ಜಿಲ್ಲಾಧಿಕಾರಿಗಳ ಖಾತೆಯಲ್ಲಿ 12 ಕೋಟಿ : ಸಚಿವ ದೇಶಪಾಂಡೆ

ಮಧುಗಿರಿ :

      ರಾಜ್ಯದಲ್ಲಿ ಬರಗಾಲವಿದ್ದು, ಸಮಸ್ಯೆ ನಿಭಾಯಿಸಲು ಹಣದ ಕೊರತೆಯಿಲ್ಲ. 700 ಕೋಟಿ ರಾಜ್ಯದ ಬರಗಾಲಕ್ಕೆ ನೀಡಿದ್ದು, ನಿಮ್ಮ ಜನ-ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಂಚಾಯತ್ ರಾಜ್ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

      ಮಧುಗಿರಿ ತಾಲೂಕಿನ ಕಸಬಾ ಚಿನಕವಜ್ರ ಗ್ರಾಮದ ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಈ ಬಾರಿಯೂ ಮಳೆ ಕೈಕೊಟ್ಟಿದೆ. ಲೋಕಸಭೆ ಚುನಾವಣೆಯ ಪ್ರಯುಕ್ತ ಸ್ಪಂದಿಸಲು ಆಗಲಿಲ್ಲ. ಆದರೆ ಪ್ರಸ್ತುತ ಯಾವುದೇ ಸಮಸ್ಯೆಯಿಲ್ಲದೆ ಬರವನ್ನು ನಿರ್ವಹಣೆ ಮಾಡಲಾಗುವುದು. ಎಲ್ಲಿವರೆಗೂ ಮೇವು ಬ್ಯಾಂಕಿನ ಅಗತ್ಯವಿರುತ್ತದೋ ಅಲ್ಲಿಯವರೆಗೂ ಮೇವು ಹಾಗೂ ನೀರಿಗೆ ಸಾಕಷ್ಟು ಅನುದಾನವನ್ನು ನೀಡಲಾಗುವುದು. ಕೇಂದ್ರ ಸರ್ಕಾರ 3 ತಿಂಗಳ ನಂತರ ನೀರು ನೀಡಲು ಹಣಕಾಸು ಕೊಡುವುದಿಲ್ಲ. ಆದರೆ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮಾಡಿ ತಹಶೀಲ್ದಾರ್‍ರವರಿಗೆ ಅಧಿಕಾರಿ ನೀಡಿದ್ದು, ಸಾಧ್ಯವಾದಷ್ಟು ನೀರು ಮೇವು ನೀಡಲು ಆದೇಶಿಸಿದ್ದೇವೆ. ಕನಿಷ್ಟ 40 ಲಕ್ಷ ಹಣವು ತಹಶೀಲ್ದಾರ್ ಖಾತೆಯಲ್ಲೇ ಇರುವಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಕೇಂದ್ರಕ್ಕೆ ಸ್ಪಂದನೆ :

      ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡಬೇಕು ಎನ್ನುವ ಮಾತಿಗೆ ಉತ್ತರಿಸಿದ ಸಚಿವರು, ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ವಿಚಾರ ಹೋಗಿದ್ದು, ನನಗೆ ಪ್ರಸ್ತಾವನೆ ಬಂದಿಲ್ಲ. ಮುಖ್ಯಮಂತ್ರಿಗಳು ಒಪ್ಪಿದರೆ ಮೂಲಭೂತ ಸೌಕರ್ಯದ ಜೊತೆಗೆ ಐೈಜ್ಞ್ಯ ಕೇಂದ್ರವನ್ನು ಅನುಷ್ಠಾನಕ್ಕೆ ತರಲು ಮುಂದಾಗುತ್ತೇವೆ. ಈ ಬಗ್ಗೆ ಶಾಸಕ ವೀರಭದ್ರಯ್ಯನವರೆಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೂ ಇಂದು ಕೇಂದ್ರ ಮಂಡಿಸಿದ ಬಜೆಟ್‍ನಲ್ಲಿ ಸಂಪನ್ಮೂಲ ಕ್ರೂಡೀಕರಣಕ್ಕೆ ಆದ್ಯತೆ ನೀಡಿದ್ದು, ಮೂಲಭೂತ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ಸಚಿವ ದೇಶಪಾಂಡೆ ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಕೇಶ್, ಶಾಸಕ ಎಂ.ವಿ.ವೀರಭದ್ರಯ್ಯ, ಸಿಇಓ ಶುಭಾಕಲ್ಯಾಣ್, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ಎಎಸ್ಪಿ ಶೋಭಾರಾಣಿ, ತಹಶೀಲ್ದಾರ್ ನಂದೀಶ್, ಇಓ ನಂದಿನಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ನಾಗಭೂಷಣ್, ತುಂಗೋಟಿ ರಾಮಣ್ಣ, ಪಿಡಿಓ ಉತ್ತಮ್ ಹಾಗೂ ಗ್ರಾಮಕ್ಕೆ ನೀರು ನೀಡಿದ ರೈತ ದಂಪತಿಗಳಾದ ಗೌರಮ್ಮ ದೊಡ್ಡತಿಮ್ಮಯ್ಯ ಹಾಗೂ ಇತರರು ಇದ್ದರು.

(Visited 10 times, 1 visits today)

Related posts

Leave a Comment