ತಂಬಾಕು ಕಾರ್ಯಾಚರಣೆಯಿಂದ 1,69,800 ರೂ.ದಂಡ ಸಂಗ್ರಹ

ತುಮಕೂರು :

      ತುಮಕೂರು ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ, ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶಿಸದಿರುವವರ, ತಂಬಾಕು ಉತ್ಪನ್ನಗಳನ್ನು ಜಾಹಿರಾತು ಮಾಡುವವರ, ಶಾಲಾ ಆವರಣಗಳಲ್ಲಿ ತಂಬಾಕು ಉತ್ಪನ್ನಗಳ ವಹಿವಾಟು ನಡೆಸುತ್ತಿರುವವರ ವಿರುದ್ಧ ಸತತವಾಗಿ ನಡೆಸಿದ 25 ದಿನಗಳ ಕಾರ್ಯಾಚರಣೆಯಲ್ಲಿ ಒಟ್ಟು 1403 ಪ್ರಕರಣ ದಾಖಲಿಸಿ 1,69,800 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿಪ್ರಕಾಶ ಎಂ.ಆರ್ ತಿಳಿಸಿದ್ದಾರೆ.

      ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಮಾಜ ಕಾರ್ಯಕರ್ತ ಪುಂಡಲೀಕ ಲಕಾಟಿ, ಆರೋಗ್ಯ ಇಲಾಖೆ ಸಿಬ್ಬಂದಿ ನರಸಿಂಹರಾಜು, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ತಾಲೂಕಿನ ಸಹಾಯಕ ಸಿಬ್ಬಂದಿಗಳು ಹಾಜರಿದ್ದರು.

(Visited 8 times, 1 visits today)

Related posts

Leave a Comment