ತುರವೇಕೆರೆ:

      ಸಾಂಸ್ಕೃತಿಕ ಹಾಗೂ ಸೌಂದರ್ಯ ಪ್ರಜ್ಞೆ ಇದ್ದವರು ನಮ್ಮ ದೇಶದ ಕಲೆ, ಸಂಸೃತಿ ಪ್ರೀತಿಸುತ್ತಾ ಸಮಾಜದಲ್ಲಿ ಸಾಮರಸ್ಯ ಬದುಕು ರೂಪಿಸುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದರು.

     ಪಟ್ಟಣದ ಕೆ. ಹಿರಣ್ಣಯ್ಯ ಬಯಲು ರಂಗ ಮಂದಿರ ಆವರಣದಲ್ಲಿ ಸೋಮವಾರ ಸಂಜೆ ಸಂಗಮ ಸಾಂಸ್ಕೃತಿಕ ಟ್ರಸ್ಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ, ರೊಟರಿ ಕ್ಲಬ್ ತುರುವೇಕೆರೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಬಿದರೆ ಆಳ್ವಾಸ್ ಸಂಸ್ಥೆಯು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ರಾಜ ಮಹಾರಾಜರ ಕಾಲದಲ್ಲಿ ತಮ್ಮ ನಾಡಿನ ಕಲೆ, ಸಂಸೃತಿಯನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳಸುತ್ತಿದ್ದರು. ಈಗ ಸರ್ಕಾರಗಳು ಸಹ ನಮ್ಮ ಕಲೆ ಸಂಸೃತಿಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ನಮ್ಮ ಆಳ್ವಾಸ್ ನುಡಿ ಸಿರಿ ಕಾರ್ಯಕ್ರಮಗಳು ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ, ಮನಸ್ಸನ್ನು ಕಟ್ಟಲು ಸಹಕಾರಿಯಾಗಿವೆ. ನಾವಿಂದು ನಮ್ಮ ಶಿಕ್ಷಣದ ಜೊತೆಗೆ ಶಾಸ್ತ್ರೀಯ ಸಂಗೀತ, ಕಲೆಯನ್ನು ನೀಡಲಾಗುತ್ತಿದೆ. ನಮ್ಮ ಕನ್ನಡ ಭಾಷೆ ಸೋತರೆ ಶ್ರೀ ಸಾಮಾನ್ಯರ ಸಂಸೃತಿ ಸೋಲುವುಂಟಾಗಲಿದೆ ಅದ್ದರಿಂದ ನಮ್ಮ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾದ್ಯಮಗಳ ಆದ್ಯತೆಗಳಿಗೆ ಸಮನಾಗಿ ಕಟ್ಟಿ ಬೆಳೆಸುವ ಆಗತ್ಯವಿದೆ ಎಂದ ಅವರು ಪುಲ್ವಾನದ ಉಗ್ರರ ದಾಳಿಯಲ್ಲಿ ವೀರ ಮರಣವನ್ನಹೊಂದಿದ ವೀರ ಯೋದ ಮಂಡ್ಯದ ಗುರು ಕುಟುಂಬಕ್ಕೆ ನಮ್ಮ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ನೀಡಲಾಗುವುದು ಎಂದು ಘೋಷಿಸಿದರು.

      ಶಾಸಕ ಮಸಾಲ ಜಯರಾಮ್ ಮಾತನಾಡಿ ಆಳ್ವಾಸ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜೊತೆಯಲ್ಲಿ ನಾಡಿನ ಸಂಸೃತಿ, ಕಲೆಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಅದಲ್ಲದೆ ನಾಡಿನಾದ್ಯಂತ ವಿದ್ಯಾರ್ಥಿಗಳಲ್ಲಿನ ಕಲೆ, ಸಂಸೃತಿಗಳನ್ನು ಜನರಿಗೆ ಪರಿಚಯಿಸಿ ಬೆಳವಣಿಗೆ ಸಹಕಾರಿಯಾಗಿದ್ದಾರೆ. ತಾಲೂಕಿನಲ್ಲಿ ಪ್ರತಿ ವರ್ಷ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿ ನಮ್ಮ ಸಹಕಾರ ನೀಡುತ್ತೇವೆ ಎಂದು ಬರವಸೆ ನೀಡಿದರು.      

       ಸಂಸದ ಎಸ್. ಪಿ. ಮುದ್ದಹನುಮೇಗೌಡ ಮಾತನಾಡಿ ಭಾರತ ದೇಶ ಸಾಹಿತ್ಯ, ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕವಾಗಿ ವೈವಿಧ್ಯತೆಯನ್ನು ಹೊಂದಿದ ರಾಷ್ಟ್ರ, ಇಂದು ಆಳ್ವಾಸ್ ಸಾಂಸ್ಕೃತಿಕ ವೈಭವದ ಮೂಲಕ ನಮ್ಮ ದೇಶದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಹ್ಲಾದಿಸುವ ಅವಕಾಶ ಲಭಿಸಿದೆ ಎಂದರು.

      ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಡಾ ಮೋಹನ್ ಆಳ್ವ ಪಟ್ಟಣದಲ್ಲಿ ದ್ವಿತೀಯ ಭಾರಿಗೆ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರ ಮೂಲಕ ತಮ್ಮ ಹೃದಯ ವೈಶಾಲ್ಯವನ್ನು ಮೆರೆದಿದ್ದಾರೆ ಎಂದರು.

      ಈ ಸಂದರ್ಬದಲ್ಲಿ ಯೋಧ ದಂಡಿನಶಿವರದ ಸಾಧಿಕ್‍ಪಾಶಾ, ಪವರ್ ಲಿಪ್ಟಿಂಗ್‍ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಮ್ಮ ತಾಲ್ಲೋಕಿನವರಾದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ, ಜಿ.ಪಂ. ಸದಸ್ಯರಾದ ರೇಣುಕಾಕೃಷ್ಣಮೂರ್ತಿ, ಜಯಲಕ್ಷ್ಮೀಜಯರಾಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವರಾಜು, ಮುಖಂಡರಾದ ಎಂ.ಡಿ.ಮೂರ್ತಿ, ಶ್ರೀಕಂಠೇಗೌಡ, ಎಸ್.ಎಂ. ಕುಮಾರಸ್ವಾಮಿ, ಸಿದ್ದೇಗೌಡ, ರೋ|| ಅಧ್ಯಕ್ಷ ಚೇತನ್, ಥಾಮಸ್, ದಂಡಿನಶಿವರ ಶಂಕರೇಗೌಡ, ರಮೇಶ್‍ಗೌಡ, ಪಾಂಡು, ಸಂಗಮ ಸಾಂಸ್ಕøತಿಕ ಟ್ರಸ್ಟ್‍ನ ಗೌರವಾಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಅಧ್ಯಕ್ಷ ಸಾ.ಶಿ.ದೇವರಾಜು, ಸಂಚಾಲಕ ಪ|| ಚಂದ್ರಶೇಖರ್, ಕೊಳಾಲ ನಾಗರಾಜು, ಬಿಎಂ.ಎಸ್ ಉಮೇಶ್, ಕಸಾಪ ಅಧ್ಯಕ್ಷ ನಂ.ರಾಜು ಸ್ಭೆರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಮಂಜುನಾಥಅಡೇಮನೆ ಕಾರ್ಯಕ್ರಮ ನಿರೂಪಿಸಿದರು.

(Visited 42 times, 1 visits today)