BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು
  • ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ
  • ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ
  • ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ
  • ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ
  • ಪರ್ಯಾಯ ಸ್ಥಳ ಕಲ್ಪಿಸದೆ ತೆರವುಗೊಳಿಸುವುದು ಸಲ್ಲದು: ಸಿಐಟಿಯು
  • ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ
  • ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನ್ನಡ ಬಳಸಿ-ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆಯಿದೆ
Trending

ಕನ್ನಡ ಬಳಸಿ-ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆಯಿದೆ

By News Desk BenkiyabaleUpdated:January 30, 2019 4:36 pm

ತುರುವೇಕೆರೆ:

      ಕನ್ನಡ ಬೆಳಸಬೇಕು ಉಳಿಸಬೇಕು ಎನ್ನುವ ಸಂಘಟನೆಗಳಿಗಿಂತ ಬಳಸಿ ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆ ಪ್ರಸ್ಥುತ ದಿನಮಾನಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಪವಾಡ ಬಯಲು ತಜ್ನ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.

      ಪಟ್ಟಣದ ಹಿರಣ್ಣಯ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಸಿ ಮಾತನಾಡಿ ಕನ್ನಡವನ್ನು ಬೆಳೆಸಬೇಡಿ ಬಳಸಿ, ಹಸಿರೇ ಹುಸಿರು ಪೃಕೃತಿಯನ್ನು ಕಾಪಾಡುವ ಹೊಣೆ ನಮ್ಮದು. ಸಾಹಿತ್ಯಾಸಕ್ತರಲ್ಲಿ ಮನಸ್ಸು ಬದಲಾಗುತ್ತಿದೆ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಒಂದೆಡೆಯಾದರೆ ಸಮ್ಮೇಳನಗಳು ಜಾರ್ತೆಯಾಗಿ ಮಾರ್ಪಾಡಾಗುತ್ತಿರುವುದು ಮೊತ್ತೊಂದೆಡೆಯಾಗಿದೆ, ಸಮ್ಮೇಳನಗಳು ಕನ್ನಡಿಗರ ಮನಸ್ಸನ್ನು ಬೆಸೆಯುವ ನಾಡಹಬ್ಬವಾಗಬೇಕು ಎಂದರು.

      ಕೆಲ ಸಮೂಹ ಮಾಧ್ಯಮಗಳು ಜನಪರವಾಗದೆ ಕೇವಲ ಟಿ.ಆರ್.ಪಿ. ಪರವಾಗಿದ್ದು, ಸಮಾಜದಲ್ಲಿ ಒಡಕು ಮೂಡಿಸುವಂತಹ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಬೀದಿಗೆ ತಂದು ಮನೆಯ ಮನಸ್ಸುಗಳ ಮಾನಸಿಕ ಖಿನ್ನತೆಗೆ ಪ್ರೇರಣೆ ನೀಡುತ್ತಿರುವುದರಿಂದ ಮಾನಸಿಕ ರೋಗಗಳು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿವೆ ಎಂದು ಸಮ್ಮೇಳನಾಧ್ಯಕ್ಷ ಪವಾಡ ಬಯಲು ತಜ್ನ, ಹುಲಿಕಲ್ ನಟರಾಜ್ ವಿಷಾದ ವ್ಯಕ್ತಪಡಿಸಿದರು.

Displaying 30tvkph3.jpg

      ಕನ್ನಡ ಸಾಹಿತ್ಯದಲ್ಲಿ ಹಿಡಿ, ಹೊಡಿ, ಕೊಲ್ಲು ಸಂಸ್ಕೃತಿಗಿಂತ ಸಕಾರಾತ್ಮಕ ಚಿಂತನೆ ಹಾಗೂ ವಿಚಾರವಂತಿಕೆಯ ಲೇಖನಿಯ ಸಂಸ್ಕೃತಿ ಬೇಕು, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನ ಕೇವಲ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನಲ್ಲದೆ ಕನ್ನಡಪರ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪ್ರಾಮಾಣಿಕವಾಗಿ ತಮ್ಮ ಜೀವನವನ್ನೇ ಕನ್ನಡ ಭಾಷೆಗಾಗಿ ಮೀಸಲಿಟ್ಟ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಮಹನೀಯರನ್ನು ಇಲ್ಲಿಗೆ ಕರೆತಂದು ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಸ್ಥಾನ ಕಲ್ಪಿಸಿ ಕೊಡುವ ಕೆಲಸ ಅರ್ಥಪೂರ್ಣವಾಗಿದೆ.
ಇಂದು ಯುವ ಜನಾಂಗ ಅತಿಯಾದ ಸಾಮಾಜಿಕ ಜಾಲತಾಣಗಳ ದಾಸ್ಯದ ಸಂಕೋಲೆಯಿಂದ ಮಾನಸಿಕ ಖಿನ್ನತೆ, ಭಯ, ಅತಿಯಾದ ಭ್ರಮೆ, ಆತಂಕ, ಲೋಭ , ಮೋಹಗಳಿಗೆ ಬಲಿಯಾಗಿ ಮಾನಸಿಕವಾಗಿ ಜೀವಂತ ಶವವಾಗಿ ಬದುಕು ಸಾಗಿಸುತ್ತಿದ್ದಾನೆ. ಕನ್ನಡ ಭಾಷೆ ಪುಡಾರಿಗಳ ಭಾಷೆಯಾಗದೆ ಪ್ರಜ್ನಾವಂತರ ಭಾಷೆಯಾಗಬೇಕು ಎಂದರಲ್ಲದೆ ನಾಡು ನುಡಿ ಸಂಸ್ಕೃತಿ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರನ್ನು ನೆನೆದರು.

      ಪ್ರಾಸ್ತಾವಿಕ ನುಡಿಗಳನ್ನಾಡಿದ ಕ.ಸಾ.ಪ.ತಾಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ ಭವನ ನಿರ್ಮಿಸಲು ಜಾಗ ನೀಡಿದ ತಾಲೂಕು ಪಂಚಾಯಿತಿ ಹಾಗೂ ನಿರ್ಮಾಣಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸಿ ತಾಲೂಕಿನ ಜನತೆಗೆ ಧನ್ಯವಾದ ಹೇಳಿದರು.

      ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿದ ಶಾಸಕ ಮಸಾಲೆಜಯರಾಮ್ ಕನ್ನಡ ಬಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು ಆದರೆ ಕಾಪ್ರೋರೆಟ್ ನಗರಗಳಲ್ಲಿ ಗ್ರಾಮೀಣ ಜನತೆ ಉದ್ಯೋಗವಕಾಶಕ್ಕೆಂದು ತೆರಳಿದಾಗ ಆಂಗ್ಲ ಭಾಷೆ ಅವಶ್ಯಕವಾಗಿರುತ್ತದೆ ಹಾಗಾಗಿ ಭಾಷಾಭಿಮಾನ ಎಷ್ಟು ಮುಖ್ಯವೋ ಬದುಕನ್ನು ಕಟ್ಟಿಕೊಡುವ ಭಾಷೆಗಳನ್ನು ಕಲಿಯುವುದು ಅಷ್ಟೇ ಮುಖ್ಯ ತಾಲೂಕು ಕನ್ನಡ ಭವನ ಪ್ರಾರಂಭದಿಂದ ಇಲ್ಲಿಯವರೆವಿಗೂ ನಾನು ಸಹಕರಿಸುತ್ತಾ ಬಂದಿದ್ದೇ.  ಅದೇರೀತಿ ಭವನದ ಮುಂದುವರಿದ ಚಟುವಟಿಕೆಗಳಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.

Displaying 30tvkp2.jpg

      ಸಂಸದ ಮುದ್ದ ಹನುಮೇಗೌಡ ಮಾತನಾಡಿ ಇಂದು ಕನ್ನಡಕ್ಕೆ ಪರಕೀಯ ಭಾಷೆಗಳು ಅವಶ್ಯಕ ಎನ್ನುವಷ್ಟರ ಮಟ್ಟಿಗೆ ಕನ್ನಡದಲ್ಲಿಯೇ ಬೆರತು ಹೋಗಿವೆ, ಅದನ್ನೂ ಮೀರಿ ರೇಡಿಯೋ ಎಫ್.ಎಂ. ಚಾನಲ್‍ಗಳು ತಮ್ಮ ಬಾಯಿಗೆ ಬಂದಂತೆ ಮಾತನಾಡುತ್ತಾ ಬಾಷೆಯನ್ನು ಕಲುಷಿತಗೊಳಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.

      ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ ಕೇವಲ ಎರಡು ವರ್ಷಗಳಲ್ಲಿ ನಿವೇಶನ ಹಾಗೂ ಭವನ ನಿರ್ಮಿಸಿ ಕಸಾಪ ಅಧ್ಯಕ್ಷ ನಂ.ರಾಜು ಇಚ್ಚಾಶಕ್ತಿ ಮೆರದು ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

      ಕಲ್ಪತರು ಆಶ್ರಮದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂಧರ್ಭದಲ್ಲಿ ಸಾಹಿತಿ ಎಲ್.ಎನ್.ಪ್ರಸಾದ್ ಸಂಪಾದಕತ್ವದಲ್ಲಿ ಮೂಡಿಬಂದ “ಅಮೃತ ಮಹಲ್” ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

      ಇದಕ್ಕೂ ಮೊದಲು ಬೆಳಗ್ಗೆ ಪಟ್ಟಣದ ಹಿರಣ್ಣಯ ಬಯಲು ರಂಗಮಂದಿರದ ಅವರಣದಲ್ಲಿ ತಹಶೀಲ್ದಾರ್ ನಯೀಮ್ ಉನ್ನೀಸ, ಬಿ.ಇ.ಒ.ಹನುಮನಾಯಕ್ ಕ.ಸಾ.ಪ.ಅಧ್ಯಕ್ಷ ನಂ.ರಾಜು ಧ್ವಜಾರೋಹಣ ನೆರವೇರಿಸಿದರು. ಇದೇ ಸಂಧರ್ಭದಲ್ಲಿ ನೂತನ ಕನ್ನಡ ಭವನವನ್ನು ಶಾಸಕ ಮಸಾಲೆಜಯರಾಮ್ ಲೋಕಾರ್ಪಣೆಗೊಳಿಸಿದರು. ನಂತರ ಸಮ್ಮೇಳನಾಧ್ಯಕ್ಷರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ ಸಮ್ಮೇಳನದ ಸಭಾಂಗಣದವರೆವಿಗೂ ಮೆರವಣಿಗೆಯ ಮೂಲಕ ಕರೆತರಲಾಯಿತು.

      ಸಮಾರಮಭದಲ್ಲಿ ನಿವೃತ್ತ ಐ.ಎ.ಎಸ್. ಆಧಿಕಾರಿ ಎಂ.ಕೆ.ಶಂಕರಲಿಂಗೇಗೌಡ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಿ.ಡಿ.ಗಂಗಾಧರ್, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ತಾ.ಪಂ.ಅಧ್ಯೆಕ್ಷೆ ನಾಗರತ್ನ, ಪ.ಪಂ.ಅಧ್ಯಕ್ಷ ಲಕ್ಮೀನರಸಿಂಹ, ಜಿ.ಪಂ.ಸದಸ್ಯೆ ರೇಣುಕ, ತಾ.ಪಂ.ಸದಸ್ಯರಾದ ನಂಜೇಗೌಡ, ಭೈರಪ್ಪ, ಮಂಜುನಾಥ್, ಮಹಾಲಿಂಗಯ್ಯ, ಡಿ.ಸಿ.ಕುಮಾರ್, ಸ್ವಾಮಿ, ತೀರ್ಥಕುಮಾರಿ, ಕೆಂಪಮ್ಮ, ತೇಜಾವತಿ, ಸುವರ್ಣ, ಕೆಂಪಲಕ್ಮಿ, ಮುಖಂಡರಾದ ಕೊಂಡಜ್ಜಿ ವಿಒಶ್ವನಾಥ್, ರಮೇಶ್‍ಗೌಡ, ಸುಬೃಹ್ಮಣ್ಯ ಶ್ರೀಕಂಠೆಗೌಡ, ಗಂಗಣ್ಣ, ವಿ.ಟಿ.ವೆಂಕಟರಾಮ್, ಶಂಕರೇಗೌಡ, ಪ್ರಹ್ಲಾದ್, ವಿ.ಬಿ.ಸುರೇಶ್ , ಚಿದಾನಂದ ಇತರರು ಇದ್ದರು.

 

(Visited 32 times, 1 visits today)
Previous Articleತುಮಕೂರು: ಜೆಡಿಎಸ್ ಗೆ ಪಾಲಿಕೆ ಮೇಯರ್, ಕಾಂಗ್ರೆಸ್ ಗೆ ಉಪಮೇಯರ್ ಸ್ಥಾನ
Next Article ಕುಷ್ಠರೋಗ ಶಾಪವಲ್ಲ – ನ್ಯಾಯಾಧೀಶ ಗಣೇಶ್
News Desk Benkiyabale

Related Posts

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm news

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm news

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm news
ತಾಜಾ ಸುದ್ಧಿಗಳು
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm
news

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm
news

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm
news

ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

September 01, 2026 5:03 pm
news

ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ

September 01, 2026 5:02 pm
news

ಪರ್ಯಾಯ ಸ್ಥಳ ಕಲ್ಪಿಸದೆ ತೆರವುಗೊಳಿಸುವುದು ಸಲ್ಲದು: ಸಿಐಟಿಯು

September 01, 2026 5:00 pm
Our Youtube Channel
Our Picks

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm

ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

September 01, 2026 5:03 pm

ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ

September 01, 2026 5:02 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

By News Desk BenkiyabaleSeptember 01, 2026 5:08 pm

ಹುಳಿಯಾರು: ನಕಲಿ ಫಲಾನುಭವಿಗಳನ್ನು ತಡೆಯಲು ಮತ್ತು ಪಾರದರ್ಶಕವಾಗಿ ಹಣ ಜಮೆ ಮಾಡಲು ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ…

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm

ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

September 01, 2026 5:03 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.