ್ಲಿ ಸ್ಮರಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಮುಖಂಡರಾದ ನರಸಿಂಹಯ್ಯ ವಹಿಸಿ ಮಾತನಾಡಿ ಇಂದಿನ ತಲೆಮಾರಿಗೆ ಬಿ.ಕೆ ರವರ ಹೋರಾಟ ಬರಹ ಬಾಷಣಗಳನ್ನು ತಿಳಿಸುವ ಅಗತ್ಯವಿದ್ದು ನಗರದಲ್ಲಿರುವ ಎಲ್ಲಾ ಕಾಲೋನಿಗಳಲ್ಲಿ ಬಿ.ಕೆ ಜಯಂತಿಯ ಅಭಿಯಾನವನ್ನು ಕೈಗೊಳ್ಳಬೇಕಿದೆ ಎಂದರು.

(Visited 11 times, 1 visits today)