ಕಲ್ಲೂರಿನಲ್ಲಿ ಗ್ರಾಮೀಣ ಸಾರಿಗೆ ಬಸ್ ಉದ್ಘಾಟನೆ

 ತುಮಕೂರು:

      ಗ್ರಾಮೀಣ ಪ್ರದೇಶದ ಪ್ರಯಾಣಿಕರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಲೂರು ಗ್ರಾಮದಿಂದ ತುಮಕೂರು ನಗರಕ್ಕೆ ಕಡಬ, ನಿಟ್ಟೂರು, ಗುಬ್ಬಿ ಮಾರ್ಗವಾಗಿ ಗ್ರಾಮೀಣ ಸಾರಿಗೆ ಮಾರ್ಗಕ್ಕೆ ಚಾಲನೆ ನೀಡಲಾಯಿತು.

      ಹೊಸ ಮಾರ್ಗದ ಬಸ್ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಂಸ್ಥೆಯ ವಿಭಾಗೀಯ ತಾಂತ್ರಿಕ ಶಿಲ್ಪಿ ಕೆ.ಜೆ.ಬಸವರಾಜು ಈ ಮಾರ್ಗದಲ್ಲಿ ಬಸ್‍ಬೇಕೆಂಬ ಇಲ್ಲಿನ ಜನರ ಬಹಳ ದಿನಗಳ ಬೇಡಿಕೆಯನ್ನು ಈಡೇರಿಸಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು.

      ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗನುಣವಾಗಿ ಹೆಚ್ಚಿನ ಟ್ರಿಪ್‍ಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಈ ಭಾಗದ ಪ್ರಯಾಣಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಕಲ್ಲೂರಿನ ಅಕ್ಕಪಕ್ಕದ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.

      ಈ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಾದ ಬಿ.ಮಂಜುನಾಥ್, ಮಹೇಶ್ ಮತ್ತು ಜಿಲ್ಲಾ ಪಂಚಾಯತಿ ಸದಸ್ಯ ನಾಗರಾಜ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

(Visited 10 times, 1 visits today)

Related posts

Leave a Comment