ತುರುವೇಕೆರೆ :

      ತಾಲೂಕಿನ ತಹಶೀಲ್ದಾರ್ ಕಚೇರಿಯ ವೃತ್ತದ ಬಳಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನರವರನ್ನು, ಶಾಸಕ ಮಸಾಲೆಜಯರಾಮ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹೂಮಾಲೆ ಹಾಕಿ ಸನ್ಮಾನಿಸಿದರು.

      ತಿಪಟೂರಿನ ಹೊನ್ನವಳ್ಳಿ ಗ್ರಾಮದ ಉಡಿಸಲಮ್ಮ ದೇವಾಲಯದ ಪೂಜೆ ಮುಗಿಸಿ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ನೋಡಲು ಶಾಸಕ ಮಸಾಲೆಜಯರಾಮ್ ಆದಿಯಾಗಿ ನೂರಾರು ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ 11ಗಂಟೆಯಿಂದಲೇ ಜಮಾಯಿಸಿದ್ದರು, ನಮ್ಮ ನೆಚ್ಚಿನ ನಾಯಕನ ಬರುವಿಕೆಯನ್ನರಿತ ಬಿ.ಎಸ್.ವೈ ಅಭಿಮಾನಿ ಪಡೆ ಮಧ್ಯಾಹ್ನದ ವೇಳೆಗೆ ನೂರಾರು ಸಂಖ್ಯೆಯಲ್ಲಿ ತಾಲೂಕಿನ ತಹಶೀಲ್ದಾರ್ ಕಚೇರಿ ಆವರಣಕ್ಕೆ ಜಮಾಯಿಸಿದರು.

      ಒಂದು ಗಂಟೆ ಮುಂಚಿತವಾಗಿಯೇ ಬ್ಯಾಂಡ್ ಸೆಟ್ ವಾದ್ಯದ ಮೂಲಕ ಆಗಮನದ ನಿರೀಕ್ಷೆಗೆ ಮೆರುಗು ತಂದ ಬಿಜೆಪಿ ಕಾರ್ಯಕರ್ತರು ಪಠಾಕಿ ಸಿಡಿಸಿ ಬಿಜೆಪಿ ಭಾವುಟದೊಂದಿಗೆ ಕೇಸರಿ ಶಾಲುಗಳನ್ನು ಹೊದ್ದು ಸಂಭ್ರಮಿಸಿದರು.

      ಮದ್ಯಾಹ್ನದ ವೇಳೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಶಾಸಕ ಮಸಾಲೆ ಜಯರಾಮ್ ಹೂಮಾಲೆ ಹಾಗೂ ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

      ವೃತ್ತ ನಿರೀಕ್ಷಕ ಲೋಕೇಶ್ ಹಾಗೂ ಪಿ.ಎಸ್.ಐ. ಗಂಗಾಧರ್, ಹಾಗೂ ಶಿವಲಿಂಗಯ್ಯ ಹಾಗೂ ಪೋಲೀಸ್ ಸಿಬ್ಬಂದಿಗಳು ಸೂಕ್ತ ಬಂದೂಬಸ್ತ್ ವ್ಯವಸ್ಥೆ ಮಾಡಿದ್ದರು.

      ಈ ಸಂಧರ್ಭದಲ್ಲಿ ಪಕ್ಷದ ಅಧ್ಯಕ್ಷ ದುಂಡಾ ರೇಣುಕಪ್ಪ , ಪ್ರಧಾನ ಕಾರ್ಯದರ್ಶಿ ಹೆಡಗೀಹಳ್ಳಿವಿಶ್ವನಾಥ್, ತಹಶೀಲ್ದಾರ್ ನಯೀಮ್‍ಉನ್ನಿಸಾ, ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ, ಚಿದಾನಂದ್, ಅಂಜನ್‍ಕುಮಾರ್, ಡಿ.ಆರ್.ಬಸವರಾಜು, ನವೀನ್‍ಬಾಬು, ವಿ.ಬಿ.ಸುರೇಶ್, ಕಾಳಂಜೀಹಳ್ಳಿ ಸೋಮಣ್ಣ, ರಕ್ಷಿತ್, ಉಮರಾಜ್ ಇತರರು ಇದ್ದರು.

(Visited 14 times, 1 visits today)