ತುರುವೇಕೆರೆ:

      ಅರಳೀಕೆರೆ ಗ್ರಾಮದಲ್ಲಿನ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ಶಾಸಕ ಮಸಾಲೆ ಜಯರಾಮ್ ತಿಳಿಸಿದರು.

      ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ 25ಲಕ್ಷರೂಪಾಯಿ ವೆಚ್ಚದಲ್ಲಿನ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಅರಳೀಕೆರೆ ಗ್ರಾಮದಲ್ಲಿ ಈಗಾಗಲೇ ಕೆಲ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿವೆ ಉಳಿದಂತಿರುವ ಮಣ್ಣುರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಡಿಸಿ ಪಟ್ಟಣಕ್ಕೆ ಹೊಂದಿರುವ ಅರಳೀಕೆರೆ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತೇನೆ, ಗ್ರಾಮಗಳ ಅಭಿವೃದ್ದಿಯಾದರೆ ಮಾತ್ರ ತಾಲೂಕಿನ ಸಮರ್ಗ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮವನ್ನು ಅಭಿವೃದ್ದಿಗೊಳಿಸಲಾಗುವುದು ಹಳ್ಳಿಗಳಿಗೆ ಅಗತ್ಯವಿರುವ ಮೂಲಬೂರ ಸೌಕರ್ಯಗಳಿಗೆ ಒತ್ತುಕೊಟ್ಟು ಹಂತ ಹಂತವಾಗಿ ಹಳ್ಳಿಗಳ ಅಭಿವೃದ್ದಿಯೊಂದಿಗೆ ತಾಲೂಕಿನ ಅಭಿವೃದ್ದಿ ಮಾಡುತ್ತೇನೆಂದು ಭರವಸೆ ನೀಡಿದರು.

      ಈ ಸಂಧರ್ಭದಲ್ಲಿ ಜಿಲ್ಲಾಪಂಚಾಯಿತಿ ಸದಸ್ಯೆ ರೇಣುಕಾಕೃಷ್ಣಮೂರ್ತಿ, ಮಾದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೊಮ್ಮಲಿಂಗಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರ್, ಅರಳೀಕೆರೆ ಶಿವಯ್ಯ, ಇತರರು ಇದ್ದರು.

(Visited 19 times, 1 visits today)