ಗಡ್ಡ ರವಿ ಹತ್ಯೆ ಆರೋಪಿ ಮಲ್ಲೇಶ್ ಮೇಲೆ ಫೈರಿಂಗ್

 ತುಮಕೂರು:  

      ತುಮಕೂರಿನ ಮಾಜಿ ಮೇಯರ್ ರವಿ ಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಧುಗಿರಿ ಮಲ್ಲೇಶ್ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

      ತುಮಕೂರು ತಾಲೂಕಿನ ಬೆಳಧರ ಬಳಿ ಪೈರಿಂಗ್ ನಡೆದಿದೆ. ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಮುಖ ಆರೋಪಿಯಾಗಿರುವ ಮಧುಗಿರಿ ಮಲ್ಲೇಶ್ ತಾಲೂಕಿನ‌ ಬೆಳಧರದಲ್ಲಿ‌ ನಸುಕಿನ ಜಾವ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ  ಡಿವೈಎಸ್ಪಿ ನಾಗರಾಜು, ಆರೋಪಿ ಕಾಲಿಗೆ ಶೂಟ್ ಮಾಡಿ ಬಂಧಿಸಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕಾಲಿಗೆ ಗುಂಡೇಟು ತಗುಲಿರುವ ಮಲ್ಲೇಶ್‍‍‍‍‍ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

      ಕಳೆದ ತಿಂಗಳೂ ತುಮಕೂರಿನ ಹೊರವಲಯದಲ್ಲಿ ತುಮಕೂರಿನ ಮಾಜಿ ಮೇಯರ್ ರವಿ ಕುಮಾರ್ ಅಲಿಯಾಸ್ ಗಡ್ಡ ರವಿಯನ್ನು ಬೆಳಗಿನ ಜಾವ ವಾಕಿಂಗ್ ಗೆ ಹೋಗಿದ್ದಾಗ ಹಾಲಿನ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು.ರವಿ ಹತ್ಯೆಯ ಬಳಿಕ ಬೆಟ್ಟ-ಗುಡ್ಡಗಳಲ್ಲಿ ಅಡಗಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ.

(Visited 14 times, 1 visits today)

Related posts

Leave a Comment