ಚಿಕ್ಕನಾಯಕನಹಳ್ಳಿ:


ಕುರುಬರ ಜಾಗೃತಿ ಸಮಾವೇಶದ ಕಾರ್ಯಕ್ರಮವೊಂದರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಸಿ.ಬಿ ಸುರೇಶ್ ಬಾಬು ಅಭಿಮಾನಿಗಳು ಸಮಾರಂಭದಲ್ಲಿ ಸುರೇಶ್‍ಬಾಬು ಹೆಸರನ್ನು ಕೈಬಿಟ್ಟಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳ ಕೀರಾಟ ಸಂಘಟನಾಕಾರರು ಸುರೇಶ್ ಬಾಬು ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಮಧುಗಿರಿಯ ಮಾಜಿ ಶಾಸಕ ಕೆ ಎನ್ ರಾಜಣ್ಣನವರು ಸುರೇಶ್ ಬಾಬು ಅವರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಇಡೀ ಸಮಾಜದ ಎದುರು ಸವಾಲೆಸೆಯುವ ಮೂಲಕ ಆಹ್ವಾನ ನೀಡಿ ಸುರೇಶ್ ಬಾಬು ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದರು.
ಈ ಸುದ್ದಿ ಇಡೀ ಜಿಲ್ಲೆಯಾದ್ಯಂತ ಹರಡುತ್ತಿದ್ದಂತೆ ಮಾಜಿ ಶಾಸಕ ಸಿ ಬಿ ಸುರೇಶ್ ಬಾಬು ಅವರಲ್ಲಿ ಅವರ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ವತಹ ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ಮಾಜಿ ಶಾಸಕ ಕೆ ಎನ್ ರಾಜಣ್ಣನವರು ಅವರ ಸದುದ್ದೇಶ ಒಳ್ಳೆಯದೇ ಆಗಿರಬಹುದು ಆದರೆ ಮೂಲತಹ ಕೆ ಎನ್ ರಾಜಣ್ಣನವರು ಕಾಂಗ್ರೆಸ್ಸಿನಲ್ಲಿ ಇದ್ದರೂ ಅವರಿಗೆ ವಿಧಾನಪರಿಷತ್ ಟಿಕೆಟ್ ಕಾಂಗ್ರೆಸ್ ಪಕ್ಷ ನೀಡದೆ ವಿಎಸ್ ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದ ಸಂದರ್ಭದಲ್ಲಿ ಇವರಿಗೆ ಸನ್ಮಾನ್ಯ ದೇವೇಗೌಡರು ಟಿಕೆಟ್ ನೀಡುವ ಮೂಲಕ ಇವರನ್ನು ಗುರುತಿಸಿದ್ದರು ಇವರ ಹಾಗೆ ನಾವು ಸಾಂದರ್ಭಿಕ ರಾಜಕಾರಣ ಎಂದೂ ಮಾಡುವುದಿಲ್ಲ ಪಕ್ಷದ ನಿಷ್ಠರಾಗಿ ಇರುತ್ತದೆ ವಿನಹ ಕೇವಲ ನಮ್ಮ ರಾಜಕೀಯ ಲಾಭಕ್ಕಾಗಿ ಸಾಂದರ್ಭಿಕ ರಾಜಕಾರಣವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವುದಿಲ್ಲ.
ಜಿಲ್ಲೆಯಲ್ಲಿ ಕುರುಬ ಜನಜಾಗೃತಿ ಸಮಾವೇಶ ಆರಂಭಕ್ಕೂ ಮುನ್ನ ಕಾರ್ಯಕರ್ತರೊಂದಿಗೆ ನಾವು ಸಂಪೂರ್ಣ ಸಹಕರಿಸಿದ್ದು ಆ ಕಾರ್ಯಕರ್ತರು ನಮ್ಮ ಜನಾಂಗದ ಸಮಾವೇಶ ದಂತೆ ಆರಂಭದಲ್ಲಿ ನಡೆದುಕೊಂಡು ಆನಂತರ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಇಡೀ ಸಮಾಜವನ್ನು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ಆ ಕಾರ್ಯಕರ್ತರು ನಡೆದುಕೊಂಡರು ಹೀಗಿರುವಾಗ ನಮ್ಮ ಸಮಾಜದ ಕಾರ್ಯಕ್ರಮ ನಮಗೆ ಹೆಚ್ಚು ಆದರೂ ಇಲ್ಲಿನ ಸ್ಥಳೀಯ ಕಾರ್ಯಕರ್ತರು ಕೊನೆ ಹಂತದಲ್ಲಿ ನಡೆದುಕೊಂಡ ರೀತಿಯಿಂದಾಗಿ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ ಆದರೂ ನನ್ನ ಕಾರ್ಯಕರ್ತರು ನನ್ನ ಅಭಿಮಾನಿಗಳು ನಮ್ಮ ಸಮಾಜದ ಅಭಿಮಾನಿಗಳು ನನ್ನ ಪರವಾಗಿ ಅಲ್ಲಿ ಪ್ರತಿನಿಧಿಸಿದ್ದಾರೆ ಹೀಗಿರುವಾಗ ನನ್ನ ಅನುಪಸ್ಥಿತಿಯನ್ನು ಬಂಡವಾಳವಾಗಿಸಿಕೊಂಡು ಅವಶ್ಯಕತೆ ಎಂಬ ಪ್ರಶ್ನೆ ಇಡೀ ಜಿಲ್ಲೆಯ ಕುರುಬ ಬಾಂಧವರಲ್ಲಿ ಮೂಡದೇ ಇರದು ಈ ಪ್ರಶ್ನೆಯನ್ನು ಸ್ವತಹ ಸಿದ್ದರಾಮಯ್ಯನವರೇ ಅವರ ಭಾಷಣದಲ್ಲಿ ಎಲ್ಲೂ ಕೂಡ ಮಾತನಾಡಿಲ್ಲ ಅವರಿಗೆ ತಿಳಿಯದ ವಿಷಯ ಏನು ಇಲ್ಲ ಎಂದು ಭಾವಿಸಿದ್ದೇನೆ ಹೀಗಿರುವಾಗ ಜಿಲ್ಲೆ ಹಾಗೂ ಕ್ಷೇತ್ರದ ನನ್ನ ಕುಲಬಾಂಧವರು ಯಾರು ಹತಾಶರಾಗಬೇಡಿ ರಾಜಣ್ಣನವರ ಅವರ ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎನ್ನುವ ಮೂಲಕ ಕಾರ್ಯಕರ್ತರಿಗೂ ಹಾಗೂ ಜಿಲ್ಲೆಯ ಸಮಾಜದ ಬಂಧುಗಳಿಗೆ ಯಾರು ಹತಾಶರಾಗಬೇಡಿ ನಾನು ಸಮಾಜದ ಹಾಗೂ ನನ್ನ ಶೋಷಿತವರ್ಗಗಳ ಪರವಾಗಿ ಸಮಾಜದ ಹಿತಕಾಯಲು ಕಟಿಬದ್ಧ ನಾಗಿದ್ದೇನೆ ಎಂದು ಈ ಮೂಲಕ ತಿಳಿಸಿದರು.

(Visited 6 times, 1 visits today)