ತುಮಕೂರು:

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಗ್ರಾಮದಲ್ಲಿ ಮತ್ತು 19, 2022 ರಂದು ಎರಡು ದಿನಗಳ ಕಾಲ ನಡೆಯಲಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಭಾಗವಹಿಸಲಿದ್ದು, ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತಿದೆ.
ದಿನಾಂಕ 18-06-2022ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಕಂದಾಯ ಸಚಿವರ ಆಗಮನ ಮತ್ತು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ, 11.10 ರಿಂದ 11.30 ರವರೆಗೆ ದೇವಸ್ಥಾನದಿಂದ ಕಾರ್ಯಕ್ರಮದ ಸ್ಥಳಕ್ಕೆ ಸಚಿವರ ಆಗಮನ(ಎತ್ತಿನ ಗಾಡಿ/ಟ್ರ್ಯಾಕ್ಟರ್ ಮೂಲಕ), 11.30 ರಿಂದ 12 ಗಂಟೆ ಆರೋಗ್ಯ ಶಿಬಿರ ಉದ್ಘಾಟನೆ ಮತ್ತು ವಿವಿಧ ಮಳಿಗೆಗಳ ವೀಕ್ಷಣೆ, 12 ಗಂಟೆ ವೇದಿಕೆಗೆ ಆಗಮನ, ನಂತರ ಪ್ರಾರ್ಥನೆ, ನಾಡಗೀತೆ, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ಶಾಸಕರು ತುರುವೇಕೆರೆ ಅವರಿಂದ. ನಂತರ 12.20 ರಿಂದ 12.25 ಮಾನ್ಯ ಕಂದಾಯ ಸಚಿವರಿಂದ ಕಾರ್ಯಕ್ರಮ ಉದ್ಘಾಟನೆ ಮತ್ತು ಉದ್ಘಾಟಕರ ಭಾಷಣ, ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ವಿವಿಧ ಇಲಾಖೆಗಳಿಂದ ಸವಲತ್ತುಗಳ ವಿತರಣೆ, ಮಧ್ಯಾಹ್ನ 2 ಗಂಟೆಗೆ ಭೋಜನ ವಿರಾಮ.
ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, 6 ರಿಂದ 6.30 ಚಹಾ ವಿರಾಮ, 6.30ರಿಂದ 7.30 ಗ್ರಾಮಸಭೆ, 7.30 ರಿಂದ 9 ಸಾಂಸ್ಕøತಿಕ ಕಾರ್ಯಕ್ರಮ, 9 ರಿಂದ 10 ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ರಾತ್ರಿಯ ಊಟ, 10 ಗಂಟೆಗೆ ವಿಶ್ರಾಂತಿ.
ಮರುದಿನ ಅಂದರೆ, 19-6-2022ರ ಭಾನುವಾರ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಗ್ರಾಮ ವಿಹಾರ ಮತ್ತು ಗ್ರಾಮಸ್ಥರೊಂದಿಗೆ ಸಂವಾದ, 9.30ರಿಂದ 10.30 ರವರೆಗೆ ಹರಿಜನರ ಮನೆಯಲ್ಲಿ ಬೆಳಗಿನ ಉಪಹಾರ, 11 ಗಂಟೆಗೆ ನಿರ್ಗಮನ.

(Visited 3 times, 1 visits today)