ಕೊಳಕ ಮಂಡಲ ಹಾವು ನುಂಗಿದ ನಾಗರಹಾವು

ತುಮಕೂರು: 

     ನಾಗರಹಾವೊಂದು ಕೊಳಕ ಮಂಡಲ ಹಾವನ್ನು ನುಂಗಿರುವ ಘಟನೆ ತಾಲ್ಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ.

      ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವರ ಇಟ್ಟಿಗೆ ಗೂಡಿನಲ್ಲಿದ್ದ ಸುಮಾರು 4 ವರ್ಷದ 6 ಅಡಿ ಉದ್ದದ ನಾಗರಹಾವು 4 ಅಡಿ ಉದ್ದದ ಕೊಳಕ ಮಡಲ ಹಾವನ್ನು ನುಂಗಿದೆ. ಹಾವುಗಳನ್ನು ನೋಡಿದ ಇಟ್ಟಿಗೆ ಗೂಡಿನ ಮಾಲೀಕರಾದ ಲಿಂಗರಾಜು ಉರಗ ತಜ್ಞ ಸ್ನೇಕ್ ದಿಲೀಪ್ ರವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

      ಸ್ಥಳಕ್ಕೆ ಧಾವಿಸಿದ ಸ್ನೇಕ್ ದಿಲೀಪ್ ಹಾವನ್ನು ಹಿಡಿದು ದೇವರಾಯನದುರ್ಗದ ಕಾಡಿಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹಾವುಗಳನ್ನು ಕಂಡರೆ ಅವುಗಳನ್ನು ಕೊಲ್ಲದೆ ಉರಗ ತಜ್ಞ ಸ್ನೇಕ್ ದಿಲೀಪ್ ರವರಿಗೆ ಕರೆ ಮಾಡಿದರೆ ಅವರು ಹಾವುಗಳನ್ನು ಹಿಡಿದು ರಕ್ಷಿಸಿ, ಅರಣ್ಯಕ್ಕೆ ಬಿಡುವ ಕೆಲಸ ಮಾಡುತ್ತಾರೆ. ದಿಲೀಪ್ ರವರ ಮೊ:9916790692.

(Visited 5 times, 1 visits today)

Related posts

Leave a Comment