ಕೊವಿಡ್-19 ನಿರ್ವಹಣೆ ರಾಜ್ಯ ಸರಕಾರ ವಿಫಲ – ಮಾಜಿ ಡಿಸಿಎಂ ಆರೋಪ

ಕೊರಟಗೆರೆ:

      ಕೋರಾ ಮತ್ತು ಪುರವಾರ ಜಿಪಂ ಕ್ಷೇತ್ರಕ್ಕೆ ಸರಕಾರದ ಆದೇಶದಂತೆ ಅನುಧಾನ ಹಂಚಿಕೆ ಮಾಡಿ.. ನೀವೇನು ನನ್ನ ಕೊರಟಗೆರೆ ಕ್ಷೇತ್ರಕ್ಕೆ ಏನು ದಾನ ಕೋಡಬೇಡಿ.. ಟಾಸ್ಕ್‍ಪೂರ್ಸ್ ಸಮಿತಿಯಿಂದ ನನ್ನ ಕೈಬಿಟ್ಟಿರುವ ಹಿಂದಿರುವ ಉದ್ದೇಶವೇನು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತುಮಕೂರು ಗ್ರಾಮಾಂತರ ಮತ್ತು ಮಧುಗಿರಿ ತಹಶೀಲ್ದಾರ್, ಇಓ ವಿರುದ್ದ ಕಿಡಿಕಾರಿದರು.

       ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತುಮಕೂರು ಗ್ರಾಮಾಂತರ, ಕೊರಟಗೆರೆ ಹಾಗೂ ಮಧುಗಿರಿ ತಾಲೂಕು ಮಟ್ಟದ ಅಧಿಕಾರಿಗಳ ಕೋವಿದ್-19 ಮತ್ತು ಕುಡಿಯುವ ನೀರು ಪೂರೈಕೆಯ ತುರ್ತುಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

       ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಮಧುಗಿರಿ ತಾಲೂಕು ಬರಪೀಡಿತವೆಂದು ಸರಕಾರ ಘೋಷಣೆ ಮಾಡಿ ಪ್ರತಿ ತಾಲೂಕಿಗೆ 1ಕೋಟಿ ಅನುಧಾನ ಬಿಡುಗಡೆ ಮಾಡಿದೆ. ತುಮಕೂರು ಗ್ರಾಮಾಂತರದ ಕೋರಾ ಮತ್ತು ಮಧುಗಿರಿಯ ಪುರವಾರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಟಾಸ್ಕ್‍ಪೂರ್ಸ್ ಕಮಿಟಿಯ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಎಚ್ಚರಿಕೆ ನೀಡಿದರು.

       ತೋಟಗಾರಿಕೆ, ಕೃಷಿ, ರೇಷ್ಮೆ, ಅರಣ್ಯ, ಸಾಮಾಜಿಕ ಮತ್ತು ತಾಪಂಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಅನುಕೂಲ ಆಗುವಂತೆ ಉದ್ಯೋಗ ಸೃಷ್ಟಿಸಿ ಕಾಮಗಾರಿ ಪ್ರಾರಂಭ ಮಾಡಬೇಕಾಗಿದೆ. ಕೊರಟಗೆರೆ, ಮಧುಗಿರಿ ಮತ್ತು ಪಾವಗಡದ ಗಡಿಭಾಗ ರಕ್ಷಣೆಗೆ ಮಧುಗಿರಿ ಎಸಿ ನೇತೃತ್ವದ ತಂಡ ಹಗಲುರಾತ್ರಿ ಶ್ರಮಿಸಿದೆ. ತುಮಕೂರು ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆಗಾಗಿ ಹಗಲುರಾತ್ರಿ ದುಡಿಯುತ್ತೀರುವ ಕೊರೊನಾ ಸೈನಿಕರಿಗೆ ನಾವೇಲ್ಲರೂ ಗೌರವಿಸಬೇಕಾಗಿದೆ ಎಂದು ಹೇಳಿದರು.

        ಬರಪೀಡಿತ ಕೊರಟಗೆರೆ ತಾಲೂಕಿಗೆ ಸರಕಾರದಿಂದ 1ಕೋಟಿ ಅನುಧಾನ ಬಿಡುಗಡೆ ಆಗಿದೆ. ಗ್ರಾಪಂಯ 14ನೇ ಹಣಕಾಸು ಯೋಜನೆಯ ಹಣ ಕುಡಿಯುವ ನೀರಿಗೆ ಬಳಸಿಕೊಳ್ಳಲು ಅವಕಾಶವಿದೆ. ಕೊರಟಗೆರೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿ ಆಗದಂತೆ ಕರ್ತವ್ಯ ನಿರ್ವಹಣೆ ಮಾಡಬೇಕಾಗಿದೆ. ಕುಡಿಯುವ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಬೇಕಾಗಿದೆ ಎಂದು ಸೂಚನೆ ನೀಡಿದರು.

       ತುರ್ತುಸಭೆಯಲ್ಲಿ ತುಮಕೂರು ಜಿಪಂ ಉಪಕಾರ್ಯದರ್ಶಿ ರಮೇಶ್, ಮಧುಗಿರಿ ಎಸಿ ಡಾ.ನಂದಿನಿದೇವಿ, ತಾಪಂ ಅಧ್ಯಕ್ಷೆ ನಾಜೀಮಾಭೀ, ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು, ಇಓ ಶಿವಪ್ರಕಾಶ್, ತುಮಕೂರು ಗ್ರಾಮಾಂತರ ತಹಶೀಲ್ದಾರ್ ಮೋಹನ್, ಇಓ ಜೈಪಾಲ್, ಮಧುಗಿರಿ ಇಓ ದೊಡ್ಡಸಿದ್ದಪ್ಪ, ಕೃಷಿ ಇಲಾಖೆಯ ನಾಗರಾಜು, ರೇಷ್ಮೆ ಇಲಾಖೆ ಲಕ್ಷ್ಮೀನರಸಯ್ಯ, ಸಿಪಿಐ ನದಾಫ್, ಪಿಎಸೈ ಮುತ್ತುರಾಜು ಸೇರಿದಂತೆ ಇತರರು ಇದ್ದರು.

(Visited 12 times, 1 visits today)

Related posts