ಅಪಘಾತ : ಶಾಲಾ ವಾಹನ ಚಾಲಕನಿಗೆ ಗಾಯ

ಕೊರಟಗೆರೆ:

       ಕಾರು ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ಹಾಲಿನ ಲಾರಿ ಮತ್ತು ಶಾಲಾ ವಾಹನದ ನಡುವೆ ಅಪಘಾತ ಆಗಿ ಶಾಲಾ ವಾಹನ ಚಾಲಕನಿಗೆ ಪೇಟ್ಟಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.

      ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಯಾದಗೆರೆ ಗ್ರಾಮದ ಸಮೀಪದ ಸೇಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‍ನ ಶಾಲಾ ವಾಹನದ ಚಾಲಕನಿಗೆ ತೀರ್ವವಾಗಿ ತಲೆಗೆ ಪೆಟ್ಟಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀದ್ದಾರೆ. ಶಾಲಾ ವಾಹನದಲ್ಲಿದ್ದ ಓರ್ವ ವಿದ್ಯಾರ್ಥಿಗೆ ಯಾವುದೇ ರೀತಿಯ ಗಾಯ ಆಗದೇ ಪ್ರಾಣಪಾಯದಿಂದ ಪಾರಾಗಿದ್ದಾನೆ.

      ತುಮಕೂರು ಕಡೆಯಿಂದ ಬಂದ ಹಾಲಿನ ವಾಹನ ಮತ್ತು ಕೊರಟಗೆರೆ ಕಡೆಯಿಂದ ವಿದ್ಯಾರ್ಥಿಗಳನ್ನು ಕರೆತರಲು ಬೆಳಧರ ಹೋಗುವ ವೇಳೆ ಅಡ್ಡದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದ ವೇಳೆ ಅಪಘಾತ ವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

      ಅಪಘಾತ ಆದ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಮಾಡಿದ ಹಾಲಿನ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(Visited 11 times, 1 visits today)

Related posts

Leave a Comment