ತುಮಕೂರು :

      ಬಿಜೆಪಿ ಮುಖಂಡನೊರ್ವನನ್ನು ದೂರೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದಕ್ಕೆ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರು ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ಮಾಡಿದ್ದಾರೆ.

      ತಾಲೂಕು ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಹನುಮಂತರಾಜು ವಿರುದ್ಧ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಿವು ಎಂಬವರ ನಡುವೆ ಪೈಪ್ ಲೈನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಆದ್ದರಿಂದ ಶಿವು ಅವರು ಹನುಮಂತರಾಜು ಅವರ ಮೇಲೆ ಕ್ಯಾತಸಂದ್ರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ ಹನುಮಂತರಾಜು ಅವರನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು.

      ಈ ಹಿನ್ನಲೆಯಲ್ಲಿ ಆಕ್ರೊಶಗೊಂಡ ಬಿ.ಸುರೇಶ್ ಗೌಡರು, ತುಮಕೂರು ಗ್ರಾಮಾಂತರ ಕ್ಷೇತ್ರದ ಊರ್ಡಿಗೆರೆ ಹೋಬಳಿ ಬೆಟ್ಟಸೀತಕಲ್ಲು ಗ್ರಾಮದ ವಾಸಿಯಾದ ತಾಪಂ ಸದಸ್ಯರು ಆಗಿರುವ ಹನುಮಂತರಾಜು ದಲಿತ ಸಮುದಾಯಕ್ಕೆ ಸೇರಿರುವ ಇವರ ಮೇಲೆ ಇದೇ ಗ್ರಾಮದ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ಗೌರಿಶಂಕರ ಬೆಂಬಲಿಗನಾದ ಶಿವು ಎಂಬಾತ ಪೈಪು ಲೈನು ಕಾಮಗಾರಿ ಮಾಡುತ್ತಿದ್ದು ಕಳೆದ ಹತ್ತು ದಿನಗಳ ಹಿಂದೆ ಪೈಪು ಹಾಕಲು ತೆಗೆದಿರುವ ಚರಂಡಿಯನ್ನು ಮುಚ್ಚಿಸದೆ ವಿಳಂಬ ಮಾಡುತ್ತಿರುವುದರಿಂದ ಜನ ಜಾನುವಾರುಗಳಿಗೆ ಮಕ್ಕಳಿಗೆ ಮನೆ ಒಳಗೆ ಹೊರಗೆ ಹೋಗಲು ಬರಲು ಆಗದೆ ತೀವ್ರ ತೊಂದರೆ ಆಗಿತ್ತು ಕೂಡಲೇ ಮುಚ್ಚಿಸುವಂತೆ ಮನವಿ ಮಾಡಿದರೂ ಕೂಡಾ ತಾಪಂ ಮಾಜಿ ಸದಸ್ಯ ಹನುಮಂತರಾಜು ವಿರುದ್ದ ಜೆಡಿಎಸ್ ಮುಖಂಡ ಶಿವು ಎಂಬುವವರು ಹನುಮಂತರಾಜು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಅಲ್ಲದೆ ಕಿವಿಯನ್ನು ಕಚ್ಚಿ ರಕ್ತಬರುವಂತೆ ಹೊಡೆದಿರುತ್ತಾನೆ. ಈ ಬಗ್ಗೆ ಕ್ಯಾಂತ್ಸಂದ್ರ ಪೋಲೀಸ್ ಠಾಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ಮಾಜೀ ತಾ,ಪಂ ಮಾಜಿ ಸದಸ್ಯ ಹನುಮಂತರಾಜು ಹೋಗಿ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸದೆ ಎಫ್ಐಆರ್ ಕೂಡಾ ದಾಖಲು ಮಾಡದೆ ವಿಳಂಬ ಮಾಡಿದ್ದೂ ಅಲ್ಲದೆ ಹೊದೆ ತಿಂದಿರುವ ಕಿವಿ ಗಾಯ ಗೊಂಡಿರುವ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಜೆಡಿಎಸ್ ಮುಖಂಡನಾಗಿರುವ ಶಿವು ಎಂಬಾತನಿಂದ ಹಾಲಿ ಶಾಸಕ ಡಿ.ಸಿ.ಗೌರಿಶಂಕರ ಕಡೆಯಿಂದ ಪಿಎಸ್ಐ ಅವರಿಗೆ ಫೋನು ಮಾಡಿಸಿ ದೂರು ಕೊಡಿಸಿ ಶಾಸಕರ ಆದೇಶದ ಮೇರೆಗೆ ನಮ್ಮ ಪಕ್ಷದ ಕಾರ್ಯಕರ್ತ ದಲಿತ ಮುಖಂಡ ಮಾಜಿ ತಾ,ಪಂ ಸದಸ್ಯರನ್ನು ಬಂದಿಸಿ ಬಟ್ಟೆ ಬಿಚ್ಚಿಸಿ ಕೂರಿಸಿರುವುದು ಎಷ್ಟು? ಸರಿ ಎಂದು ಸುರೇಶಗೌಡ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

      ಪಿಎಸ್‍ಐ ಅವರು ದಮ್ಕಿ ಹಾಕಿ ಅಲ್ಲಿನ ಏ ಎಸ್ ಐ ಹಾಗು ಧಫೇಧಾರ್ ಒಬ್ಬರು ಅವಾಚ್ಯ ಶಭ್ದಗಳಿಂದ ನಿಂದಿಸಿ ಮೋಬೈಲ್ ಕಸಿದುಕೊಂಡು ಬಟ್ಟೆ ಬಿಚ್ಚಿಸಿ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆ ಆದರೂ ಕೂಡಾ ಯಾವುದೇ ಕೇಸು ದಾಖಲು ಮಾಡದೆ ಸಂಜೆ ಲಾಕಪ್ ನಲ್ಲಿ ಇಟ್ಟಿರುತ್ತಾರೆ, ಈ ವಿಷಯವನ್ನು ಹನುಂತರಾಜು ಅವರ ಸಂಬಂದಿಕರು ವಿಷಯವನ್ನು ನನ್ನ ಗಮನಕ್ಕ ತಂದಿರುತ್ತಾರೆ ಕೂಡಲೇ ನಮ್ಮ ಪಕ್ಷದ ಕಾರ್ಯಕರ್ತನ ಮಾಜಿ ತಾ,ಪಂ ಸದದ್ಸಯನಿಗೆ ಆಗಿರುವ ಅನ್ಯಾವನ್ನು ಖಂಡಿಸಿ ನಮ್ಮ ಪಕ್ಷದ ನೂರಾರು ಬೆಂಬಲಿಗರೊಡನೆ ಪೋಲೀಸ್ ಸ್ಟೇಷನ್ನಿನ ಬಾಗಿಲಲ್ಲಿ ಮಲಗಿಕೊಂಡು ಪ್ರತಿಭಟನೆ ಮಾಡಿರುತ್ತೇನೆ ಪ್ರಜ್ರಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿಗೆ ಗೌರವ ನೀಡಿ ಜನಕ್ಕೆ ರಕ್ಷಣೆ ನೀಡಬೇಕಾದ ಪೋಲೀಸ್ ಇಲಾಖೆ ವಿಷೇಷವಾಗಿ ಕ್ಯಾಂತ್ಸಂದ್ರ ಪಿ,ಎಸ್,ಐ ಅವರು ಶಾಸಕ ಡಿ,ಸಿ ಗೌರಿಶಂಕರ ಮತ್ತು ಒಂದು ಪಕ್ಷದ ಕಾರ್ಯಕರ್ತನಂತೆ ವರ್ತಿಸುತ್ತಿರುವ ಇವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೂಡ ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿಗಳಿಗೆ ದೂರು ನೀಡುವುದಾಗಿ ಕೂಡಾ ತಿಳಿಸಿದ್ದಾರೆ.

      ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರ ಕುಮ್ಮಕ್ಕಿನಿಂದ ಪೋಲೀಸರ ದೌರ್ಜನ್ಯ ಎಲ್ಲೆ ಮೀರಿದ್ದು ಇದು ಹೀಗೇ ಮುಂದುವರಿದರೆ ಐ ಜಿ ಕಛೇರಿ ಮುಂದೆ ಪ್ರತಿಭಟನೆ ಮಾಡಬೇಕಾದೀತು ಎಂದು ತಿಳಿಸಿದ್ಶಾರೆ.

      ಕಳೆದ ಹತ್ತು ವರ್ಷ ಶಾಸಕನಾಗಿದ್ದ ಕಾಲಾವಧಿಯಲ್ಲಿ ಒಂದೇ ಒಂದು ಕೋಮು ಸೌಹಾರ್ಧತೆಗೆ ದಕ್ಕೆ ಬರುವಂತ ಕೆಲಸ ಮಾಡಿಲ್ಲ ಎಂದಿಗೂ ದ್ವೇಷದ ರಾಜಕಾರಣ ಮಾಡಿದವನಲ್ಲ.  ಆದರೆ ಈಗಿನ ಶಾಸಕರು ಪೋಲೀಸರ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವುದು ಕೇಸು ದಾಖಲು ಮಾಡಿಸುವುದು ಬಿಟ್ಟು ಜನತೆ ನಿಮಗೆ ಅವಕಾಶ ನೀಡಿದ್ದಾರೆ ಅದಕ್ಕೆ ತಕ್ಕನಾಗಿ ಹುದ್ದೆಗೆ ಗೌರವಯುತವಾಗಿ ನಡೆದುಕೊಳ್ಳಿ ಹುದ್ದೇ ಯಾರಿಗೂ ಶಾಶ್ವತ ಅಲ್ಲ ಎಂದು ಸುರೇಶಗೌಡರು ತಿಳಿಸಿದ್ದಾರೆ. ನಿಮ್ಮ  ದೋರಣೆ ಹೀಗೆಮುಂದುವರಿದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

      ಮಾಜಿ ಶಾಸಕರು ಸ್ಟೇಷನ್ನಿನ ಭಾಗಿಲಲ್ಲಿ ಮಲಗಿ ಪ್ರತಿಭಟನೆ ಮಾಡಿರುವ ವಿಡಿಯೋ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದ್ದು ಸುಮಾರು 68253 ಜನರು ನೋಡಿದ್ದಾರೆ,

(Visited 57 times, 1 visits today)