ಕುಡಿದ ಅಮಲಿನಲ್ಲಿ‌ ಹಾವಿನೊಂದಿಗೆ ಸರಸವಾಡಿದ ಮಹಿಳೆ

ತುಮಕೂರು:
      ಹಾವು ಎಂದರೆ ಯಾರಿಗೆ ತಾನೇ ಭವವಿಲ್ಲ ಹೇಳಿ. ಆದರೆ ಈ ಮಹಿಳೆ ಮಾತ್ರ ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಹಾವಿನೊಂದಿಗೆ ಚೆಲ್ಲಾಟವಾಡಿದ್ದಾಳೆ.
      ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ  ಇಂಥಹದ್ದೊಂದು ಘಟನೆ ನಡೆದಿದೆ. ಸುಶೀಲಮ್ಮಾ ಎಂಬ ಮಹಿಳೆಯೇ ಹಾವಿನೊಂದಿಗೆ ಆಟವಾಡಿದ ಮಹಿಳೆ. ಗ್ರಾಮದಲ್ಲಿ  ಹಾವು ಕಂಡ ವಿಚಾರದ ಬಗ್ಗೆ ಜನರು ಮಾತನಾಡಿದ್ದಾರೆ. ಆ ಮಾತು ಕೇಳಿಸಿಕೊಂಡು ಹೋದ ಸುಶೀಲಮ್ಮ ಹಾವನ್ನು ಹಿಡಿದು, ಕೊರಳಿಗೆ ಹಾಕೊಂಡು ಸರಸವಾಡಿದ್ದಾಳೆ. ಈ ಘಟನೆ ಕೆಲ ಕಾಲ ನೆರೆದ ಜನರ ವಿಸ್ಮಯಕ್ಕೆ ಕಾರಣವಾಗಿತ್ತು. ವಿಷ ಪೂರಿತ ಹಾವಲ್ಲದಿದ್ದರಿಂದ ಕಚ್ಚಲಿಲ್ಲ ಹಾವನ್ನು ಸಾಯಿಸಿ ಸುಡುತ್ತೇನೆ ಇಲ್ಲವಾದರೆ ಕಾಡಿಗೆ ಬಿಡುತ್ತೇನೆ ತಿನ್ನುವುದಿಲ್ಲ ಎಂದು ಪಾನಮತ್ತ ಮಹಿಳೆ ಹೇಳುತ್ತಿದ್ದರು ಜನತೆ ಇದನ್ನು ನೊಡುತ್ತ ವಿಸ್ಮಿತರಾಗಿದ್ದರು.
(Visited 50 times, 1 visits today)

Related posts

Leave a Comment