ಆಸ್ಟ್ರೇಲಿಯಾ:
ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎರಡನೇ ದಿನವಾದ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸಿದ್ದಾರೆ.
ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್ನಲ್ಲಿ ಗಾಂಧೀಜಿ ಅವರ ಪ್ರತಿಮೆ ಇರಿಸಲಾಗಿದೆ. ಭಾರತ ಸರ್ಕಾರ ಈ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದೆ. ಶಿಲ್ಪಿಗಳಾದ ರಾಮ್ ಮತ್ತು ಅನಿಲ್ ಸುತಾರ್ ಅವರು ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಪ್ರತಿಮೆ ಅನಾವರಣಾ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್ ಮೋರ್ರಿಸೋನ್ ಮತ್ತು ಪರ್ರಮಟ್ಟ ನಗರದ ಮೇಯರ್ ಆ್ಯಂಡ್ರ್ಯೂ ವಿಲ್ಸನ್ ಮತ್ತು ರಾಷ್ಟ್ರಪತಿಯವರ ಪತ್ನಿ ಹಾಜರಿದ್ದರು.
(Visited 31 times, 1 visits today)