ಕನಕದಾಸರ ಕೀರ್ತನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಒತ್ತಾಯ

ಚಿಕ್ಕನಾಯಕನಹಳ್ಳಿ,:

ಕನಕದಾಸರ ಕೀರ್ತನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತೆ ಜಿ.ಪಂ ಸದಸ್ಯ ವೈ.ಸಿ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕನಕದಾಸರ 531ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೇವಲ ಕನಕದಾಸರ ಜಯಂತಿಯನ್ನು ಆಚರಿಸಿದರೆ ಸಾಲದು ಅವರು ಹಾಕಿಕೊಟ್ಟ ದಾರಿ ಹಾಗೂ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಕನಕದಾಸರು ಮಾನವರೆಲ್ಲ ಒಂದೇ ಕುಲ ಎಂದು ಸಾರಿದ ಅವರು ಕನಕದಾಸರನ್ನು ಜಾತಿಗೆ ನೇಮಿತಗೊಳಿಸಬಾರದು ಎಂದರು.

ಶಾಸಕ ಜೆ.ಸಿಮಾಧುಸ್ವಾಮಿ ಮಾತನಾಡಿ ಉಡುಪಿಯಲ್ಲಿ ಸಂಪ್ರದಾಯದ ಕಟ್ಟು ಪಾಡುಗಳನ್ನು ದೂರ ಮಾಡಿ ದೇವರಿಗೆ ಭಕ್ತರೇ ಶ್ರೇಷ್ಠರುಎಂದ ಅವರು ಮನುಷ್ಯನಿಗೆ ನಂಬಿಕೆ ವಿಶ್ವಾಸ ಶ್ರೇಷ್ಠ ಅರಿವನ್ನು ಮೂಡಿಸುವವನೇ ಗುರು ದಾಸ ಪರಂಪರೆಯಲ್ಲಿ ದಾಸ ಶ್ರೇಷ್ಠರಾದ ವ್ಯಾಸರಾಯರ ಶಿಷ್ಯರಾಗಿ ಕಿರ್ತನೆಗಳನ್ನು ರಚಿಸುವ ಮೂಲಕ ಸಮಾಜದಲ್ಲಿರುವ ಮೂಡನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಯ್ಯ ಮಾತನಾಡಿ ಕನಕದಾಸರು ಕವಿಯಾಗಿ ಸಂತನಾಗಿ, ಕೀರ್ತನಕಾರನಾಗಿ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಕವಿ ಸಾಯುತ್ತಾನೆ ಹೊರತು ಅವನು ರಚಿಸಿದ ಕೀರ್ತನೆಗಳು ಚಿಂತನೆಗಳು ಎಂದು ಸಾಯುವುದಿಲ್ಲ ಸಂಪ್ರದಾಯ ವಾದಿಗಳು ಜಾತಿಗೆ ಮನ್ನಣೆ ನೀಡದೇ ಗುಣಕ್ಕೆ ಮನ್ನಣೆ ನೀಡಿದರೆ ಗೌರವ ಲಭಿಸಲಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವರಾಜ ಅರಸು ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಡಾ||ಸಿ.ಎಂ ಗುರುಮೂರ್ತಿ ಮಾತನಾಡಿ ನನ್ನನ್ನು ಕನಕ ಜಯಂತಿಗೆ ಕರೆಸಿ ಸನ್ಮಾನ ಮಾಡುತ್ತಿರುವುದು ಸಂತಸ, ನಾನು ಚಿ.ನಾ.ಹಳ್ಳಿ ಹುಟ್ಟಿದರು ಹೆಚ್ಚಿನ ಶಿಕ್ಷಣವನ್ನು ಬೇರೆ ಬೇರೆ ಕಡೆ ಮಾಡಿದ್ದೇನೆ ವಿದ್ಯೆ ಇಲ್ಲದೆ ಮನುಷ್ಯ ಏನು ಮಾಡಲು ಸಾಧ್ಯವಿಲ್ಲ ನಮ್ಮ ವಂಶಜರು ಇಲ್ಲಿಯವರಾದರೂ ಉತ್ತಮ ಶಿಕ್ಷಣ ಪಡೆದುದ್ದರಿಂದ ನಮ್ಮ ವಂಶದಲ್ಲಿ 40 ಜನ ವೈಧ್ಯಾಧಿಕಾರಿಗಳು ಇದ್ದಾರೆ. ದೇಶಸೇವೆ ಹಾಗೂ ವೈಧ್ಯಕೀಯ ವೃತ್ತಿ ಶ್ರೇಷ್ಠವಾದದ್ದು ಎಂದರು.
ಪಟ್ಟಣದ ಪುರಸಭೆಯಿಂದ ಹೊರಟ ಕನಕದಾಸರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು.

ಕಾರ್ಯಕ್ರಮದಲ್ಲಿ ಡಾ||ಸಿ.ಎಂ ಗುರುಮೂರ್ತಿ ಹಾಗೂ ಕಲಾವಿದ ಎಸ್.ಡಿ ದೇವರಾಜು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 6ಜನರಿಗೆ ತಾ||ಆಡಳಿತ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಡಿಸುರೇಶ್, ಸಿ.ಎಸ್.ರಮೇಶ್. ಸಿ.ಬಸವರಾಜು, ರಾಜಮ್ಮ, ಜಯಮ್ಮ, ಮಾಜಿ ಪುರಸಭಾಧ್ಯಕ್ಷರಾದ ಸಿ.ಡಿಚಂದ್ರಶೇಖರ್, ಸಿ.ಎಮ್.ರಂಗಸ್ವಾಮಯ್ಯ, ಮತ್ತಿತರರು ಉಪಸ್ಥಿತರಿದ್ದರು.

(Visited 67 times, 1 visits today)

Related posts