BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ
  • ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ
  • ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು
  • ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ
  • ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ
  • ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ
  • ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ
  • ತುಮಕೂರು ಪೌರಾಣಿಕ ರಂಗಭೂಮಿ ತವರೂರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಿಎಸ್‍ಟಿ ನಿಯಮ ಸರಳೀಕರಣಕ್ಕೆ ಆಗ್ರಹ!
Trending

ಜಿಎಸ್‍ಟಿ ನಿಯಮ ಸರಳೀಕರಣಕ್ಕೆ ಆಗ್ರಹ!

By News Desk BenkiyabaleUpdated:December 11, 2019 6:53 pm

ತುಮಕೂರು :

      ಜಿಎಸ್‍ಟಿ ಕಾಯ್ದೆಯ ನಿಯಮಗಳನ್ನು ಪದೆಪದೆ ತಿದ್ದುಪಡಿ ಮಾಡಿ ಗೊಂದಲ ಉಂಟುಮಾಡಲಾಗುತ್ತದೆ, ಕಾಯ್ದೆಯ 36(4) ನಿಯಮ ರದ್ದುಪಡಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

      ಕೇಂದ್ರ ಸರಕು ಮತ್ತು ಸೇವಾ ಕಾಯ್ದೆ ಅನ್ವಯ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಂತೆ ಪ್ರತಿ ತಿಂಗಳು ಜಿಎಸ್‍ಟಿ ರಿಟರ್ನ್ ಸಲ್ಲಿಸಲು ಕಷ್ಟವಾಗುತ್ತಿದೆ ಎಂದು ಹೇಳಿ, ಜಿಎಸ್‍ಟಿ ಕಾಯ್ದೆ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.

      ಬಿಜಿಎಸ್ ವೃತ್ತದಲ್ಲಿ ಜಮಾವಣೆಗೊಂಡ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದರು. ಡಿಸಿ ಕಚೇರಿ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

     ಈ ವೇಳೆ ಮಾತನಾಡಿದ ಆಡಿಟರ್ ಪ್ರಕಾಶ್, ಜಿಎಸ್‍ಟಿ ಕಾಯ್ದೆಯನ್ನು ವರ್ತಕರು, ಕೈಗಾರಿಕೋದ್ಯಮಿಗಳು ವಿರೋಧ ಮಾಡುತ್ತಿಲ್ಲ. ಆದರೆ, ಅದರಲ್ಲಿನ ನಿಯಮಾವಳಿಗಳನ್ನು ಸರಳೀಕರಣ ಮಾಡಬೇಕು ಎಂಬುದು ಒತ್ತಾಯವಾಗಿದೆ ಎಂದು ಹೇಳಿದರು.ನಿಯಮ 36(4)ರ ಪ್ರಕಾರ ವ್ಯವಹಾರಸ್ಥರು ಜಿಎಸ್‍ಟಿ ರಿಟರ್ನ್ ಸಲ್ಲಿಕೆ ಮಾಡಿದ್ದರೂ ತಮ್ಮ ಸರಬರಾಜುದಾರರು ಜಿಎಸ್‍ಟಿ ರಿಟರ್ನ್ ಸಲ್ಲಿಸದಿದ್ದರೆ, ಇವರ ರಿಟರ್ನ್‍ನ್ಸ್‍ಗೆ ಮಾನ್ಯತೆ ದೊರೆಯವುದಿಲ್ಲ. ಈ ನಿಯಮ ಅವೈಜ್ಞಾನಿಕ, ಯಾರೊ ಮಾಡಿದ ತಪ್ಪಿಗೆ ಇನ್ನಾರೊ ದಂಡ ತೆರುವಂತಾಗಿದೆ. ಈ ನಿಯಮ ರದ್ದು ಮಾಡಬೇಕು ಎಂದು ಆಗ್ರಹಿಸಿದರು. 

      ಈ ಬಗ್ಗೆ ವರ್ತಕರು, ಉದ್ಯಮಿಗಳು ಕೇಂದ್ರ ಸರ್ಕಾರಕ್ಕೆ ಈ ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ, ಇದರಿಂದ ಜಿಎಸ್‍ಟಿ ರಿಟರ್ನ್ ಸಲ್ಲಿಸುವವರಿಗೆ ಅನಾನುಕೂಲವಾಗಿದೆ ಎಂದು ಹೇಳಿದರು.ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್ ಮಾತನಾಡಿ, ನಮ್ಮ ಎಲ್ಲಾ ದಾಖಲಾತಿ, ಜಿಎಸ್‍ಟಿ ರಿಟರ್ನ್‍ನ್ಸ್ ಪಾವತಿಯಾಗಿದ್ದರೂ ಸರಬರಾಜುದಾರರು ಮಾಡುವ ತಪ್ಪಿಗೆ ನಮಗೆ ತೊಂದರೆ ಮಾಡುವ ಕ್ರಮ ಸರಿಯಲ್ಲ. ಕಾಯ್ದೆಯ 36(4) ನಿಯಮವನ್ನು ರದ್ದು ಮಾಡಬೇಕು. ಮೂಲ ಜಿಎಸ್‍ಟಿ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

      ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಜಿಎಸ್‍ಟಿ ನಿಯಮಗಳನ್ನು ಪದೇಪದೆ ಬದಲಾವಣೆ ಮಾಡಿ ಗೊಂದಲ ಉಂಟು ಮಾಡುವುದನ್ನು ನಿಲ್ಲಿಸಬೇಕು, ಸರಳ ನಿಯಮಗಳನ್ನು ರೂಪಿಸಬೇಕು, ಮೂಲ ಜಿಎಸ್‍ಟಿ ಕಾಯ್ದೆಯ ನಿಯಮ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

      ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ. ಹೆಚ್. ಪರಮಶಿವಯ್ಯ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹ ಕಾರ್ಯದರ್ಶಿ ಸಂಜಯ್, ಖಜಾಂಚಿ ಸತ್ಯನಾರಾಯಣ್, ಮಾಜಿ ಅಧ್ಯಕ್ಷ ಲೋಕೇಶ್ ಸೇರಿದಂತೆ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಣ್ಣ ಕೈಗಾರಿಕೆಗಳ ಸಂಘ, ಧಾನ್ಯ ವ್ಯಾಪಾರಿಗಳ ಸಂಘ, ಜುವೆಲ್ಲರಿ ಅಸೋಸಿಯೇಷನ್, ಅಟೊಮೊಬೈ ಲ್ ಅಸೋಸಿಯೇಷನ್, ರೈಸ್‍ಮಿಲ್ ಅಸೋಸಿಯೇಷನ್ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

      ಜಿಲ್ಲಾಧಿಕಾರಿಗಳ ಕಚೇರಿ ನಂತರ ಕೇಂದ್ರ ಜಿಎಸ್‍ಟಿ ಕಚೇರಿ ಹಾಗೂ ರಾಜ್ಯ ಸರ್ಕಾರದ ಜಿಎಸ್‍ಟಿ ಕಚೇರಿಗೂ ತೆರಳಿ ಅಲ್ಲಿನ ಅಧಿಕಾರಿಗಳ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

(Visited 9 times, 1 visits today)
Previous Articleದಬ್ಬಾಳಿಕೆ, ದಮನಕಾರಿ ನೀತಿ ಸಲ್ಲದು-ಕೆ.ದೊರೈರಾಜ್
Next Article ನಾಗರೀಕ ತಿದ್ದುಪಡಿ ಮಸೂದೆಗೆ ಎಸ್ಡಿಪಿಐ ವಿರೋಧ
News Desk Benkiyabale

Related Posts

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

October 14, 2026 5:57 pm news

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm news

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm news
ತಾಜಾ ಸುದ್ಧಿಗಳು
news

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

October 14, 2026 5:57 pm
news

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm
news

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm
news

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm
news

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm
news

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm
Our Youtube Channel
Our Picks

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

October 14, 2026 5:57 pm

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜಿಪಂ, ತಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿ: ಕೆ.ಎನ್. ರಾಜಣ್ಣ

By News Desk BenkiyabaleOctober 14, 2026 5:57 pm

ಮಧುಗಿರಿ: ಯಾವುದೇ ಸಂದರ್ಭದಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದು, ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಶಾಸಕ ಕೆ.ಎನ್.…

ಅನ್ನದಾತನ ಅಸ್ತಿತ್ವಕ್ಕೆ ಹೋರಾಟವೇ ಸಾಧನ

October 14, 2026 5:49 pm

ಕಾಲೇಜು ಬಸ್‌ಗೆ ಲಾರಿ ಡಿಕ್ಕಿ: ಭಾರಿ ಅನಾಹುತದಿಂದ ಪಾರಾದ ವಿದ್ಯಾರ್ಥಿಗಳು

October 13, 2026 6:32 pm

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.