ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನ : ಬಿಜೆಪಿ ಘಟಕದಿಂದ ಶ್ರದ್ದಾಂಜಲಿ

ತುರುವೇಕೆರೆ:

      ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ನಿಧನದ ಹಿನ್ನಲೆ ತಾಲ್ಲೂಕು ಬಿಜೆಪಿ ಘಟಕದವತಿಯಿಂದ ಪಟ್ಟಣದ ತಾಲೂಕು ಕಛೇರಿ ಮುಂಭಾಗ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

      ಬಿಜೆಪಿ ಶಾಸಕ ಮಸಾಲ ಜಯರಾಮ್ ದಿ|| ಅನಂತ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ರಾಜಕೀಯ ಚತುರರಾಗಿ ಸ್ನೇಹಮಯವಾದ ವ್ಯಕ್ತಿತ್ವ ಹೊಂದಿದ್ದರು. ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ, ಸಂಸದರಾಗಿ ಎನ್‍ಡಿಎ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡೆ ಯವಜನ ಪ್ರಸ್ತುತ ರಸಗೊಬ್ಬರ ಸಚಿವರಾಗಿ ರೈತ ಪರವಾದ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದರು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದುಂಡರೇಣಕಪ್ಪ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಮುಖಂಡರಾದ ಅರಳಿಕೆರೆಶಿವಯ್ಯ, ಡಿ.ಆರ್.ಬಸವರಾಜು, ಡಾ.ಚೌದ್ರಿನಾಗೇಶ್, ಕೊಂಡಜ್ಜಿವಿಶ್ವನಾಥ್, ವೆಂಕಟರಾಮಯ್ಯ, ರಾಮೇಗೌಡ, ಕೆಂಪೇಗೌಡ, ಹೇಮಚಂದ್ರು, ದಿನೇಶ್, ನವೀನ್ ಬಾಬು, ಚಿದಾನಂದ್, ಅಮಾನಿಕೆರೆ ಮಂಜುನಾಥ್, ಸೋಮಶೇಖರ್, ಅನಿತಾನಂಜುಡಯ್ಯ, ಜಯಶೀಲಾ ಸೇರಿದಂತೆ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.

 

(Visited 18 times, 1 visits today)

Related posts