ತುಮಕೂರು:

ನಗರದ ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ ನಂಜುಂಡೇಶ್ವರ ಹೋಟೆಲ್ ಸಭಾಂಗಣದಲ್ಲಿ ಡಾ.ಎಂ. ಬಿ. ನವೀನ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು. ಭಗವದ್ಗೀತೆಯ ಅಧ್ಯಾಯಗಳು ನಮ್ಮ ಸಮಾಜದವರಿಗೆ ಸುಧಾರಣೆಯಾಗಿದೆ. ಹಾಗೆ ನಮ್ಮ ರಾಜ್ಯದ ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪೆÇಲೀಸರು ಅಧ್ಯಾಯದ ಸ್ಥಾನದಲ್ಲಿ ಶ್ರೇಷ್ಠ ತನವನ್ನು ಹೊಂದಿರುತ್ತಾರೆ
ಎಂದು ನಿವೃತ್ತ ಹಿರಿಯ ಪೆÇಲೀಸ್ ಅಧಿಕಾರಿ ಶಂಕರ್ ಬಿದರಿ ತಿಳಿಸಿದರು.
ನಮ್ಮ ಇಲಾಖೆ ರಾಜ್ಯದ ಸುಧಾರಣೆಗೆ ವಿವಿಧ ಭಾಗಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಷ್ಠಾವಂತ ಪ್ರಾಮಾಣಿಕ ದಕ್ಷ ಕರ್ತವ್ಯ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿರುವ ಪೆÇಲೀಸರ ಕರ್ತವ್ಯಕ್ಕೆ ಸಮಾಜ ಉನ್ನತವಾದ ಸ್ಥಾನಮಾನವನ್ನು ನೀಡುತ್ತಿದೆ ಎಂದು ತಿಳಿಸಿದರು.

ತುಮಕೂರು ಹಿರೇಮಠದ ಮಠಧ್ಯಕ್ಷರಾದ ಶ್ರೀ ಡಾ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಕರ್ತವ್ಯವೇ ದೇವರೆಂದು ನಂಬಿರುವಂತಹ ಪೆÇಲೀಸ್ ಇಲಾಖೆಯನ್ನು ಭಗವದ್ಗೀತೆಯ ರೂಪದಲ್ಲಿ ಸತ್ಯ ಪ್ರಾಮಾಣಿಕ ನಿಷ್ಠೆ ಕಾರ್ಯರೂಪ ಯಶಸ್ವಿಯಾಗಲು ಈ ರೀತಿಯ ಹಿರಿಯ ನಿವೃತ್ತ ಪೆÇಲೀಸ್ ಅಧಿಕಾರಿಗಳಾದ ಶಂಕರ್ ಬಿದರಿ ರವರ ಮಾರ್ಗದರ್ಶನ ಹಾಗೂ ಅವರ ಕರ್ತವ್ಯ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸುತ್ತಿತ್ತು. ಅದೇ ಮಾರ್ಗದಲ್ಲಿ ಗ್ರಾಮೀಣ ಭಾಗದಿಂದ ಉನ್ನತ ಶಿಕ್ಷಣವನ್ನು ಪಡೆದು ಹತ್ತು ಚಿನ್ನದ ಪದಕವನ್ನು ಪಡೆದು ಶಿಕ್ಷಣ ಕ್ಷೇತ್ರದಿಂದ ಕರ್ತವ್ಯವೇ ದೇವರೆಂದು ನಂಬಿದ ಪೆÇಲೀಸ್ ಇಲಾಖೆಗೆ ಕರ್ತವ್ಯ ನಿರ್ವಹಿಸುತ್ತಿರುವ ವೃತ್ತ ನಿರೀಕ್ಷಕ ಎಂ.ಬಿ ನವೀನ್ ಕುಮಾರ್ ರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ ಪುರಸ್ಕೃತರಾಗಿದ್ದರು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಅವರ ಶ್ರೇಯೋಭಿವೃದ್ಧಿಗೆ ಅವರ ತಂದೆಯವರಾದ ಮರಿಬಸಪ್ಪರವರು ಅವರ ತಾಯಿಯವರಾದ ಮಂಜುಳಮ್ಮರವರ ಆಶೀರ್ವಾದ ದೈವಕೃಪೆಯಿಂದ ಮುನ್ನಡೆದಿದ್ದಾರೆ ಎಂದರು.
ಪೆÇೀಲಿಸ್ ಇಲಾಖೆಯಲ್ಲಿ ಕಠಿಣವಾದ ಕರ್ತವ್ಯದ ಸಮಯದಲ್ಲಿ ತಮ್ಮ ಆದರ್ಶ ತತ್ವಗಳನ್ನು ಹಾಗೂ ಜ್ಞಾನಾರ್ಜನೆಯ ಸಮಯವನ್ನು ಅತಿ ಹೆಚ್ಚು ಒತ್ತು ನೀಡಿ ಪವಿತ್ರತೆಯನ್ನು ಕಾಪಾಡಿ ಮಹಾ ಪ್ರಬಂಧವನ್ನು ಮಂಡಿಸಿದ
ಡಾ.ಎಂ ಬಿ.ನವೀನ್ ಕುಮಾರಿಗೆ ಅಭಿನಂದನೆಗಳು ಎಂದು ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಜಿ ಕೃಷ್ಣಪ್ಪರವರು ತಿಳಿಸಿದರು.


ರಾಜ್ಯ ಪೆÇಲೀಸ್ ಸಂಘಟನೆ ಮತ್ತು ಆಡಳಿತಕ್ಕೆ ಡಾ.ಶಂಕರ ಬಿದರಿ ರವರ ಕೊಡುಗೆ ಒಂದು ಅಧ್ಯಯನ ವಿಷಯದ ಕೇಂದ್ರ ಬಿಂದುವಾಗಿದೆ. ಬಿದರಿರವರ ಆಡಳಿತಾತ್ಮಕ ವಿಷಯಗಳು ಅವರ ಆತ್ಮಕಥೆಯಲ್ಲಿ ಉತ್ತಮ ಆಡಳಿತಾತ್ಮಕ ಸುಧಾರಣೆಗಳ ಚರ್ಚೆಯಾಗಿದೆ. ಆರ್ಥಿಕ ಅಪರಾಧಗಳ ತನಿಖಾ ಕ್ರಮಗಳು, ಭೂ ವ್ಯಾಜ್ಯಗಳ ತನಿಖಾ ಕ್ರಮಗಳು, ಮೆರವಣಿಗೆ ಮಾಲ್ ಮಲ್ಟಿಪ್ಲೆಕ್ಸ್ ವಿಷಯಗಳು ಕಾವೇರಿ ವಿವಾದ ಭುಗಿಲೆದ್ದಾಗ ವಿಶಿಷ್ಟ ಪ್ರಯತ್ನಗಳು, ಕಮಿಷನರ್ ಆದಾಗಿನ ಆಡಳಿತ ವಿಷಯಗಳು ಆಡಳಿತದಲ್ಲಿ ಮಿತವ್ಯಯ ಸಿಬ್ಬಂದಿಗಳ ಮನೋಸ್ಥೈರ್ಯ ಹೆಚ್ಚಿಸುವಲ್ಲಿ ಚಾಣಾಕ್ಷತೆ ಹಾಗೂ ಡಿಜಿ ಐಜಿಪಿ ಆಡಳಿತ ವಿಷಯಗಳು, ವೀರಪ್ಪನ್ ಕಾರ್ಯಾಚರಣೆ ಶೈಲಿ ಮುಂದೆ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯೋಗ ಎಸ್ಪಿ, ಡಿ ಐ ಜಿ , ಐಜಿಪಿ, ಎಡಿಜಿಪಿ, ಡಿಜಿ ಐಜಿಪಿ ಆಗಿದ್ದಾಗಿನ ಆಡಳಿತ ವಿಷಯಗಳ ಚರ್ಚೆಯಾಗಿದೆ ಸಮಸ್ಯೆಗಳು ಬಂದಾಗ ನಾಯಕತ್ವ ಶೈಲಿಯ ಆಡಳಿತ ವಿಧಾನದ ವಿವರಗಗಳು ಪುಸ್ತಕದಲ್ಲಿ ಅಡಕವಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಎಸ್ ಸಿದ್ದಲಿಂಗಪ್ಪ ರವರು ಹಾಗೂ ಉಮಾಮಹೇಶ್ ರವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನವೀನ್ ಕುಮಾರ್ ಅವರ ಅಭಿಮಾನಿಗಳು ಹಳೆಯ ವಿದ್ಯಾರ್ಥಿಗಳು ಶುಭಕೋರಿದರು.

(Visited 52 times, 1 visits today)