ಕರಡಿ ದಾಳಿಗೆ ಇಬ್ಬರು ದಂಪತಿಗಳ ಬಲಿ !

     ಬೆಳ್ಳಂಬೆಳಗ್ಗೆ ಕರಡಿ ದಾಳಿ ಮಾಡಿದ್ದರಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಸೂರೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

      ರೇಣುಕಮ್ಮ ಮತ್ತು ಬೇದುರ್‍ಬೀ ಅವರ ಕೈಗಳನ್ನು ಬಗೆದು ಕಂಡವನ್ನು ಕಿತ್ತಿದೆ. ಕರೀಮ್‍ಸಾಬ್ ಕಾಲನ್ನು ಕಚ್ಚಿಬಿಟ್ಟಿದೆ. ಮೂವರನ್ನೂ ತೋವಿನಕೆರೆ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರೂ ಇವುಗಳ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

      ಜಿಲ್ಲೆಯಲ್ಲಿರುವ ಕರಡಿಧಾಮದ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಇದರಿಂದಾಗಿ ಸ್ಥಳಿಯರ ಆಕ್ರೋಶ ಮುಗಿಲು ಮುಟ್ಟಿದೆ ಇನ್ನೂ ಕರಡಿಯಿಂದ ಕಡಿಸಿಕೊಂಡವರನ್ನು ನೋಡಲು ಜನತೆ ಮುಗಿಬಿದಿದ್ದಾರೆ ದಾಳಿಗೊಳಗಾದವರಿಗೆ ಸಮೀಪದ  ತೋವಿನಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಗುತ್ತಿದೆ ಎಂದು ವರದಿಯಾಗಿದೆ.

(Visited 80 times, 1 visits today)

Related posts

Leave a Comment