ಗಣಿತ ಕ್ಷೇತ್ರದ ಮಹಾನ್ ಸಾಧಕ ಶ್ರೀನಿವಾಸ ರಾಮಾನುಜನ್ – ಸಿ.ಎ.ಸೋಮೇಶ್ವರ್ ಗುಪ್ತ

ತುಮಕೂರು:

       ಗಣಿತ ಎಂದಾಕ್ಷಣ ಕಬ್ಬಿಣದ ಕಡಲೆ. ಅದು ಕಷಷ್ಟ. ಅದು ನಮ್ಮ ತಲೆಗೆ ಹತ್ತುವುದಿಲ್ಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಆದರೆ ಈಗ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಿಸಲೇಬೇಕಾದ ಗಣಿತ ಕ್ಷೇತ್ರದ ಮಹಾನ್ ಸಾಧಕರಾದ ಶ್ರೀನಿವಾಸ ರಾಮಾನುಜನ್ ಎಂದು ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ.ಸೋಮೇಶ್ವರಗುಪ್ತ ಹೇಳಿದರು.

      ಅವರು ತುಮಕೂರಿನ ಎಸ್‍ಐಟಿ ಮಉಖ್ಯರಸ್ತೆಯಲ್ಲಿರುವ ವಾಸವಿ ಪದವಿಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರದ ಮುಖ್ಯಸ್ಥ ಜಿ.ಹನುಮಂತಯ್ಯ ನೇತೃತ್ವದಲ್ಲಿ ನಡೆದ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟಹಬ್ಬದ ಸವಿನೆನಪಿಗಾಗಿ ಎಸ್‍ಎಸ್‍ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಗಣಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ಗಣಿತದ ಬಗ್ಗೆ ಭಯಬಿಟ್ಟು ಶ್ರದ್ಧೆಯಿಂದ ಪಾಠ ಹೇಳಿ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿನಿತ್ಯ ಮನಸ್ಸಳ್ಳ ಮನಸ್ಸಿನಿಂದ ಸಾಕಷ್ಟು ಲೆಕ್ಕಗಳನ್ನು ಮಾಡಿ ನಿಮ್ಮ ಬದುಕಿನ ಲೆಕ್ಕವನ್ನು ಸರಿಪಡಿಸಿಕೊಳ್ಳಿ. ಈ ದಿನ ನಡೆಯುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮತ್ತು ಮುಂಬರುವ ಪರೀಕ್ಷೆಯಲ್ಲಿ ನಿಮಗೆಲ್ಲರಿಗೂ ಯಶಸ್ಸು ಸಿಗಲೆಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ ಆರಾಧ್ಯ ಗಣಿತದಲ್ಲಿ ಮೇರು ವ್ಯಕ್ತಿಯಾದ ಶ್ರೀನಿವಾಸ ರಾಮಾನುಜನ್ ಅವರ ಜೀವನ ಚರಿತ್ರೆಯನ್ನು ಸವಿವರವಾಗಿ ವಿವರಿಸಿದರು. ವೇದಿಕೆಯಲ್ಲಿ ವಾಸವಿ ಕಾಲೇಜಿನ ಆಡಳಿತಾಧಿಕಾರಿ ಮತ್ತು ಹಿರಿಯ ಸಾಹಿತಿ ಎನ್.ನಾಗಪ್ಪ ಹಾಗೂ ಉಪನ್ಯಾಸಕರಾದ ಬೆಂಕಿ ವಸಂತಕುಮಾರ್, ಶಿವಣ್ಣ. ಬಿ.ಎಂ.ನರೇಂದ್ರಬಾಬು, ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದ ಜಿ.ಹನುಮಂತಯ್ಯ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಬೋಧಕರು ಮತ್ತು ಬೋಧಕೇತರರು ಹಾಜರಿದ್ದರು.

(Visited 55 times, 1 visits today)

Related posts