ಮಧುಗಿರಿ :

      ನರೇಂದ್ರ ಮೋದಿಯ ಜನಪರ ಆಡಳಿತವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಮತ್ತೊಮ್ಮೆ ಮೋದಿ ಕೇಂದ್ರದಲ್ಲಿ ಆಡಳಿತ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಧುಗಿರಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಇ.ರಮೇಶ್‍ರೆಡ್ಡಿ ತಿಳಿಸಿದರು.

       ಪಟ್ಟಣದ ಶ್ರೀದಂಡಿನ ಮಾರಮ್ಮ ದೇಗುಲದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸಮರ್ಥವಾಗಿ ಅಭಿವೃದ್ಧಿಯಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮೋ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಅದಮ್ಯ ವಿಶ್ವಾಸವಿದೆ. ಅದಕ್ಕಾಗಿ ಕ್ಷೇತ್ರದ ಕಾರ್ಯಕರ್ತರ ಮನೆ ಮನೆಗೂ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ಜನಪರ ಆಡಳಿತವನ್ನು ಮನದಟ್ಟು ಮಾಡಿಕೊಡಬೇಕಿದೆ. ಆಯುಶ್ಮಾನ್ ಭಾರತ್, ಫಸಲ್‍ಭೀಮಾ, ಉಜ್ವಲ್, ಕಿಸಾನ್ ಸಮ್ಮಾನ್ ಹಾಗೂ ಇತರೆ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ಜನಪರ ಯೋಜನೆಗಳನ್ನು ಪ್ರಚಾರ ಮಾಡಬೇಕಿದೆ. ಪ್ರಸ್ತುತ ರೈತರ ಖಾತೆಗೆ 6 ಸಾವಿರ ಹಣವನ್ನು ಹಾಕುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಫೆ.14 ರಂದು ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ್ದು, ಇದರ ವಿರುದ್ಧ ಪಾಕಿಸ್ತಾನದ ನೆಲದಲ್ಲಿನ 350 ಉಗ್ರ ನೆಲೆಗಳನ್ನು ದ್ವಂಸ ಮಾಡಲಾಗಿದ್ದು, ದೇಶ ರಕ್ಷಣೆಯ ವಿಚಾರದಲ್ಲಿ ಬಿಜೆಪಿ ರಾಜಿಯನ್ನು ಮಾಡಿಕೊಳ್ಳಲ್ಲ ಎಂಬುದನ್ನು ಮಾಡಿ ತೋರಿಸಿದೆ. ಸೆರೆಯಾಗಿದ್ದ ವಿಂಗ್ ಕಮಾಂಡರ್ ಅಭಿನಂದ್ ವಾಪಸ್ಸಾತಿಯು ದೇಶದ ರಾಜತಾಂತ್ರಿಕ ಗೆಲುವಿನಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಶಕ್ತಿಯ ಅನಾವರಣ ಮಾಡಿದೆ ಎಂದರು.

(Visited 20 times, 1 visits today)