ಈ ಸೋಮನ ತಂಡಕ್ಕೆ ಸುವರ್ಣ ಹಬ್ಬದ ಸಡಗರ !

       ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ದೇವರುಗಳ ಉಸ್ತವ ಮತ್ತು ಜಾತ್ರೆಗಳ ಸಮಯದಲ್ಲಿ ಸೋಮಗಳ ಮುಖವಾಡಗಳನ್ನು ಧರಿಸಿಕೊಂಡು ಕುಣಿಯುವ ಜಾನಪದ ಕಲೆಯು ಆಚರಣೆಯಲ್ಲಿದೆ. ಇದನ್ನು ‘ಸೋಮನ ಕುಣಿತ’ ಎಂದು ಕರೆಯಲಾಗುತ್ತದೆ.

      ಕೇವಲ ದೇವರುಗಳ ಮೆರವಣಿಗೆಗಳಿಗೆ ಮಾತ್ರ ಸೀಮಿತಗೊಂಡಿದ್ದ ಸೋಮನ ಕುಣಿತವನ್ನು ಆಧುನಿಕ ರಂಗದ ಮೇಲೆ ತರುವಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ದಂಡಿನಶಿವರದ ಡಿ. ಎಸ್. ಗಂಗಾಧರಗೌಡರ ತಂಡ ಯಶಸ್ವಿಯಾಗಿದೆ.

      ಈ ಜಾನಪದ ಕಲೆಗೆ ಮರುಜೀವ ನೀಡಿ,ರಾಜ್ಯದಿಂದ ರಾಸ್ಟ್ರ ಮಟ್ಟಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ತಂಡಕ್ಕೆ ಸಲ್ಲುತ್ತದೆ.
ಕಳೆದ ಮೂವತ್ತು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಈ ತಂಡ ಸಾವಿರಾರು ಪ್ರದರ್ಶನ ನೀಡುತ್ತಾ ಬಂದಿದ್ದು, ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡು ಇದೀಗ ಸುವರ್ಣ ಹಬ್ಬದ ಸಡಗರದ ಹೊಸ್ತಿಲಲ್ಲಿದೆ.

      ಹದಿನೈದು ಜನರಿಂದ ಕೊಡಿರುವ ಈ ಸೋಮನ ತಂಡದ ಕಲಾವಿದರು ಸೋಮಗಳ ಮುಖವಾಡಗಳನ್ನು ಧರಿಸಿಕೊಂಡು ಹಿನ್ನೆಲೆ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿಯುವ ರೀತಿ ನಿಜಕ್ಕೂ ಮೈನವಿರೇಳಿಸುತ್ತದೆ.

      ದೆಹಲಿಯ ಸೂರಜ್ಕುಂಡ್, ಅಂತರ್ ರಾಸ್ತ್ರೀಯ ಕುಲು ಉಸ್ತವ,ರಾಸ್ತ್ರೀಯ ಚಲನಚಿತ್ರೋಸ್ತವ , ಪುರಂದರ ಉಸ್ಸ್ತವ, ವಿಶ್ವ ಕನ್ನಡ ಸಮ್ಮೇಳನ, ಮೈಸೂರು ದಸರಾ ಮುಂತಾದ ಪ್ರಮುಖ ಮೆರವಣೆಗೆಗಳಲ್ಲಿ ಈ ತಂಡ ತನ್ನ ಕಲೆಯನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದೆ. ದೂರದರ್ಶನದ ರಾಸ್ತ್ರೀಯ ಜಾಲದಲ್ಲೂ ಸಹ ಈ ಸೋಮನ ಕುಣಿತ ಪ್ರಸಾರಗೊಂಡಿದೆ.

      ಈ ತಂಡವನ್ನು ಕಟ್ಟಿ ಬೆಳೆಸಿದ ಡಿ. ಎಸ್. ಗಂಗಾಧರಗೌಡರು ಸ್ವಯಂ ಜಾನಪದ ಕಲಾವಿದರಾಗಿದ್ದು, ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋಸ್ತಾವ ಪ್ರಶಸ್ತಿ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದೇ ತಂಡದ ಮತ್ತೊಬ್ಬ ಕಲಾವಿದರಾದ ಪಟೇಲ್ ಕೆಂಪೇಗೌಡರಿಗೆ ರಾಜ್ಯೋಸ್ತಾವ ಪ್ರಶಸ್ತಿ ಲಭಿಸಿದೆ.

     ‘ ದೃಶ್ಯ ಮಾಧ್ಯಮಗಳಿಂದಾಗಿ ಜಾನಪದ ಕಲೆಗಳು ಅವಸಾನದತ್ತ ಸಾಗುತ್ತಿದ್ದು,ಇಂತಹ ಕಲೆಗಳ ಉಳಿವಿಗಾಗಿ ಯುವ ಜನಾಂಗ ಮುಂದೆ ಬರಬೇಕು ‘ ಎಂಬುದು ಗಂಗಾಧರಗೌಡ ಅವರ ಅನಿಸಿಕೆ.

– ದಂಡಿನಶಿವರ ಮಂಜುನಾಥ್
ಲೇಖಕರು
ನಂ.28, 12 ನೇ ಮುಕ್ಯ ರಸ್ತೆ, ಪುಟ್ಟಯ್ಯ ರೋಡ್,
ಕಾಮಾಕ್ಷಿಪಾಳ್ಯ,
ಬೆಂಗಳೂರು- 560079.
ಮೊಬೈಲ್: 9060474300

(Visited 290 times, 1 visits today)

Related posts

Leave a Comment