ತುಮಕೂರು:

      ಮಾಜಿ ಪ್ರಧಾನಿ,  ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್ ಡಿ ದೇವೇಗೌಡ ಹಾಗು ಗ್ರಾಮಾಂತರ ಶಾಸಕ ಡಿ.ಸಿ.ಗೌರೀಶಂಕರ್ ವಿರುದ್ದ ಅವಹೇಳನಕಾರಿ ಮಾತನಾಡಿದ್ದ ಮಾಜಿ ಶಾಸಕ ಸುರೇಶ್ ಗೌಡರ ಉದ್ದಟತನದ ನಡವಳಿಕೆ ಖಂಡಿಸಿ ಗ್ರಾಮಾಂತರ ಭಾಗದ ಸಾವಿರಾರು ಕಾರ್ಯಕರ್ತರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯಲ್ಲಿ ಭಾನುವಾರ ಬೃಹತ್ ಮೌನ ಪ್ರತಿಭಟನೆ ನಡೆಸಿದರು.

      ನಾಗವಲ್ಲಿ ಸರ್ಕಲ್‍ನಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ, ಶಾಸಕ ಡಿ ಸಿ ಗೌರೀಶಂಕರ್ ಹಾಗು ಜೆಡಿಎಸ್ ಪಕ್ಷದ ಪರವಾಗಿ ಘೋಷಣೆ ಕೂಗಿದರು, ನಡುರಸ್ತೆಯಲ್ಲೇ ಕುಳಿತು ಜೆಡಿಎಸ್ ಪಕ್ಷದ ವರಿಷ್ಟರು ಹಾ ಶಾಸಕ ಡಿ ಸಿ ಗೌರೀಶಂಕರ್ ಮತ್ತು ಅವರ ಕುಟುಂಬದ ವಿರುದ್ದ ಅವಹೇಳನಕಾರಿ ಮಾತನಾಡಿರುವ ಮಾಜಿ ಶಾಸಕ ಸುರೇಶ್ ಗೌಡ ಬಹಿರಂಗವಾಗಿ ಹೇಳಿಕೆ ವಾಪಾಸು ಪಡೆಯುವಂತೆ ಆಗ್ರಹಿಸಿದರು.

      ಪ್ರತಿಭಟನಾನಿರತರನ್ನುದ್ದೇಶಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿಮಹೇಶ್ ಮಾತನಾಡಿ ಮಾಜಿ ಪ್ರಧಾನಿ, ದೇಶ ಕಂಡ ಅಪ್ಪಟ ರೈತನಾಯಕ, ದೀಮಂತ ರಾಜಕೀಯ ಮುತ್ಸದ್ದಿ, ತುಮಕೂರು ಲೋಕಸಭಾಕ್ಷೇತ್ರದ ಅಭ್ಯರ್ಥಿ ಹೆಚ್.ಡಿ. ದೇವೇಗೌಡ ಹಾ ಶಾಸಕ ಡಿ ಸಿ ಗೌರೀಶಂಕರ್ ಮತ್ತು ಅವರ ಕುಟುಂಬದ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡ ಆಧಾರ ರಹಿತ ಆರೋಪ ಮಾಡಿರುವುದು ಖಂಡನಾರ್ಹ, ಮಾಜಿ ಶಾಸಕ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಹತಾಶೆಗೊಳಗಾಗಿ ಮತಿಭ್ರಮಣೆಯಾಗಿದೆ, 2 ಭಾರಿ ಶಾಸಕರಾಗಿದ್ದವರಿಗೆ ಸಂಸ್ಕøತಿಯ ಪರಿಚಯವೇ ಇಲ್ಲ. ತಾವೊಬ್ಬ ವಿದ್ಯಾವಂತರಾಗಿದ್ದರೂ ಅನಾಗರೀಕರಂತೆ ವರ್ತಿಸುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವುದು ಜಿಲ್ಲೆಯ ಜನರ ಸುದೈವ,ತುಮಕೂರು ಜಿಲ್ಲೆಯ ನೀರಿನ ಭವಣೆ ನೀಗಿಸಲು ದೇವರೆ ದೇವೇಗೌಡರನ್ನು ನಮಗೆ ಕರುಣಿಸಿದ್ದಾರೆ.ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು 2-3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವುದಾಗಿ ಭರವಸೆಯಿತ್ತರಿಲ್ಲದೆ, ಬಿಜೆಪಿ ರಾಜಾಧ್ಯಕ್ಷರು ಮಾಜಿ ಶಾಸಕ ಸುರೇಶ್ ಗೌಡರನ್ನು ಒಳ್ಳೆ ಆಸ್ಪತ್ರೆಗೆ ಧಾಖಲಿಸಿ ಮತಿಭ್ರಮಣೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಒತ್ತಾಯ ಮಾಡಿದರು.

      ಜೆಡಿಎಸ್ ಮುಖಂಡ ಲಾಟರೀ ನಾರಾಯಣಪ್ಪ ಮಾತನಾಡಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗು ಶಾಸಕ ಡಿ ಸಿ ಗೌರೀಶಂಕರ್ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡಲು ಮಾಜಿ ಶಾಸಕ ಸುರೇಶ್ ಗೌಡರಿಗೆ ಯೋಗ್ಯತೆ ಇಲ್ಲ, ಸೋಲಿನ ಹತಾಶೆಯಿಂದ ಮಾಜಿ ಶಾಸಕರಿಗೆ ಮತಿ ಭ್ರಮಣೆಯಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಹಾಗು ಮಾಜಿ ಸಚಿವರಾದ ಸಿ ಚನ್ನಿಗಪ್ಪ ಶಾಸಕ ಡಿ.ಸಿ.ಗೌರೀಶಂಕರ್ ಮತ್ತು ಅವರ ಕುಟುಂಬದ ಸದಸ್ಯರು ಯಾರನ್ನು ಏಕವಚನದಲ್ಲಿ ನಿಂದಿಸಿಲ್ಲ. ಮಾಜಿ ಶಾಸಕರು ವಿದ್ಯಾವಂತ ಅವಿವೇಕಿಯಂತೆ ಹೇಳಿಕೆ ನೀಡುತ್ತಿದ್ದಾರೆ, ಶಾಸಕರ ಉದ್ದಟನತನದ ಹೇಳಿಕೆಗಳು ಹೀಗೆ ಮುಂದುವರೆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

       ತಾಲ್ಲುಕು ಯುವ ಘಟಕದ ಅಧ್ಯಕ್ಷ ಸುವರ್ಣಗಿರಿಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಊರ್ಡಿಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ವಿಷ್ಣುವರ್ಧನ್,ಎಸ್ ಸಿ ಘಟಕದ ಅಧ್ಯಕ್ಷ ಹರಳೂರು ಸುರೇಶ್, ಗೌರೀಶಂಕರ್ ಅಭಿಮಾನಿ ಬಳಗದ ಅಧ್ಯಕ್ಷ ಪುಟ್ಟರಾಜು, ತಾಲ್ಲುಕು ಪಂಚಾಯ್ತಿ ಸದಸ್ಯ ದೀಪು, ಮಾಜಿ ಎ ಪಿ ಎಂ ಸಿ ಅಧ್ಯಕ್ಷ ನರುಗನಹಳ್ಳಿ ವಿಜಯ್ ಕುಮಾರ್ ಜೆಡಿಎಸ್ ಮುಖಂಡರಾದ ಕಾಮೇಗೌಡ, ನರುಗನಹಳ್ಳಿ ಮಂಜುನಾಥ್, ಮಸ್ಕಲ್ ಮೋಹನ್, ಬೂಚನಹಳ್ಳಿವೆಂಕಟೇಶ್, ಹರಳೂರು ರುದ್ರೇಶ್, ಜೆಡಿಎಸ್ ಮಹಿಳಾ ಘಟಕದ ಸತ್ಯವತಿ,ಗೌರೀಶಂಕರ್ ಆಪ್ತ ಸಹಾಯಕ ಸುರೇಶ್, ಕೋಡಿಮುದ್ದನಹಳ್ಳಿ ಪ್ರಕಾಶ್ ಹಾಗು ಇತರರು ಹಾಜರಿದ್ದರು.

(Visited 14 times, 1 visits today)