ತುಮಕೂರು: ಗುಬ್ಬಿ ರಿಂಗ್ ರಸ್ತೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ರಿಯಾಯಿತಿ ದರದ ಯೂರಿಯಾ ರಸಗೊಬ್ಬರವನ್ನು ಸರಕು ವಾಹನ ಸಂಖ್ಯೆ : ಕೆಎ.೦೫-ಎಎ-೫೩೯೯ ರಲ್ಲಿ ಸಾಗಾಣಿಕೆ ಮಾಡುತ್ತಿರುವಾಗ ವಾಣಿಜ್ಯ ತೆರಿಗೆ ಅಧಿಕಾರಿ(ಜಾರಿ-೨), ಸಹಾಯಕ ಆಯುಕ್ತರು(ಜಾರಿ), ವಾಣಿಜ್ಯ ತೆರಿಗೆಗಳ ಕಛೇರಿ ತುಮಕೂರು ಇವರು ರಸ್ತೆ ಜಾಗೃತಿ ಕಾರ್ಯನಿರ್ವಹಿಸುತ್ತಿರುವಾಗ ವಾಹನವನ್ನು ಪರಿಶೀಲಿಸಿ ದೋಷಪೂರಿತ ದಾಖಲೆಗಳು ಕಂಡು ಬಂದ ಮೇರೆಗೆ ಕೃಷಿ ಇಲಾಖೆ, ಜಾರಿದಳ ಅಧಿಕಾರಿಗಳ ಗಮನಕ್ಕೆ ತಂದು ವಾಹನವನ್ನು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಶ್ರೀ.ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-೧), ಜಂಟಿ ಕೃಷಿ ನಿರ್ದೇಶಕರ ಕಛೇರಿ, ತುಮಕೂರು ರವರು ತಿಳಿಸಿದ್ದಾರೆ.
ಸದರಿ ವಾಹನದಲ್ಲಿ ಸಾವಯವ ಗೊಬ್ಬರ ಎಂಬ ಹೆಸರಿನಲ್ಲಿ ಅಕ್ರಮವಾಗಿ ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು (೨೦ ಟನ್ ಅಂದಾಜು ಮೌಲ್ಯ ರೂ.೮೭೦೩೩೩/- ಎಂಟು ಲಕ್ಷ ಎಪ್ಪತ್ತು ಸಾವಿರದ ಮೂರು ನೂರ ಮೂವತ್ಮೂರು ಮಾತ್ರ) ಸೂಕ್ತ ದಾಖಲೆಗಳಿಲ್ಲದೆ, ಕೃಷಿ ಇಲಾಖೆಯ ಅನುಮತಿಯಿಲ್ಲದೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಾಗಾಣಿಕೆ ಮಾಡುತ್ತಿರುವುದು, ಬಿಲ್ಲಿನಲ್ಲಿ ನಮೂದು ಮಾಡಿರುವ ರಸಗೊಬ್ಬರಕ್ಕೂ ಮತ್ತು ವಾಸ್ತವ ರಸಗೊಬ್ಬರಕ್ಕೂ ಹೊಂದಾಣಿಕೆಯಾಗದೇ ಇರುವುದು ಮತ್ತು ಗುಣ ನಿಯಂತ್ರಣ ವಿಶ್ಲೇಷಣೆಯಲ್ಲಿ ರಿಯಾಯಿತಿ ದರದ ರಸಗೊಬ್ಬರವೆಂದು ದೃಢಪಟ್ಟ ಹಿನ್ನೆಲೆಯಲ್ಲಿ ಲಾರಿಯ ಚಾಲಕರು/ಮಾಲೀಕರು, ಸರಬರಾಜುದಾರರು ಮತ್ತು ಖರೀದಿದಾರರ ವಿರುದ್ಧ ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸದರಿ ಜಪ್ತಿ ಕಾರ್ಯವನ್ನು ಕೆ.ಎನ್.ನರಸಿಂಹರಾಜು, ವಾಣಿಜ್ಯ ಅಧಿಕಾರಿ(ಜಾರಿ-೨), ಶ್ರೀ.ನಾಗರಾಜು, ಸಹಾಯಕ ಆಯುಕ್ತರು(ಜಾರಿ), ವಾಣಿಜ್ಯ ತೆರಿಗೆಗಳ ಕಛೇರಿ, ತುಮಕೂರು ರವರು ಕೈಗೊಂಡಿರುತ್ತಾರೆ. ಕಾಯ್ದೆಗಳ ಉಲ್ಲಂಘನೆ ಸಂಬAಧ ಶ್ರೀ.ಅಶ್ವತ್ಥನಾರಾಯಣ.ವೈ., ರಸಗೊಬ್ಬರ ಪರಿವೀಕ್ಷಕರು, ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-೨), ಜಂಟಿ ಕೃಷಿ ನಿರ್ದೇಶಕರ ಕಛೇರಿ, ತುಮಕೂರು ರವರು ದೂರು ನೀಡಿದ ಮೇರೆಗೆ ಶ್ರೀ.ಪ್ರಸನ್ನ ಕುಮಾರ್, ಜಯನಗರ ಪೋಲೀಸ್ ಠಾಣೆ, ತುಮಕೂರು ರವರು ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿಯಾಗಿ ಕ್ರಮವಹಿಸಿರುತ್ತಾರೆ. ಸದರಿ ಜಪ್ತಿ ಕಾರ್ಯದಲ್ಲಿ ಶ್ರೀ.ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-೧) ಮತ್ತು ಆರಕ್ಷಕ ಇಲಾಖೆಯ ಸಿಬ್ಬಂದಿಗಳಾದ ಶ್ರೀ.ನವೀನ್ ರವರು ಭಾಗವಹಿಸಿರುತ್ತಾರೆ.
(Visited 1 times, 1 visits today)