ತುರುವೇಕೆರೆ:
      ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು ಪೋಸ್ಟ್‍ಮ್ಯಾನ್ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಶಾಸಕ ಮಸಾಲೆ ಜಯರಮ್ ತಿಳಿಸಿದರು.

      ತಾಲೂಕಿನ ಅರಿಶಿನದಹಳ್ಳಿ ಗ್ರಾಮದಲ್ಲಿನ ನೂತನ ಅಂಗನವಾಡಿ ಕಟ್ಟಡವನ್ನು ಉಧ್ಘಾಟನೆಗೊಳಿಸಿ ಮಾತನಡಿದ ಅವರು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಹಾಗೂ ಸಾಮಾನ್ಯ ಜನರೊಂದಿಗಿನ ಕೊಂಡಿಯಂತೆ ವರ್ತಿಸಬೇಕು ಸರ್ಕಾರ ಮಕ್ಕಳಿಗೆ ನೀಡುವ ಗುಣಮಟ್ಟದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ನೀಡಬೇಕು ಅರಿಶಿನದಹಳ್ಳಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡ ಬಹಳ ಸುಸರ್ಜಿತ ರೀತಿಯಲ್ಲಿದ್ದು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ನಾನು ಶಾಸಕನಾದ ನಂತರ ಮೊದಲ ಬಾರಿಗೆ ಈ ಗ್ರಾಮಕ್ಕೆ ಬೇಟಿ ನೀಡುತ್ತಿದ್ದೇನೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಹಾಗೂ ಅರಳೀಕೆರೆಯಿಂದ ಅರಿಶಿನದಹಳ್ಳಿವರೆಗೆ ಸಂಪರ್ಕ ಕಲ್ಪಿಸಲು ಡಾಂಬರು ರಸ್ತೆಯನ್ನು ಇನ್ನೆರಡು ತಿಂಗಳೊಳಗಾಗಿ ನಿರ್ಮಾಣಮಾಡುತ್ತೇನೆ ತಾಲೂಕಿನ ಸಮರ್ಗ ಅಭಿವೃದ್ದಿ ನನ್ನಲ್ಲಿದ್ದು ನಾನು ನಿಮ್ಮ ಒಡನಾಡಿಯಾಗಿ ಕೆಲಸ ಮಾಡುತ್ತೇನೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೊಮ್ಮಲಿಂಗಯ್ಯ ಮಾತನಾಡಿ ತಾಲೂಕು ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕೆ ಮತ್ತು ಗ್ರಾಮ ಪಂಚಾಯಿತಿಗಳ ಆಶ್ರಯದೊಂದಿಗೆ ಒಂದು ಸುಸರ್ಜಿತ ಅಂಗನವಾಡಿ ಕೇಂದ್ರ ನಿರ್ಮಾಣವಾಗಿರುವುದು ಸಂತಸದ ವಿಚಾರ ಈ ಗ್ರಾಮಕ್ಕೆ ಶಾಸಕರು ಡಾಂಬರು ರಸ್ತೆ ಕಲ್ಪಿಸುವ ಸಂಕಲ್ಪ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಜಿ.ಡಿ.ಗಂಗಾಧರನ್, ಸಿ.ಡಿ.ಪಿ.ಓ.ಪುಟ್ಟಸ್ವಾಮಿ, ಪಿ.ಡಿ.ಓ.ಜಗನ್ನಾಥಚಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಕೃಷ್ಣಮೂರ್ತಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಭೈರಪ್ಪ, ಗ್ರಾ.ಪಂ.ಸದಸ್ಯರುಗಳಾದ ಗಂಗಾಧರಯ್ಯ, ಶಿವಶಂಕರಯ್ಯ, ಗಂಗಮ್ಮ, ಹಾಗೂ ಗ್ರಾ.ಪಂ. ಸಿಬ್ಬಂದಿ ನರೇಂದ್ರ ಇತರರು ಇದ್ದರು.

  

 

(Visited 21 times, 1 visits today)