ತುಮಕೂರು:

      ವಿವೇಕಾನಂದ ಕ್ರೀಡಾಕ್ಲಬ್ ಏಕತೆಗಾಗಿ ಓಟ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ತುಮಕೂರು ಮ್ಯಾರಥಾನ್-2019ರ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಈಥಿಯೋಪಿಯ ದ ಅಮಾನ್ಯುಲ ಅಬ್ದು ಪ್ರಥಮ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಚೈತ್ರಾ ದೇವಾಡಿಗ, ಬಾಲಕರ ವಿಭಾಗದಲ್ಲಿ ಬೈರೇಶ್, ಬಾಲಕಿಯರ ವಿಭಾಗದಲ್ಲಿ ಚರಿತಾ ಅವರುಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

      ಸ್ವಾವಿವಿವೇಕಾನಂದ ಅವರ 150ನೇ ಜನ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಈ ಮ್ಯಾರಥಾನ್ ಓಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 781 ಜನ ಕ್ರೀಡಾಪಟುಗಳು ಭಾಗವಹಿಸಿದ್ದು,ಪುರುಷರುರಿಗೆ 10 ಕಿ.ಮಿ. ಮಹಿಳೆಯರಿಗೆ, 16 ವರ್ಷದ ಒಳಗಿನ ಬಾಲಕ,ಬಾಲಕಿಯರಿಗೆ, 45 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ತಲಾ 5 ಕಿ.ಮಿ. ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

      ಪುರುಷರ 10 ಕಿ.ಮಿ.ಯಲ್ಲಿ ಮೊದಲ ಆರು ಸ್ಥಾನಗಳನ್ನು ಅಮಾನ್ಯುಲ್ ಅಬ್ದು, ಪ್ರವೀಣ್ ಕಂಬಾಳೆ, ಸಂದೀಪ್ ಟಿ.ಎಸ್., ವೆಂಕಟೇಶ್ ಕೆ.ಕೆ, ಸಂತೋಷ್, ಚಂದ್ರಕುಮಾರ್ ಪಡೆದರೆ, ಮಹಿಳಾ ವಿಭಾಗದ 5 ಕಿಮಿ.ಓಟದಲ್ಲಿ ಮೊದಲ ಐದು ಸ್ಥಾನಗಳನ್ನು ಮೂಡಿಬಿದರೆಯ ಚೈತ್ರಾದೇವಾಡಿಗ, ಪ್ರಿಯಾ, ಎಲ್.ಡಿ., ಶಾಲಿನಿ ಕೆ.ಎಸ್., ಪ್ರಿಯಾಂಕ ಹೆಚ್.ಬಿ, ಹಷೀತಾ ಕೆ., ಹಾಗೂ ಬೆಂಗಳೂರಿನ ಸಹನ ಪಡೆದರು.

       16 ವರ್ಷದೊಳಗಿನ ಬಾಲಕರ ಐದು ಕಿ.ಮಿ. ಓಟದಲ್ಲಿ ಶಿವಮೊಗ್ಗ ಬೈರೇಶ್,ಎಸ್,ಡಿ, ಮೂಡಬಿದರೆಯ ದಶರಥ, ಕೋಲಾರದ ನಿರಂಜನ್ ಮೊದಲು ಮೂರು ಸ್ಥಾನ ಪಡೆದರು. ಹಾಗೆಯೇ ಬಾಲಕಿಯರ ವಿಭಾಗದಲ್ಲಿ ಮೂಡಬಿದರೆಯ ಚರಿತಾ ಎನ್.ಸಿ, ಪವಿತ್ರಾ ಹೆಚ್.ಕೆ, ಹಾಗೂ ತುಮಕೂರಿನ ಬಿಲ್ವಶ್ರೀ ಎಸ್.ಪಡೆದರು.

      45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ದಾವಣಗೆರೆಯ ಅಣ್ಣಪ್ಪ ಕೆ.ಹೆಚ್, ಬೆಂಗಳೂರಿನ ಎನ್.ವಿ.ನಂಜುಂಡೇಶ್ವರಬಾಬು ಮತ್ತು ತುಮಕೂರಿನ ವಿರೂಪಾಕ್ಷ ಮಾರೆನವರ್ ಮೊದಲ ಮೂರು ಸ್ಥಾನ ಪಡೆದರು.ಮಹಿಳೆಯರ ವಿಭಾಗದಲ್ಲಿ ತುಮಕೂರಿನ ನಂದಿನಿ ಸರಸ್ವತಿ, ದಾವಣಗೆರೆಯ ಹೆಚ್.ಎಲ್.ಜೋತಿ, ತುಮಕೂರಿನ ಉಮಾದೇವಿ ಅವರುಗಳು ಮೊದಲು ಮೂರು ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮಗೆರೆ ದಾಟಿದ ಎಲ್ಲಾ ಸ್ಪರ್ಧಾಳುಗಳಿಗೂ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

      ತುಮಕೂರು ಮ್ಯಾರಥಾನ್ 2019ನ ಏಕತಾ ಓಟಕ್ಕೆ ಶಾಸಕ ಜೋತಿ ಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್,ವಿವೇಕಾನಂದ ಕ್ರೀಡಾಕ್ಲಬ್‍ನ ಅಧ್ಯಕ್ಷ ರಾಮಕೃಷ್ಣ ಚಾಲನೆ ನೀಡಿದರು.

      ನಗರದ ಸರಕಾರಿ ಕಿರಿಯ ಕಾಲೇಜು ಮೈದಾನದಿಂದ ಆರಂಭವಾದ ಓಟ, ಟೌನ್ ಹಾಲ್, ಕೋಡಿಬಸವೇಶ್ವರ ದೇವಾಲಯ, ಶಿವಕುಮಾರಸ್ವಾಮೀಜಿ ಸರ್ಕಲ್, ಎಸ್.ಐ.ಟಿ. ಮುಖ್ಯರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ, ರಾಧಾಕೃಷ್ಣ ರಸ್ತೆಯ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂತ್ಯಕಂಡಿತ್ತು. 82 ವರ್ಷ ವಯಸ್ಸಿನ ನಿವೃತ್ತಿ ಸೇನಾ ವಿಂಗ್ ಕಮಾಂಡರ್ ಮಣಿ 5 ಕಿ.ಮಿ. ಓಟ ಪೂರೈಸಿ ಎಲ್ಲರ ಗಮನ ಸೆಳೆದರು.

      ವಿಜೇತರಿಗೆ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಪಾಲಿಕೆ ಸದಸ್ಯ ಗಿರಿಜಾ ಧನಿಯಕುಮಾರ್, ವಿವೇಕಾನಂದ ಕ್ರೀಡಾಕ್ಲಬ್‍ನ ಸಂಸ್ಥಾಪಕರಾದ ಎಸ್.ಡಿ.ರಾಜಶೇಖರ್, ಚಂದನ್‍ಕುಮಾರ್ ವಿತರಿಸಿದರು.ವೇದಿಕೆಯಲ್ಲಿ ವಿನಯ ಟಿ.ಎಸ್.ದಿಲೀಪ್, ಪ್ರದೀಪ್, ರಾಘವೇಂದ್ರ, ಹರೀಶ್, ಎಕಲವ್ಯ ಪ್ರಶಸ್ತಿ ವಿಜೇತ ಸಿದ್ದಲಿಂಗಮೂರ್ತಿ,ಗುರುಪ್ರಸಾದ್,ಇಂಡಿಯನ್ ಟೀಮ್ ಲೀಡರ್ ಸಿದ್ದಲಿಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

(Visited 78 times, 1 visits today)