ಗುಬ್ಬಿ:


ಬುಧವಾರ ನಡೆದ ಬರ್ಬರ ಹತ್ಯೆ ಇಂದಾಗಿ ಗುಬ್ಬಿ ನಗರದ ಜನತೆಯು ಭಯಭೀತರಾಗಿದ್ದು ಇತಿಹಾಸದಲ್ಲಿ ಈ ರೀತಿಯ ಬರ್ಬರ ಕೃತ್ಯ ಯು ಎಂದೂ ಕಾಣದಂತಹ ಕೃತ್ಯವನ್ನೂ ಎಸಗಿ ದಲಿತ ಮುಖಂಡನನ್ನು ಹಾಡುಹಗಲೇ ಜನನಿ ಬಿಡಾದ ರಸ್ತೆಯಲ್ಲಿ ಕೊಚ್ಚಿ ಹಾಕಿ ಪರಾರಿಯಾಗಿರುವ ಘಟನೆ ಯಿಂದ ತಾಲೂಕಿನಾದ್ಯಂತ ಭಯದ ವಾತಾವರಣ ತುಂಬಿದ್ದು ಕಂಡುಬಂದಿದೆ.
ದಿ.15 ರಂದು ಸುಮಾರು 1-30 ರ ಸಮಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಜಿ.ಸಿ. ನರಸಿಂಹಮೂರ್ತಿ (ಕುರಿ ಮೂರ್ತಿ) ರಾಷ್ಟ್ರೀಯ ಹೆದ್ದಾರಿ 206 ರ ಟೀ ಅಂಗಡಿಯ ಮುಂದೆ ಕುಳಿತು ತನ್ನ ಸಹಚರರೊಡನೆ ದಲಿತ ಕುಂದು ಕೊರತೆ ಸಭೆಗೆ ಶಿರಾಕ್ಕೆ ಹೋಗಲು ತನ್ನ ಕಾರ್ಯಕರ್ತರ ಜೊತೆ ಚರ್ಚಿಸಲು ಕುಳಿತಿದ್ದು ಒಂದೆಡೆಯಾದರೆ ಆದಿನ ನಡೆಯಬೇಕಿದ್ದ ದಲಿತ ಕುಂದು ಕೊರತೆ ಸಭೆಯನ್ನು ಮುಂದೂಡಲಾಗಿದೆ ಎಂದು ದೂರವಾಣಿ ಮುಖಾಂತರ ತಿಳಿಸಿದಾಗ ತನ್ನ ಕಾರ್ಯಕರ್ತರನ್ನು ತಾಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿದ್ದು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಕ್ರಮವನ್ನು ಕೈಗೊಳ್ಳಬೇಕೆಂದು ಚರ್ಚಿಸಿದ ನಂತರ ಕೇವಲ ಮೂರು ಜನ ಮಾತ್ರ ಟೀ ಅಂಗಡಿಯ ಮುಂದೆ ಕುಳಿತಿದ್ದು ಅದರಲ್ಲಿ ಇಬ್ಬರು ಟೀ ಅಂಗಡಿಯ ಒಳಗೆ ಹೋದ ಸಮಯದಲ್ಲಿ ಏಕಾಏಕಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಲಾಂಗು, ಚಾಕು, ಡ್ರಾಗ್ ಇವುಗಳಿಂದ ಒಂಟಿಯಾಗಿ ಕುಳಿತಿದ್ದ ಕುರಿ ಮೂರ್ತಿಯ ಮೇಲೆ ದಾಳಿ ನಡೆಸಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದು ಈ ಘಟನೆಯಿಂದ ಅಕ್ಕಪಕ್ಕದ ಅಂಗಡಿ ಮಾಲೀಕರು ಹಾಗೂ ಕೆಲಸಗಾರರು ಒಂದು ನಿಮಿಷ ಶಬ್ದರಾಗಿದ್ದು ಕೊಲೆಯನ್ನು ಮಾಡಿದ ವ್ಯಕ್ತಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ನಿರಾಳವಾಗಿ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾರೆ.
ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಮೃತನ ಕುಟುಂಬಕ್ಕೆ ಆಗಮಿಸಿ ಸ್ವಾಂತನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ ಹತ್ಯೆ ದಿಗ್ಭ್ರಮೆ ಮೂಡಿಸಿದೆ ಎಂದರು.
ಗುಬ್ಬಿಯಲ್ಲಿ ದಲಿತ ಮುಖಂಡರಾಗಿದ್ದರು. ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು. ಅಂತಹವರ ಕೊಲೆ ಆಗಿರೋದು ದಿಗ್ಭ್ರಮೆ ಮೂಡಿಸಿದೆ ಎಂದರು. ಕೊಲೆಗೆ ರಾಜಕೀಯ ಬಣ್ಣವನ್ನು ಕಟ್ಟುವುದು ಬೇಡ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಪೆÇಲೀಸರು ಈಗಾಗಲೇ ಶಂಕಿತರನ್ನ ಬಂಧಿಸಿದ್ದಾರೆ. ಸರ್ಕಾರ ಕೂಡ ಇದನ್ನ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು. ಈ ರೀತಿಯ ಅಮಾನುಷ ಕೃತ್ಯಯನ್ನೂ ನಡೆಸಿದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳ ಆಗಿರಲಿ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವುದು ಸರ್ಕಾರದ ಕರ್ತವ್ಯವಾಗಿದ್ದು ಇದರಿಂದ ಇಂತಹ ಘಟನೆಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸಲು ಇಲಾಖೆಗೆ ಪೂರ್ಣ ಅಧಿಕಾರವನ್ನು ಕೊಡಲಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾತನಾಡಿ ಗುಬ್ಬಿ ಪಟ್ಟಣದಲ್ಲಿ ದಲಿತ ಮುಖಂಡ ಕುರಿಮೂರ್ತಿ ಅವರ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಹಿಂದೆ ಸ್ಥಳೀಯರು ಹಾಗೂ ಹೊರಗಿನವರು ಸೇರಿ ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ತನಿಖೆ ನಂತರ ಪೂರ್ಣ ಮಾಹಿತಿ ತಿಳಿಯಲಿದೆ ಎಂದರು.
ಕುರಿಮೂರ್ತಿ ಅವರ ವೈಯಕ್ತಿಕ ದ್ವೇಷದ ಕಾರಣದಿಂದ ಈ ಹತ್ಯೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಗುಪ್ತಚರ ಇಲಾಖೆ ಹಾಗೂ ನಮ್ಮ ಇಲಾಖೆ ಕೃತ್ಯ ನಡೆದ ಕೇವಲ 10 ಗಂಟೆಗಳಲ್ಲಿ ಅಪರಾಧಿಗಳನ್ನು ಗುರುತಿಸಿದ್ದು ಈಗಾಗಲೇ ಕೆಲವು ವ್ಯಕ್ತಿಗಳ ಮೇಲೆ ಅನುಮಾನಸ್ಪದ ಶಂಕೆ ಮೂಡಿದ್ದು ಈ ಕೃತ್ಯ ಯನ್ನು ಎಸಗಿದ ಅಪರಾಧಿಗಳನ್ನು ತನಿಖೆಗೆ ಒಳಪಡಿಸಿದ್ದು ಮುಂದಿನ ದಿನಗಳಲ್ಲಿ ವಿಷಯವನ್ನು ತಿಳಿಸುತ್ತೇನೆ ಎಂದರು.

(Visited 5 times, 1 visits today)