ಗುಬ್ಬಿ : ಆಹಾರ ಹುಡುಕಿ ಬಂದಿದ್ದ 6 ವರ್ಷದ ಚಿರತೆ ಸೆರೆ!!

ಗುಬ್ಬಿ :

      ಆಹಾರ ಹುಡುಕಿ ಬಂದಿದ್ದ ಆರು ವರ್ಷದ ಚಿರತೆ ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾದ ಘಟನೆ ಶನಿವಾರ ಮುಂಜಾನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

      ನಂದಿಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಾಯಿಗಳನ್ನು ಬೇಟೆಯಾಡುತ್ತಿದ್ದ ಆರು ವರ್ಷದ ಗಂಡು ಚಿರತೆಯ ಉಪಟಳಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಎರಡು ದಿನಗಳ ಹಿಂದೆ ರೈತ ಸದಾಶಿವಯ್ಯ ಎಂಬುವವರ ಸಾಕು ನಾಯಿ ಬೇಟೆಯಾಡಿದ್ದ ಚಿರತೆ ಮತ್ತೆ ಆಹಾರ ಹುಡುಕಿ ಬರುವ ಖಚಿತತೆಯಲ್ಲಿ ಅರಣ್ಯ ಇಲಾಖೆ ಬೋನ್ ಅಳವಡಿಸಿತ್ತು.

      ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಂಪೂರ್ಣ ಸಾಥ್ ನೀಡಿದ ಗ್ರಾಮಸ್ಥರು ಗ್ರಾಮದ ಹೊರವಲಯ ಕೊಡಗೀ ಜಮೀನಿನಲ್ಲಿ ಬೋನ್ ಅವಳಡಿಸಲಾಯಿತು. ಮುಂಜಾನೆ ವೇಳೆಗೆ ಬೋನಿನಲ್ಲಿ ಸೆರೆಯಾದ ಚಿರತೆ ಹಸಿವಿನಿಂದ ಕಂಗಾಲಾಗಿತ್ತು. ಚಿರತೆ ನೋಡಲು ಧಾವಿಸಿದ ನೂರಾರು ಗ್ರಾಮಸ್ಥರು ಕೊಂಚ ನಿರಾಳ ಮನಸ್ಸಿನಲ್ಲಿದ್ದರು.

      ಸೆರೆ ಸಿಕ್ಕ ಚಿರತೆಯನ್ನು ಬಂಡಿಪುರ ಅರಣ್ಯದತ್ತ ಸಾಗಿಸಲು ಚಿಂತಸಲಾಯಿತು. ಸ್ಥಳಕ್ಕೆ ಅರಣ್ಯಾಧಿಕಾರಿ ರವಿ ನೇತೃತ್ವದ ತಂಡ ಚಿರತೆಯನ್ನು ಸುರಕ್ಷಿತವಾಗಿ ಸಾಗಿಸುವ ಕೆಲಸ ನಡೆಸಿದರು. ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕಾರ ನೀಡಿದ ನಂದಿಹಳ್ಳಿ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಅಭಿನಂದಿಸಿತು.
 

(Visited 18 times, 1 visits today)

Related posts

Leave a Comment