
ಚಿಕ್ಕನಾಯಕನಹಳ್ಳಿ: ದೇಶದ ರಾಜಕಾರಣಿಗಳು ವಾರ್ಷಿಕವಾಗಿ ಶೇಕಡ ೧೦ ಹತ್ತರಷ್ಟು ಕುಡುಕ ಪ್ರಜೆಗಳನ್ನು ಸೃಷ್ಟಿಸುತ್ತಿವೆ ದುಡಿಯುವ ರೈತನಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೂಡ ರಾಜಕಾರಣಿಗಳ ಪಾಲಾಗುವ ಸ್ಥಿತಿ ತಲುಪಿದ್ದೇವೆ ರೈತರ ಪಾಲಿನ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ ಎಂದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಹೊಸಳ್ಳಿ ಚಂದ್ರಣ್ಣ ಬಣದ ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಶೆಟ್ಟಿಕೆರೆ ಹೋಬಳಿ ಅಗಸರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶದ ಐದು ಲಕ್ಷದ ನಲವತ್ತೇಳು ಸಾವಿರ ಹಳ್ಳಿಗಳು ಈ ಭಾರತದ ಆಧಾರ ಸ್ಥಂಭಗಳಾಗಿವೆ ಇವುಗಳ ಮೂಲಕವೇ ದೇಶದ ಪ್ರಗತಿಗೆ ರೈತರು ಮುನ್ನೆಲೆಯಾಗಿದ್ದಾರೆ ಇಂತಹ ಹಳ್ಳಿಗಳ ಭವಿಷ್ಯಗಳನ್ನು ನಮ್ಮ ನಾಡುವ ಜನಪ್ರತಿನಿಧಿಗಳು ತೀರಾ ಸಂಕಷ್ಟಕ್ಕೆ ದುಡುತ್ತ ಕೇವಲ ಶೇಕಡ ೩೦ರಷ್ಟಿರುವ ವ್ಯಾಪಾರಸ್ಥರ ಪರವಾಗಿ ಎಲ್ಲಾ ಸರ್ಕಾರಗಳು ಕೆಲಸ ಮಾಡುತ್ತಿವೆ ದೇಶದ ಪ್ರಗತಿ ಹಾಗೂ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸಂಕಷ್ಟಕ್ಕೆ ಬಾರದಿರುವುದು ಅತ್ಯಂತ ವಿಷಾಧಕಾರ ಸಂಗತಿ ರೈತನು ಬೆಳೆದ ಬೆಳೆಗೆ ಖರೀದಿದಾರನಿಂದ ಉತ್ತಮ ಬೆಲೆ ಸಿಗುತ್ತಿಲ್ಲ ರೈತ ಕೊಳ್ಳುವ ಪದಾರ್ಥಗಳಿಗೆ ಮಾತ್ರ ಅಧಿಕ ಬೆಲೆಯಾಗುತ್ತಿದ್ದು ರೈತ ಇನ್ನೂ ತೀರ ಕೆಳಮಟ್ಟದ ಸ್ಥಿತಿಗೆ ಹೋಗುವ ಅಂತಕ್ಕೆ ಈ ಸರ್ಕಾರಗಳು ಮಾಡುತ್ತಿವೆ ಇವುಗಳ ಕಾರಣಕ್ಕೆ ಪರಿಹಾರ ಸಿಗಬೇಕಾದರೆ ಪ್ರತಿಯೊಬ್ಬ ರೈತನು ಹೋರಾಟದ ಹಾದಿಯ ಮೂಲಕವೇ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಬಂದೊದಗಿದೆ ಎಂದರು.
ಎದ್ದೇಳು ಕರ್ನಾಟಕ ಸಂಘದ ಮುಖಂಡ ರಾಮಕೃಷ್ಣಪ್ಪ ಮಾತನಾಡುತ್ತಾ ಯಾವುದೇ ಸರ್ಕಾರಗಳು ರೈತರನ್ನು ಗಂಭೀರವಾಗಿ ಪರಿಗಣಿಸಿಲ್ಲ ಕೇವಲವಾಗಿ ರೈತರನ್ನು ಕಾಣುತ್ತಿದ್ದಾರೆ ರೈತನಿಗೆ ಹುಟ್ಟಿನಿಂದಲೂ ತಾಕಲಾಟ ದಲ್ಲಿಯೇ ನಶಿಸಿ ಹೋಗುತ್ತಿದ್ದಾನೆ ನಂತರ ಹೋರಾಟ ಮೂಲಕ ಅವನ ಆಶಯಗಳನ್ನು ಪೂರೈಸಿಕೊಳ್ಳುವಷ್ಟರಲ್ಲಿ ಅವನು ಕಳೆದೆ ಹೋಗಿರುತ್ತಾನೆ . ಈ ದೇಶದಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಯುದ್ಧ ಒಂದರಲ್ಲಿ ಅಷ್ಟೊಂದು ಸೈನಿಕರು ಸಾಯುತ್ತಿಲ್ಲ ರೈತರನ್ನು ರಕ್ಷಣೆ ಮಾಡಬೇಕಾದ ಸರ್ಕಾರಗಳು ಮಾಡುತ್ತಿಲ್ಲ ನಮ್ಮ ರೈತರು ಕೃಷಿ ಬದುಕನ್ನು ಕಳೆದುಕೊಳ್ಳಬಾರದು ಹೊಲಗಳನ್ನು ಬೀಳುಬಿಡಬಾರದು ತೋಟಗಳ ಸತ್ವ ಕಳೆದಂತೆ ನೋಡಿಕೊಳ್ಳಬೇಕು ರೈತ ಉತ್ಪಾದಿಸುವ ಆಹಾರ ಪದಾರ್ಥಗಳನ್ನು ನಿಲ್ಲಿಸಿದರೆ ದೇಶದ ಹಿನ್ನೆಡೆಗೆ ಸಾಗುತ್ತದೆ ನಾವುಗಳು ಸರ್ಕಾರದ ನೀತಿಗಳ ವಿರುದ್ಧ ಹೋರಾಡವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಆಸ್ತಿಯ ಭೂಸ್ವಾಧೀನ ಅರಣ್ಯೀಕರಣ ನೆಪದಲ್ಲಿ ರೈತರನ್ನು ಒಕ್ಕಲಿಬ್ಬಿಸುವ ಮೂಲಕ ಹಳ್ಳಿ ಹಳ್ಳಿಗಳನ್ನೇ ಇಲ್ಲದಂತೆ ಮಾಡುವ ಉನ್ನಾರ ಈ ಸರ್ಕಾರಗಳು ಮಾಡುತ್ತಿವೆ ನಮ್ಮ ರಕ್ಷಣೆ ಮಾಡಿಕೊಳ್ಳಬೇಕಾದರೆ ಸಂವಿಧಾನದ ಮೂಲಕವೇ ಹೋರಾಡಬೇಕಿದೆ ಎಂದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಎದ್ದೇಳು ಕರ್ನಾಟಕದ ಜಿಲ್ಲಾ ಸಂಯೋಜಕರಾದ ಎನ್ ಇಂದಿರಮ್ಮ ಮಾತನಾಡುತ್ತಾ ಹೋರಾಟಗಳು ನಿರಂತರವಾಗಿರಬೇಕು ಸಾರ್ವಜನಿಕರು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಮಾನ್ಯ ಜನರು ರೈತ ಕಾರ್ಯಕ್ರಮದ ಮೂಲಕ ಹೆಚ್ಚು ಆಕರ್ಷಿತರಾದರೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ದೇಶದಲ್ಲಿ ರೈತರ ಬಳಿ ಇರುವುದೇ ನಿಜವಾದ ಹೋರಾಟದ ಶಕ್ತಿ ಪ್ರಕೃತಿ ಕೂಡ ವಾತಾವರಣ ಹವಾಮಾನ ಆರಂಭದಿAದಲ್ಲೇ ರೈತನೊಂದಿಗೆ ಸಮಸ್ಯೆ ತಂದುಡ್ಡುವ ಸ್ಥಿತಿಯಲ್ಲಿ ಇವತ್ತಿನ ಪರಿಸರ ನಿಂತಿದೆ ರೈತಪರ ಸಂಘಟನೆಗಳು ಎಷ್ಟಿದ್ದರೇನು ಅವೆಲ್ಲವುಗಳ ಗುರಿ ಮಾತ್ರ ರೈತರ ಹಿತ ಕಾಪಾಡುವುದಷ್ಟೇ ಇರುತ್ತದೆ ಹೀಗಿರುವಾಗ ಪ್ರತಿಯೊಬ್ಬರೂ ಸಂಘಟನೆಗಳಲ್ಲಿ ತೊಡಗಿರುವ ಮೂಲಕ ಸಮಸ್ಯೆ ಅರಿತು ಪರಿಹಾರ ಸೂಚಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಇದಕ್ಕಾಗಿ ನಾವೆಲ್ಲರೂ ಸಂಘಟನೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದರು.
ಕನ್ನಡ ಸಂಘದ ಅಧ್ಯಕ್ಷ ಸಿಬಿ ರೇಣುಕ್ ಸ್ವಾಮಿ ಮಾತನಾಡುತ್ತಾ ಚಿಕ್ಕನಾಯಕನಹಳ್ಳಿ ಹೊಸಳ್ಳಿ ಹಾಗೂ ಗೋಡೆಕೆರೆ ಭಾಗದ ಅತಿ ಹೆಚ್ಚು ಗಣಿಗಾರಿಕೆ ಮಾಡುವ ಮೂಲಕ ನಮ್ಮ ಸಂಪತ್ತನ್ನು ದೋಚಿದ್ದು ಅಲ್ಲದೆ ಈ ಭಾಗದ ರೈತರ ಭೂಮಿಯನ್ನು ಈ ಸರ್ಕಾರ ಕಸಿಯುವ ಉನ್ನಾರದಲ್ಲಿ ೩೮೦೦ ಎಕರೆ ಭೂಮಿಯನ್ನು ಅರಣ್ಯಕ್ಕೆ ಸೇರಿದೆ ಎಂದು ಸರ್ಕಾರ ಘೋಷಿಸಿದೆ ಈ ಭಾಗದಲ್ಲಿ ಮನೆಗಳಿದ್ದು ಶಾಲೆಗಳು ತೋಟ ಕೊಳವೆಬಾವಿಗಳು ವಾಸವಾಗಿರುವ ಮನೆಗಳಿಗೆ ಮೂಲಭೂತ ಸೌಕರ್ಯಗಳು ಎಲ್ಲವನ್ನು ಕಲ್ಪಿಸಿದರೂ ಈ ಪ್ರದೇಶವನ್ನು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿರುವುದು ಈ ಭಾಗದ ರೈತರನ್ನು ಒಕ್ಕಲಿಬ್ಬಿಸುವ ಉನ್ನಾರವಾಗಿದೆ ಇದಕ್ಕೆ ಸಾರ್ವಜನಿಕರು ಮತ್ತು ಸ್ಥಳೀಯ ರೈತರು ಹೆಚ್ಚು ಹೋರಾಟಕ್ಕೆ ಕೈಜೋಡಿಸಿದಾಗ ಮಾತ್ರ ಉಳುಮೆ ಮಾಡುವ ಭೂಮಿ ನಮ್ಮದಾಗುತ್ತದೆ ಎಂದರು.
ಸಮಾರAಭದಲ್ಲಿ ಕಾರ್ಯಾಧ್ಯಕ್ಷ ಕರಿಯಪ್ಪ ಸಿದ್ದರಾಮಯ್ಯ ನೂತನ ಸಂಘದ ಅಧ್ಯಕ್ಷ ಮಲ್ಲೇಶಯ್ಯ ಶಂಕ್ರಪ್ಪ ಗಂಗಣ್ಣ ನಿರಾಶ್ರಿತ ಮಹಿಳಾ ಚಾರಿಟಬಲ್ ನ ಅಧ್ಯಕ್ಷ ಜೈ ಲಕ್ಷ್ಮಿ ಕರವೇ ಸಂಘದ ಗೌರವಾಧ್ಯಕ್ಷೆ ಮಾಲಾ ಬಸವರಾಜ್ ಚನ್ನರಾಯಪಟ್ಟಣ ತಾಲೂಕ್ ರೈತರ ಸಂಘದ ಅಧ್ಯಕ್ಷ ಪುಷ್ಪಭಾಯಿ ಪುಟ್ಟಯ್ಯ ತಿಮ್ಮ ಸ್ವಾಮಿ ನಿಂಗಪ್ಪ ಮಲ್ಲೇಶಪ್ಪ ಶಾಂತಪ್ಪ ಮಲ್ಲಿಕ್ಣ್ಣ ಗ್ರಾಮ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದರು.
(Visited 1 times, 1 visits today)