ತುರುವೇಕೆರೆ:

      ಸರ್ಕಾರ ಅಭಿವೃದ್ದಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಬೇಕಾದರೆ ಕನಿಷ್ಟ ಹತ್ತು ವರ್ಷಗಳ ಅವಧಿಗೆ ಗುರಿ ನಿಗದಿಗೊಳಿಸಿ ಕ್ರಿಯಾಯೋಜನೆ ರೂಪಿಸಲಾಗಿರುತ್ತದೆ, ಅದರಂತೆ ನೆನಗುದಿಗೆ ಬಿದ್ದಿರುವ ಹಿಂದಿನ ಕಾಮಗಾರಿಗಳನ್ನು ಚಾಲನೆಗೊಳಿಸುವ ಕೆಲಸ ಆಯಾ ಸ್ಥಳೀಯ ಶಾಸಕರ ಜವಬ್ದಾರಿಯಾಗಿರುತ್ತದೆ ಎಂಬುದನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಅರಿಯಬೇಕಿದೆ ಎಂದು ಶಾಸಕ ಮಸಾಲೆಜಯರಾಮ್ ತಿರುಗೇಟು ನೀಡಿದರು.

      ತಾಲೂಕಿನ ದಬ್ಬೇಗಟ್ಟ ಹೋಬಳಿ ಗುರುವಿನಮಠ ಗ್ರಾಮದಲ್ಲಿ 96ಲಕ್ಷವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಡಿದ ಅವರು ಈ ಹಿಂದಿನ ಸರ್ಕಾರದಲ್ಲಿ ಮುಂಜೂರಾದ ಕಾಮಗಾರಿಗಳಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನ ಹಾಗೂ ಸರ್ಕಾರದ ಮಟ್ಟದಲ್ಲಿ ಕ್ಷೇತ್ರಕ್ಕೆ ಬೇಕಾಗಿರುವ ಕಾಮಗಾರಿಗಳನ್ನು ಅನುಮೋದನೆಗೊಳಿಸಿಕೊಂಡು ಬರುವ ತಾಕತ್ತು ನನಗಿದೆ. ಕ್ಷೇತ್ರದ ಅಭಿವೃದ್ದಿ ಮಾಡುತ್ತಿರುವ ನನಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಪುಕ್ಕಟೆ ಸಲಹೆ ಅವಶ್ಯಕತೆಯಿಲ್ಲ, ಜನರು ಅಧಿಕಾರ ಕೊಟ್ಟಿರುವುದು ನನಗೆ ತಾಲೂಕಿನ ಕ್ಷೇತ್ರದ ಜನರ ಪರವಾಗಿ ವಿಧಾನಸೌದದಲ್ಲಿ ಚರ್ಚೆಮಾಡಿ ಅವಶ್ಯಕವಿರುವ ಅನುದಾನವನ್ನು ತಂದು ಹೋರಟ ಮಾಡುವವನು ನಾನು. ನಾನು ರಾಜಕಾರಣದಲ್ಲಿ ಎಲ್.ಕೆ.ಜಿ.ಯಿಂದ ಬಂದವನು ರಾಜಕಾರಣದ ಏಳು-ಬೀಳುಗಳನ್ನು ಸಮನಾಗಿ ಉಂಡಿರುವ ನನಗೆ ಕ್ಷೇತ್ರದ ಅಭಿವೃದ್ದಿ ಯಾವರೀತಿ ಮಡಬೇಕೆಂಬುದನ್ನು ತಿಳಿದಿದ್ದೇನೆ.

      ಸಿ.ಎಸ್.ಪುರ ಗ್ರಾಮದಲ್ಲಿ ಈಚೆಗೆ ಸಚಿವ ಸಿ.ಎಸ್.ಪುಟ್ಟರಾಜು 10ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಚಾಲನೆ ನೀಡಿದರು ಅದು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಂಜೂರಾದ ಕಾಮಗಾರಿಯಾದರೂ ಪ್ರಸ್ಥುತ ಸರ್ಕಾರದ ಮಂತ್ರಿ ಕಾಮಗಾರಿಯ ಜವಬ್ದಾರಿ ಹೊತ್ತಿರುತ್ತಾರೆ, ಅದೇರೀತಿ ಸ್ಥಳೀಯ ಶಾಸಕನಾದ ನನಗೆ ಕ್ಷೇತ್ರದ ಕಾಮಗಾರಿಗಳ ಗುಣಮಟ್ಟ ಅರಿಯುವ ಜವಬ್ದಾರಿಯ ಹೊಣೆಯಿದೆ. ಮಾಜಿ ಶಾಸರಾದ ಎಂ.ಟಿ.ಕೆಯವರೇ ನಿಮಗೆ ಜನರು ವಿಶ್ರಾಂತಿ ನೀಡಿದ್ದಾರೆ ಪದೇ-ಪದೇ ಪತ್ರಿಕೆಗಳಲ್ಲಿ ಪುಕ್ಕಟ್ಟೆ ಪ್ರಚಾರದ ಮೂಲಕ ತಮ್ಮ ಅಸ್ಥಿತ್ವದ ಹುಡುಕಾಟಕ್ಕೆ ಹೊರಾಡುತ್ತಿರುವ ನಿಮ್ಮಿಂದ ತಿಳಿಯುವ ಅವಶ್ಯಕತೆ ನನಗಿಲ.್ಲ 15ವರ್ಷ ಅಧಿಕಾರದಲ್ಲಿದ್ದ ನೀವು ಮಾಡಿದ್ದಾದರೂ ಏನು, ತಾಲೂಕಿನಾಧ್ಯಂತ ಅರ್ಧಂಭರ್ಧ ಕಾಮಗಾರಿಗಳನ್ನು ಮಾಡಿ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ ಆದರೆ ನನ್ನ ಆಡಳಿತದಲ್ಲಿ ಅದಕ್ಕೆ ಆಸ್ಪದವಿಲ್ಲ ನಾನು ಕೈಗೆತ್ತಿಕೊಂಡ ಒಂದೊಂದು ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಪೂರ್ಣಗೊಳಿಸುತ್ತೇನೆ ಎಂದು ಕ್ಷೇತ್ರದ ಜನಕ್ಕೆ ಭರವಸೆ ನೀಡಿದರು.

      ಕೇಂದ್ರಲ್ಲಿ ಮೊತ್ತೊಮ್ಮೆ ಮೋದಿ ಫ್ರಧಾನಿಯಾಗುವುದು ನಿಶ್ಚಿತ ದೇಶದ ಭವಿಷ್ಯದ ಭದ್ರ ಬುನಾದಿಗಾಗಿ ಮೊತ್ತೊಮ್ಮೆ ಮೋದಿಯ ಅವಶ್ಯಕತೆಯಿದೆ ಈ ಬಾರಿಯೂ ಕೂಡ ನಿಮ್ಮ ಆಯ್ಕೆ ಮೋದಿಯಾಗಿರಲಿ ಎಂದು ಮನವಿಮಾಡಿದರು.

      ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಮತನಾಡಿ ಸತತವಾಗಿ 15ವರ್ಷಗಳಿಂದ ರಾಜಕಾರಣ ಮಾಡಿದ ಎಂ.ಟಿ.ಕೃಷ್ಣಪ್ಪ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಆಶೀರ್ವಾದದಿಂದ ಶಾಸಕರಾಗಿದ್ದರೇ ವಿನಹ ಅದು ಅವರ ವಯಕ್ತಿಕ ಸಾಧನೆಯಲ್ಲ ಇದೀಗ ಸೋತು ಮನೆಯಲ್ಲಿರುವ ಅವರಿಗೆ ರಾಜಕೀಯ ಅಸ್ಥಿರತೆ ಕಾಡುತ್ತಿರುವುದರಿಂದ ನಮ್ಮ ಶಾಸಕರಾದ ಮಸಾಲೆಜಯರಾಮ್ ವಿರುದ್ದ ಮತನಾಡುತ್ತಾ ಕೀಳು ಮಟ್ಟದ ರಾಜಕಾರಣ ಮಾಡಲು ಮುಂದಾಗಿದ್ದಾರೆ ಇದು ನಡೆಯುವುದಿಲ್ಲ, ಜಯರಾಮಣ್ಣನಂತಹ ಶಾಸಕರು ಸಿಕ್ಕಿರುವುದು ನಮ್ಮ ಪುಣ್ಯ ರಾಜ್ಯದಲ್ಲಿನ ಸಭ್ಯರಾಜಕಾರಣಿಯಲ್ಲಿ ಇವರು ಒಬ್ಬರೆಂದರೆ ತಪ್ಪಾಗಲಾರದು ಎಂದರು.

      ಕಾರ್ಯಕ್ರಮದಲ್ಲಿ ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ಕಡೇಹಳ್ಳಿಸಿದ್ದೇಗೌಡ, ಮುದ್ದೇಗೌಡ, ಬಿ.ಎಮ್.ಎಸ್.ಉಮೇಶ್, ವಿದ್ಯಾರಣ್ಯಜಯ್ಯಣ್ಣ, ವೆಂಕಟೇಶ್‍ಕೋಳಿ, ಅರೇಮಲ್ಲೇನಹಳ್ಳಿಜಯರಾಮ್, ಗುತ್ತಿಗೆದಾರರಾದ ಕೆಂಪೇಗೌಡಮ ಗೊಟ್ಟಿಕೆರೆಕಾಂತರಾಜ್, ಸ್ಥಳೀಯ ಮುಖಂಡರಾದ ಸುರೇಶ್, ಕೃಷ್ಣಮೂರ್ತಿ ಇತರರು ಇದ್ದರು.

 

(Visited 28 times, 1 visits today)