ಇನ್‍ಸ್ಪೈರ್ ಅವಾರ್ಡ್: ವಿಭಾಗ ಮಟ್ಟಕ್ಕೆ ಜಿಲ್ಲೆಯಿಂದ 8 ವಿದ್ಯಾರ್ಥಿಗಳು ಆಯ್ಕೆ

 ತುಮಕೂರು :

      : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜನವರಿ 31 ಹಾಗೂ ಫೆಬ್ರವರಿ 1ರಂದು ನಡೆದ ಜಿಲ್ಲಾಮಟ್ಟದ ಇನ್‍ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 8 ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

      ಬಟವಾಡಿಯ ಚೇತನ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿ ತೇಜಸ್, ಶ್ರೀ ಸಿದ್ಧಗಂಗಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಂ.ಎಸ್. ಯಶಸ್, ಶ್ರೀ ಸಿದ್ಧೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಗಿರೀಶ್, ಕೆಸರುಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೀತಿ, ಬ್ಯಾತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿನ್ಮಯಿ, ದೊಡ್ಡವೀರನಹಳ್ಳಿ ಜಿಹೆಚ್‍ಪಿಎಸ್ ಶಾಲೆಯ ಎಲ್.ಎಸ್.ಜಯಣ್ಣ, ಕ್ಯಾತ್ಸಂದ್ರ ನಿವೇದಿತಾ ಪ್ರೌಢ ಶಾಲೆಯ ಶಿವಣ್ಣಗೌಡ, ಸತ್ಯಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿ.ಅಮೃತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 16 times, 1 visits today)

Related posts

Leave a Comment