ತುರುವೇಕೆರೆ :

      ಮಾಜಿ ಸಚಿವ ಡಿ.ಶಿವಕುಮಾರ್‍ರವರನ್ನು ಭಂದಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಒಕ್ಕಲಿಗರನ್ನು ತುಳಿಯ ಪ್ರಯತ್ನಕ್ಕೆ ಮುಂದಾಗಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಫ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‍ಶಾ ದ್ವೇಶ ರಾಜಕಾರಣಕ್ಕೆ ಮುಂದಾಗಿ ಸಂವಿಧಾನ ಭದ್ದವಾಗಿ ರೂಪಿತಗೊಂಡಿರುವ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಇ.ಡಿ, ಐ.ಟಿ ಹಾಗೂ ಸಿ.ಬಿ.ಐ.ಗಳ ಮೂಲಕ ಪ್ರಜಾಫೃಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆ.

        ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಭಂದಿಸುವ ಮೂಲಕ ಗುಜರಾತ್ ಚುನಾವಣೆಯ ಮುಖಭಂಗದ ಸೇಡನ್ನು ತೀರಿಸಿಕೊಂಡಿದ್ದಾರೆ. ಇದು ಸಂವಿಧಾನದ ಕಗ್ಗೊಲೆ ಇ.ಡಿ.ವಿಚಾರಣೆಗೆ ಒಂದು ದಿನವೂ ತಪ್ಪಿಸಿಕೊಳ್ಳದೆ ಪ್ರಾಮಾಣಿಕವಾಗಿ ಹಾಜರಾದ ಡಿ.ಕೆ.ಶಿವಕುಮಾರ್ ಭಂದನದ ಹಿಂದೆ ಕೇಂದ್ರದ ಕೈವಾಡವಿದೆ. ಇದು ಕನಾಟಕದಲ್ಲಿ ಒಕ್ಕಲಿಗ ನಾಯಕರನ್ನು ತುಳಿಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ, ಡಿ.ಕೆ.ಶಿವಕುಮಾರ್ ಮಾಡಿರುವ ವ್ಯವಹಾರಗಳೆಲ್ಲವೂ ಕಾನೂನು ಬದ್ದವಾಗಿವೆ. ಆದರೂ ವಿಚಾರಣೆ ನೆಪವೊಡ್ಡಿ ಭಂದಿಸಿರುವುದು ಖಂಡನೀಯ. ದೆಹಲಿಯಲ್ಲಿ ಸಿಕ್ಕಿರುವ 8.5ಕೋಟಿ ಹಣ ತನ್ನದೆಂದು ಶರ್ಮ ಎಂಬುವವರು ಒಪ್ಪಿಕೊಂಡಿದ್ದಾರೆ, ಆದರೆ ವಿಚಾರಣೆ ನೆಪದಲ್ಲಿ ಮಾನಸಿಕವಾಗಿ ಡಿಕೆಶಿಯನ್ನು ಕುಗ್ಗಿಸುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಆದರೆ ಕೋರ್ಟ್‍ನಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಶೀಗ್ರದಲ್ಲೇ ಜಾಮೀನು ಸಿಗಲಿದೆ ಎನ್ನುವ ಭರವಸೆಯಿದೆ. ಬಿಜೆಪಿ ಸೇಡಿನ ರಾಜಕಾರಣಕ್ಕೆ ಒಕ್ಕಲಿಗರು ಹೆದರುವುದಿಲ್ಲ, ಒಂದೆಡೆ ಡಿ.ಕೆ.ಶಿಕುಮಾರ್, ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯ ವಿರುದ್ದವೂ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಗೂ ಪ್ರಧಾನಿ ನರೇಂದ್ರಮೋದಿ, ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆಂದು ಗಂಭೀರ ಆರೋಪ ಮಾಡಿದರು.

(Visited 22 times, 1 visits today)