ಕುಂಚಿಗ ಸಮುದಾಯವನ್ನು ಕೇಂದ್ರದಲ್ಲಿ ಒಬಿಸಿಗೆ ಸೇರಿಸಬೇಕು : ಶಾಸಕ ವೀರಭದ್ರಯ್ಯ

ಕೊರಟಗೆರೆ:

      ದೇವಾಲಯ ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಿ ಜಾತಿ-ಬೇದವಿಲ್ಲದೇ ಪ್ರತಿಯೊಬ್ಬರಿಗೆ ಮುಕ್ತ ಅವಕಾಶ ನೀಡವಂತಾಗಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.

      ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆ ಗ್ರಾಮದ ಪುರಾತನ ಇತಿಹಾಸವುಳ್ಳ ಶ್ರೀವೀರನಾಗಮ್ಮ ದೇವಾಲಯಕ್ಕೆ 2.5ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ರಾಜಗೂಪುರ, ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮವಾರ ವಹಿಸಿ ಮಾತನಾಡಿದರು.

      ಕುಂಚಿಟಿಗರು ಒಟ್ಟಾಗಿ ನಮ್ಮ 48ಕುಲ ದೇವಾಲಯಗಳ ರಕ್ಷಣೆಗೆ ಪಣ ತೋಡಬೇಕು. ಮೊದಲನೇ ಹಂತವಾಗಿ ಕೇವಲ ಬಸಲೇನೋರ ಬುಡಕಟ್ಟಿನ 33ಬಂಡಿಗಳನ್ನು ಈ ಭಾರಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ 48ಕುಲಗಳ ಬಂಡಿಗಳನ್ನು ತಂದು ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ ಎಂದರು.

      ದೇವಾಲಯದಲ್ಲಿ ಗಂಡಿಗೆ ಅವಕಾಶ ಹೆಣ್ಣಿಗೆ ಅವಕಾಶ ನೀಡದಿರುವಂತಹ ಸಂಪ್ರದಾಯಗಳು ಬೇಡ ಇಬ್ಬರೂ ಸಹ ಮನುಷ್ಯರೇ ದೇವರ ದರ್ಶನ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಬೇಕು. ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಾರ್ಹ ಎಲ್ಲರೂ ಇದನ್ನು ಒಪ್ಪುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

      ಮಧುಗಿರಿ ಶಾಸಕ ವೀರಭದ್ರಯ್ಯ ಮಾತನಾಡಿ ಕುಂಚಿಗ ಸಮುದಾಯವನ್ನು ಕೇಂದ್ರದಲ್ಲಿ ಒಬಿಸಿಗೆ ಸೇರಿಸಬೇಕು. ಕೇಂದ್ರದಿಂದ ಸಿಗುವಂತಹ ಉದ್ಯೋಗ ಮತ್ತು ಇತರೆ ಸೌಲಭ್ಯಗಳಿಂದ ಸಮದಾಯ ವಂಚಿತವಾಗಿದ್ದು ಇದನ್ನು ಸರಕಾರದ ಹಂತದಲ್ಲಿ ಮತ್ತೊಮ್ಮ ಪರಿಶೀಲಿಸಿ ಕೇಂದ್ರದ ಆಯೋಗಕ್ಕೆ ಶಿಪಾರಸ್ಸು ಮಾಡಬೇಕು ಎಂದು ಹೇಳಿದರು.

      ಹೊಸದುರ್ಗದ ಡಾ.ಶಾಂತವೀರಮಹಾಸ್ವಾಮೀಜಿ ಮಾತನಾಡಿ ಸಮುದಾಯ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚ್ಚಿನ ಆಧ್ಯತೆಯನ್ನು ನೀಡಬೇಕು ಮಕ್ಕಳನ್ನು ಸಜ್ಜನರನ್ನಾಗಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆಯಿತ್ತರು.
ವಡ್ಡಗೆರೆ ವೀರನಾಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ಮಾತನಾಡಿ ಕುಂಚಿಟಿಗ ಸಮುದಾಯ ಒಂದೆಡೆ ಸೇರಿಸಲು ಇಂದಿನ ಕಾರ್ಯಕ್ರಮ ವೇಧಿಕೆಯಾಗಿದೆ. ನಮ್ಮೆಲ್ಲಾ ಬುಡಕಟ್ಟಿನ ಬಂಡಿ, ಪೂಜಾರ ಮತ್ತು ಭಕ್ತರಿಗೆ ಆಭಾರಿಯಾಗಿದ್ದೇನೆ ಎಂದರು.

      ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ 200 ವರ್ಷಗಳ ಹಿಂದೆ ನಡೆದಂತಹ ಈ ಬಂಡಿಗಳ ಉತ್ಸವ ಈಗ ನಡೆಯುತ್ತಿದೆ. ಈ ದೇವತಾ ಕಾರ್ಯಕ್ರಮಗಳನ್ನು ನಡೆಸಲು ಪ್ರತ್ಯೇಕ ಪೂರ್ವ ನಿಯೋಜಿತ ಕ್ಯಾಲೆಂಡರ್ ಒಂದನ್ನು ತರಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಂಚಿಟಿಗ ಬಸಲೇನವರ ಗೋತ್ರದ ವಡ್ಡಗೆರೆ ಗುಡಿಕಟ್ಟು ಮತು ಗಾಡಿಕಟ್ಟುಗೆ ಸೇರಿರುವ ಗುರಮನೆ, ಕಟ್ಟೇಮನೆ, 12 ಅಮಾವಾಸ್ಯೆ ದೇವಸ್ಥಾನ, 33 ಬಂಡಿಗಳನ್ನು ಬರ ಮಾಡಿಕೊಂಡು ವಿಶೇಷ ರೀತಿಯಲ್ಲಿ ಪೂಜೆಯೊಂದಿಗೆನೂತನ ದೇವಾಲಯಗಳ ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ರಾಜಗೋಪುರ ಕಳಶಗಳ ಪ್ರತಿಷ್ಠಾಮನೆ, ನಯೋನೊನ್ಮಿಲ ಹೋಮ, ಪ್ರಾಣ ಪ್ರತಿಷ್ಠಾಪನಾ ಹೋಮ, ಪ್ರದಾನ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಶಾಂತಿಹೋಮ, ಮಹಾ ಪೂರ್ಣಾಹುತಿ ಕುಂಬಾಬಿಷೇಕದೊಂದಿಗೆ ಬಂಡಿಗಳ ಪೂಜೆ ಮತ್ತು ಉತ್ಸವ ನಂತರ ಅನ್ನ ಸಂತರ್ಪಣೆ, ಸಂಗೀತಕಾರ್ಯಕ್ರಮ ನಡೆಯಿತು.

ವೇದಿಕೆ ಕಾರ್ಯಕ್ರಮದಲ್ಲಿ ತುಮಕೂರು ಕುಂಚಿಟಿಗ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕಾಮರಾಜು, ಮಧುಗಿರಿ ಕುಂಚಿಟಿಗರ ಸಂಘದ ಅಧ್ಯಕ್ಷ ರಾಜಶೇಖರಯ್ಯ, ಮುಖಂಡರಾದ ವೀರಕ್ಯಾತಯ್ಯ, ರಾಮಣ್ಣ, ರಾಜಣ್ಣ, ನಾಗರಾಜು, ವಿ.ಶಿವಣ್ಣ, ವಿನಯ್ ಕುಮಾರ್‍ಪೂಜಾರಿ, ಅರ್ಚಕ ಶಿಕುಮಾರಸ್ವಾಮಿ, ತಹಶೀಲ್ದಾರ್ ಎಂ.ನಾಗರಾಜು, ಕಂದಾಯ ನಿರೀಕ್ಷಕ ನರಸಿಂಹಮೂರ್ತಿ, ಬಿಬಿಎಂಪಿ ಸದಸ್ಯ ಲೋಕೇಶ್, ಮುಖಂಡರಾದ ಪಟ್ಟೀರಪ್ಪ, ರಾಮಾಂಜನಪ್ಪ, ಜ್ಞಾನೇಶ್,ಪುಟ್ಟರಾಜು, ಬೈಪನಹಳ್ಳಿ ನಾಗರಾಜು ಸೇರಿದಂತೆ ಇತರರು ಇದ್ದರು.

(Visited 26 times, 1 visits today)

Related posts

Leave a Comment