ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಬಂಧನ : 90 ಗ್ರಾಂ ಚಿನ್ನ, 2,80,000 ಹಣ ವಶ

 ತುಮಕೂರು:

     ಗುಬ್ಬಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ರಾಜ ಆಲಿಯಾಸ್ ಯರ್ರೋಡು ಬಿನ್(26)  ಕೂಲಿ ಕೆಲಸ ತುಮಕೂರಿನ ದಿಬ್ಬೂರು ಜನತಾ ಕಾಲೋನಿ ವಾಸಿಯನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ತುಮಕೂರು ನಗರ ಪೊಲೀಸ್ ಠಾನಾ ಸರಹದ್ದಿನ ಎರಡು ಮನೆ ಕಳವು ಪ್ರಕರಣಗಳು ಮತ್ತು ಜಯನಗರ ಪೊಲೀಸ್ ಠಾಣಾ ಸರಹದ್ದಿನ ಎರಡು ಮನೆ ಕಳವು ಪ್ರಕರಣಗಳು ಮತ್ತು ಗುಬ್ಬಿ ಟೌನ್‍ನಲ್ಲಿ ಮನೆ ಕಳವು ಸೇರಿದಂತೆ ಒಟ್ಟು 5 ಪ್ರಕರಣಗಳನ್ನು ಪತ್ತೆ ಹಚ್ಚಿ,  ಒಟ್ಟು 2,80,000 ರೂ. ಬೆಲೆಯ 90 ಗ್ರಾಂ ಚಿನ್ನದ ಆಭರಣ ಮತ್ತು 930 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದೆ.

      ತುಮಕೂರು ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ವೆಂಕಟಸ್ವಾಮಿರವರ ನೇತೃತ್ವದಲ್ಲಿ ಶ್ರೀ ದೀಪಕ್, ಪಿಎಸ್‍ಐ ಶ್ರೀ ಟಿ.ಎಂ.ಗಂಗಾಧರ್ ಹಾಗೂ ಸಿಬ್ಬಂಣಧಿಯವರಾದ ನವೀನ್ ಕುಮಾರ್, ನಾಗರಾಜು ಮತ್ತು ವಿಜಯಕುಮಾರ್ ರವರುಗಳ ತಂಡವು ಆರೋಪಿ ಮತ್ತು ಕಳವು ಮಾಲನ್ನು ವಶಪಡಿಸಿಕೊಳ್ಳಲು ಶ್ರಮಿಸಿರುತ್ತಾರೆ.

      ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ದಿವ್ಯ.ವಿ.ಗೋಪಿನಾಥ್ ರವರು ಅಭಿನಂದಿಸಿರುತ್ತಾರೆ.

 

(Visited 26 times, 1 visits today)

Related posts

Leave a Comment