ಕಾಂಗ್ರೆಸ್‍ನವರು ಹೇಳಿದಾಗ ಸಂಪುಟ ವಿಸ್ತರಣೆ: ಕುಮಾರಸ್ವಾಮಿ

 ಬೆಳಗಾವಿ:

      ಕಾಂಗ್ರೆಸ್‍ನವರು ಹೇಳಿದಾಗ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆಗೆ ನಾವು ತಯಾರಾಗಿದ್ದೇವೆ. ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. 

      ಕಾಂಗ್ರೆಸ್ ನಾಯಕರು ಯಾವ ಸಮದಯಲ್ಲಿ ಎಂದು ಹೇಳುತ್ತಾರೋ ಆಗ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿದ್ಧನಿದ್ದೇನೆ. ಹೀಗಂತ ಮುಖ್ಯಮಂತ್ರಿ ಹೆಚ್ . ಡಿ . ಕುಮಾರಸ್ವಾಮಿ ಹೇಳಿದ್ದಾರೆ . 
               ಡಿ. 22 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ . ಅದೇ ರೀತಿ ಸಂಪುಟ ವಿಸ್ತರಣೆ ಮಾಡಲು ತಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ಶಾಸಕರು ಗೈರು ಆಗಿರುವ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ . ಆದರೆ ಕಾಂಗ್ರೆಸ್ ನವರು ಹೇಳಿದ ದಿನದಂದು ಸಂಪುಟವಿಸ್ತರಣೆಗೆ ಸಿದ್ಧವಿರುವುದಾಗಿ ಸಿಎಂ ಹೇಳಿದರು. 

 

(Visited 30 times, 1 visits today)

Related posts