ತುಮಕೂರು:

      ತುಮಕೂರು ಮಹಾನಗರ ಪಾಲಿಕೆ ವತಿಯಿಂದ ದಿನಾಂಕ: 18/7/2020 ರಂದು ಕರೆದಿದ್ದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‍ನಲ್ಲಿ ಲಂಚಪಡೆದು ಭ್ರಷ್ಟಾಚಾರವೆಸಗಿ ತಮಗೆ ಬೇಕಾದ ಗುತ್ತಿಗೆದಾರರ ಹೆಸರಿಗೆ ಟೆಂಡರ್ ನಿಲ್ಲಿಸಲು ಹೊರಟಿದ್ದ ಕಿರಿಯ ಅಭಿಯಂತರ ಕಿರಣ್.

      ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ದಿನಾಕ: 18-7-2020 ರಂದು ಟೆಂಡರ್ ಕರೆಯಲಾಗಿದ್ದು, ದಿನಾಂಕ:3-8-2020ಕ್ಕೆ ಆನ್‍ಲೈನ್ ಟೆಂಡರ್ ಸಲ್ಲಿಸುವ ಅವಧಿ ಮುಕ್ತಾಯವಾಗಿರುತ್ತದೆ. ಅವುಗಳ ಪೈಕಿ ವಿದ್ಯುತ್ ಮತ್ತು ನೀರು ಸರಬರಾಜು ಕುರಿತು ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಮಯದಲ್ಲಿ ಕಿರಿಯ ಅಭಿಯಂತರರಾದ ಕಿರಣ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪಿ.ಆರ್.ವಸಂತಕುಮಾರ್‍ರವರುಗಳು ಉದ್ದೇಶಪೂರ್ವಕವಾಗಿ ಸರ್ಕಾರದ ಮಾರ್ಗದರ್ಶಿ, ಸೂಚನೆಗಳನ್ನು ಬದಿಗೆ ಸರಿಸಿ ಅಕ್ರಮ ಟೆಂಡರ್ ಕರೆದಿರುತ್ತಾರೆ. ಸ್ಟ್ಯಾಂಡರ್ಡ್ ಬಿಡ್ ಡಾಕ್ಯುಮೆಂಟ್ (ಏW 1) ಅಧಿನಿಯಮದ ಅಡಿಯಲ್ಲಿ ಟೆಂಡ್ ಕೆರೆಯಲಾಗಿದ್ದು, ಸದರಿ ನಿಯಮಾವಳಿಗಳನ್ನು ಧಿಕ್ಕರಿಸಿ ತಮಗೆ ಬೇಕಾದವರಿಗೆ ಅಕ್ರವಾಗಿ ಟೆಂಡರ್ ನಿಲ್ಲಿಸುವ ದುರುದ್ದೇಶದಿಂದ ಲಂಚದ ಹಣ ಪಡೆದು ಭ್ರಷ್ಟಾಚಾರವೆಸಗಿ ಪಾರದರ್ಶಕ ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ
ಇಂಡೆಂಟ್ ನಂ 104159, 104158, 104157, 104156, ರಿತ್ಯಾ ಆನ್ಲೈನ್ ಟೆಂಡರ್ ಕರೆಯಲಾಗಿರುತ್ತದೆ.

ಕಿರಣ್, ಕಿರಿಯ ಅಭಿಯಂತರ
ವಸಂತ್ ಕುಮಾರ್, ಎಇಇ

      ಟೆಂಡರ್ ನಿಯಮಾವಳಿಗಳ ಪ್ರಕಾರ ಗುತ್ತಿಗೆ ಪರವಾನಗಿಯನ್ನು ಹೊರತುಪಡಿಸಿ ಮತ್ತಿನ್ಯಾವುದೇ ಶರತ್ತುಗಳನ್ನು ವಿಧಿಸುವಂತಿಲ್ಲ. ಆದರೆ ದುರುದ್ದೇಶ ಪೂರ್ವಕವಾಗಿ ಸ್ಪರ್ಧಾತ್ಮಕ ದರಗಳ ಪಾರದರ್ಶಕತೆಯನ್ನು ಕಡಿತಗೊಳಿಸುವ ಸಲುವಾಗಿ ಆನ್ಲೈನ್‍ನಲ್ಲಿ ಯಾವುದೇ ಪ್ರೈಸ್ ರೇಟ್ ನಮೂದು ಮಾಡದೇ ತಮಗೆ ಬೇಕಾದವರಿಗೆ ತಮ್ಮ ಬಳಿ ಕರೆಸಿಕೊಂಡು ಮೌಖಿಕವಾಗಿ ದರ ತಿಳಿಸುವ ಮುಖೇನ ತಮಗೆ ಬೇಕಾದ ಗುತ್ತಿಗೆದಾರರಿಗೆ ಅಕ್ರಮವಾಗಿ ಟೆಂಡರ್ ನೀಡಲು ಸಂಚು ರೂಪಿಸಿದ್ದರು.

      ಸದರಿ ಗುತ್ತಿಗೆದಾರರಿಂದ ಗುತ್ತಿಗೆ ನೀಡುವ ಸಲುವಾಗಿಯೇ ಲಂಚ ಪಡೆದಿರುತ್ತಾರೆ ಎನ್ನುವ ಅಪಾದನೆ ಇದ್ದು, ಲಂಚ ನೀಡಿದ ಗುತ್ತಿಗೆದಾರರು ಕಿರಿಯ ಅಭಿಯಂತರರಾದ ಕಿರಣ್‍ರವರ ಆತ್ಮೀಯ ವಲಯದವರಾಗಿದ್ದಾರೆ ಎನ್ನಲಾಗಿದೆ. ಇವರಿಂದ ಲಂಚ ಪಡೆದು ಹಣ ನೀಡಿದವರ ಹೆಸರಿಗೆ ಟೆಂಡರ್ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ವದಂತಿ ಇದ್ದು. ಸದರಿ ವಿಷಯದ ಸಹಾಯಕ ಕಾರ್ಯಾಪಾಲಕ ಅಭಿಯಂತರರಾದ ವಸಂತ್‍ಕುಮಾರ್ ದಿನಾಂಕ:13-07-2020 ರಿಂದ 27-07-2020ರ ವರೆಗೆ ಪಿತೃ ರಜೆಯ ಮೇಲೆ ತೆರಳಿದ್ದು ಆ ಸಮಯದಲ್ಲಿ ಅವರ ಡಿಜಿಟಲ್ ಕಿ ಬಳಸಿ ವಸಂತ್‍ಕುಮಾರ್‍ರವರ ಹೆಸರಿನಲ್ಲಿಯೇ ಟೆಂಡರ್ ಕರೆದಿರುತ್ತಾರೆ.

       ದಿನಾಂಕ:28-07-2020ರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಆದರೆ ವಸಂತ್‍ಕುಮಾರ್‍ರವರಿಗೆ ಪಾಲಿಕೆ ನೀಡಿರುವ ಡಿಜಿಟಲ್ ಕಿ ಬಳಕೆ ಮಾಡಿ ಟೆಂಡರ್ ಕರೆಯಲಾಗಿದೆ. ರಜೆಯಲ್ಲಿ ತೆರಳಿರುವ ಅಧಿಕಾರಿಯ ಡಿಜಿಟಲ್ ಕಿಯನ್ನು ಅವರ ಹೆಸರಿನಲ್ಲಿ ಬಳಕೆ ಮಾಡಿಕೊಂಡು ಟೆಂಡರ್ ಕರೆದಿರುತ್ತಾರೆ ಇದು ಸರಿಯೇ..? ಆನ್‍ಲೈನ್ ಪ್ರೋಟಾಲ್‍ನಲ್ಲಿ ವಸಂತ್‍ಕುಮಾರ್ ಮತ್ತು ಕಿರಿಣ್‍ರವರ ಹೆಸರು ನಮೂದಾಗಿರುತ್ತದೆ. ಸದರಿ ಟೆಂಡರ್ ಅವದಿ ಮುಕ್ತಾಯವಾಗಿದ್ದು, ಟೆಂಡರ್‍ರನ್ನು ಓಪನ್ ಮಾಡದಂತೆ ಹಾಲಿ ಕಾರ್ಯಪಾಲಕ ಅಭಿಯಂತರ ತಿಪ್ಪೇರುದ್ರಪ್ಪ ನಿರ್ದೇಶನ ನೀಡಿರುತ್ತಾರೆ.

      ಟೆಂಡರ್ ಓಪನ್ ಮಾಡದೆ ತಡೆಯಿಡಿದಿರುವುದನ್ನು ಗಮನಿಸಿದರೆ ಭಾರಿ ಪ್ರಮಾಣದ ಭ್ರಷ್ಟಾಚಾರ ಗೋಚರವಾಗುತ್ತದೆ. ಅಧೀಕ್ಷಕ ಅಭಿಯಂತರವರ ಕೃಪಕಟಾಕ್ಷದಿಂದ ಕಿರಿಯ ಅಭಿಯಂತರ ಕಿರಣ್ ಈ ರೀತಿಯ ಯಡವಟ್ಟುಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಧೀಕ್ಷಕ ಅಭಿಯಂತರರ ಹುದ್ದೆಗೆ ಸಮರ್ಥರಲ್ಲದ ಮಹೇಶ್‍ರವರ ಕೃಪಾಶೀರ್ವಾದವೇ ಕಿರಣ್ ಮಾಡುತ್ತಿರುವ ಟೆಂಡರ್ ಗೋಲ್‍ಮಾಲ್‍ಗೆ ಬಹುಮುಖ್ಯ ಕಾರಣವೆನ್ನಲಾಗುತ್ತಿದೆ.

ರೇಣುಕಾ, ಆಯುಕ್ತರು
ತಿಪ್ಪೇರುದ್ರಪ್ಪ, ಇಇ

      ಸಹಾಯಕ ಕಾರ್ಯಪಾಲಕ ಅಭಿಯಂತರರು ಇಲ್ಲದ ಸಮಯದಲ್ಲಿ ಟೆಂಡರ್ ಕರೆಯಬಾರದೆಂಬ ಸಾಮಾನ್ಯ ಅರಿವು ಕಿರಿಯ ಅಭಿಯಂತರರಿಗೆ ಇರಲಿಲ್ಲವೇ. ಇಂತಹ ನಿಯಮಗಳು ಇಂಜಿನಿಯರ್ ಕಿರಣ್ ಗಮನಕ್ಕೆ ಬಂದಿರಲಿಲ್ಲವೇ..? ಅಂತಹ ಸಾಮಾನ್ಯ ಜ್ಞಾನ ಜೆಇ ಕಿರಣ್‍ಗೆ ಇಲ್ಲದಾಯಿತೇ..? ಮೊನ್ನೆ ಮೊನ್ನೆ ಪ್ರೊಬೇಷನರಿ ಡಿಕ್ಲಿಯರ್ ಮಾಡಿಕೊಂಡಿರುವ ಕಿರಣ್ ಕುಮಾರ್ ಇಂತಹ ಯಡವಟ್ಟು ಮಾಡಿಕೊಂಡಿರುವುದು ಸರಿಯೇ ಟೆಂಡರ್ ಕರೆಯುವ ಸಂದರ್ಭದಲ್ಲಿ ಧರ ನಿಗಧಿ ಮಾಡದೆ ಟೆಂಡರ್ ಕರೆದು ಮಾಡಬಾರದ ಯಡವಟ್ಟು ಮಾಡಿ ಸಿಕ್ಕಿಹಾಕಿಕೊಂಡ ಕಿರಣ್‍ಕುಮಾರ್‍ರವರ ಬಗ್ಗೆ ಪಾಲಿಕೆಯ ಅಂಗಳದಲ್ಲಿ ಗುಸುಗುಸು ಹಬ್ಬಿದೆ.

      ಈ ಪ್ರೋಟಾಲ್‍ನಲ್ಲಿ ಐಟಮ್‍ವೈಸ್ ರೇಟ್ ಕೋಟ್ ಮಾಡಿರುವುದಿಲ್ಲ. ಕಂಟ್ರ್ಯಾಕ್ಟರ್ ಸ್ವಂತವಾಗಿ ಧರ ನಮೂದು ಮಾಡಲು ಅಂದಾಜು ಮೊತ್ತವನ್ನು ಸಹಾ ಕೊಟ್ಟಿರುವುದಿಲ್ಲ. ಇವುಗಳಿಂದ ಗೊಂದಲಕ್ಕೀಡಾಗಿ ಗುತ್ತಿಗೆದಾರರು ಟೆಂಡರ್ ಹಾಕದೆ ಹಿಂದುಳಿಯುತ್ತಾರೆ. ಅಂತಹ ಸಂದರ್ಭದಲ್ಲಿ ತಮಗೆ ಬೇಕಾದ ಗುತ್ತಿಗೆದಾರರಿಗೆ ನಿಗಧಿತ ಧರವನ್ನು ಮೌಖಿಕವಾಗಿ ತಿಳಿಸಿ ಕಾನೂನು ಬಾಹಿರವಾಗಿ ಟೆಂಡರ್ ನಿಲ್ಲಿಸುವ ಹುನ್ನಾರ ನಡೆದಿತ್ತು.

      ಏW 1 ರಲ್ಲಿ ಟೆಂಡರ್ ಕರೆಯುವಾಗ ಗುತ್ತಿಗೆ ಪರವಾನಗಿ ಹೊರತುಪಡಿಸಿ ಯಾವುದೇ ಷರತ್ತುಗಳನ್ನು ವಿಧಿಸಬಾರದು ಎನ್ನುವ ನಿಮಯವಿದ್ದರು. ದುರುದ್ದೇಶದಿಂದಲೇ ಕಾನೂನುಬಾಹಿರವಾಗಿ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಷರತ್ತುಗಳನ್ನು ವಿಧಿಸಿ ಆಸಕ್ತ ಗುತ್ತಿಗೆದಾರರ ಮನಸ್ಥಿತಿಯನ್ನು ಕುಗ್ಗಿಸಿ ಟೆಂಡರ್ ಹಾಕದಂತೆ ತಡೆಯುವ ಪ್ರಯತ್ನವನ್ನು ಜೆಇ ಕಿರಣ್ ಮಾಡಿರುತ್ತಾರೆ.

      ಇದಲ್ಲದೆ ತಡರಾತ್ರಿ 12ರ ನಂತರದ ಸಮಯದಲ್ಲಿ ಟೆಂಡರ್‍ಗಳನ್ನು ಕರೆಯುತ್ತಿರುವ ಕಿರಣ್ ಬಗ್ಗೆ ಮತ್ತಷ್ಟು ಅನುಮಾನ ಹೆಚ್ಚಾಗುತ್ತಿದೆ. ಈ ಎಲ್ಲಾ ಅವಾಂತರಗಳಿಗೆ ಅಧೀಕ್ಷಕ ಅಭಿಯಂತರ ಮಹೇಶ್ ಕೃಪಾಶೀರ್ವಾದವಿದೆ ಎನ್ನುವ ವಿಷಯ ಪಾಲಿಕೆಯ ಮೊಗಸಾಲೆಯಲ್ಲಿ ಅಡ್ಡಾಡುತ್ತಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆದರೆ ತಿಳಿಯುತ್ತದೆ. ಆಯುಕ್ತೆ ರೇಣುಕರವರು ತನಿಖೆಗೆ ಆದೇಶಿಸುತ್ತಾರ ಅಥವಾ ಭ್ರಷ್ಟರ ರಕ್ಷಣೆಗೆ ನಿಲ್ಲುತ್ತಾರ ಕಾದು ನೋಡಬೇಕಿದೆ.

(Visited 67 times, 1 visits today)