ತಿಪಟೂರು:

       ತಾಲ್ಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಶ್ರೀಂಗಂಧದ ಮರಗಳನ್ನ ರಾತ್ರೋರಾತ್ರಿ ಕಳ್ಳ ಕದೀಮರು ಕಡಿದು‌ ಸಾಗಿಸಿದ್ದಾರೆ. ತಿಪಟೂರು ತಾಲ್ಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿದ್ದ ಮೂರು ಮರಗಳನ್ನ ಕಳವು ಮಾಡಿದ್ದಾರೆ.

      ಮಂಗಳವಾರ ರಾತ್ರಿ ಘಟನೆ ನಡೆದಿದ್ದು ರಾತ್ರಿ ಕಾವಲು ಪಾಳಿಯಲ್ಲಿದ್ದ ಗ್ರಾಮ ಸಹಾಯಕ ಬೆಳಗೆದ್ದು ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಕಚೇರಿ ಹಿಂಬಾಗದ ಗೇಟ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಆವರಣದಲ್ಲಿದ್ದ ಮೂರು ಮರಗಳನ್ನ ಕಡಿದು ಸಾಗಿಸಿದ್ದಾರೆ.

      ವಿಪರ್ಯಾಸ ಅಂದರೆ ತಾಲ್ಲೂಕು ಕಚೇರಿ ಕಾಂಪೌಂಡ್ ಗೆ ಹೊಂದಿಕೊಂಡಂತೆ ಗ್ರಾಮಾಂತರ ಪೊಲೀಸ್ ಠಾಣೆ ಇದ್ದರೂ ಕಳ್ಳರು ಧೈರ್ಯವಾಗಿ ಕಳ್ಳತನ ಮಾಡಿದ್ದಾರೆ‌. ಜೊತೆಗೆ ರಾತ್ರಿ ಕಾವಲು ಸಿಬ್ಬಂದಿ ಒಳಗೆ ಇದ್ದರೂ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮರ ಕಡಿದು ಸಾಗಿಸಿದ್ರು ರಾತ್ರಿ ಪಾಳಿ ಕಾವಲುಗಾರನಿಗೆ ಅರಿವಿಗೆ ಬಾರದಿರುವುದು ಆತನ ಕಾರ್ಯವೈಖರಿಯನ್ನು ಎತ್ತಿತೋರಿಸುತ್ತದೆ.

      ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದಂಡಾಧಿಕಾರಿ ಕಚೇರಿಯಲ್ಲಿ ಇಡೀ ತಾಲ್ಲೂಕಿನ ಕಂದಾಯ ದಾಖಲೆಗಳು ಇದ್ದು ಭದ್ರತೆ ಇಲ್ಲದಿರುವುದು ದುರಂತ.  

(Visited 66 times, 1 visits today)